ಭಾರತದ ಮಡಲಿಗೆ ಸ್ಯಾಫ್

ತಮ್ಮ ಪ್ರಾಬಲ್ಯಯುತ ಪ್ರದರ್ಶನವನ್ನು ಮುಂದುವರಿಸಿದ ಭಾರತ ಫುಟ್ಬಾಲ್ ...
Bala Devi
Bala Devi

ಇಸ್ಲಾಮಬಾದ್: ತಮ್ಮ ಪ್ರಾಬಲ್ಯಯುತ ಪ್ರದರ್ಶನವನ್ನು ಮುಂದುವರಿಸಿದ ಭಾರತ ಫುಟ್ಬಾಲ್  ವನಿತೆಯರ ತಂಡ, ಸ್ಯಾಪ್ ಫುಟ್ಬಾಲ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಹ್ಯಾಟ್ರಿಕ್ ಬಾರಿಗೆ ಗೆದ್ದುಕೊಂಡಿದ್ದಾರೆ.

ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ನೇಪಾಳ ತಂಡವನ್ನು 6-0 ಗೋಲುಗಳಿಂದ ಮಣಿಸಿದ ಭಾರತ ವನಿತೆಯರ ತಂಡ, ಮೂರನೇ ಬಾರಿಗೆ ದಕ್ಷಿಣ ಏಷ್ಯಾ ಫುಟ್ಬಾಲ್ ಒಕ್ಕೂಟ (ಸ್ಯಾಫ್) ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಈ ಮೂಲಕ ಪಾಕಿಸ್ತಾನ ನೆಲದಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ. ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಸ್ಟೈಕರ್ ಬಾಲಾ ದೇವಿ ಪಂದ್ಯದಲ್ಲಿ ನಾಲ್ಕು ಗೋಲು ದಾಖಲಿಸಿದರು.

ಈ ಮೂಲಕ ಬಾಲಾ ದೇವಿ ಪಂದ್ಯಾವಳಿಯಲ್ಲಿ 16 ಗೋಲು ದಾಖಲಿಸುವ ಮೂಲಕ , ಚಾಂಪಿಯನ್‌ಶಿಪ್‌ನಲ್ಲಿ ಅತಿ ಹೆಚ್ಚು ಗೋಲು ದಾಖಲಿಸಿದ ಆಟಗಾರ್ತಿಯಾಗಿದ್ದಾರೆ. ಇನ್ನು  ಕಮಲಾ ಮತ್ತು ಪ್ರಮೇಶ್ವರಿ ದೇವಿ ತಲಾ ಗೋಲು ದಾಖಲಿಸಿದರು. ಗುಂಪು ಹಂತದಲ್ಲಿ ಭಾರತಕ್ಕೆ ತೀವ್ರ ಪೈಪೋಟಿ ನೀಡಿದ್ದ ನೇಪಾಳ ತಂಡ, ಫೈನಲ್ ಪಂದ್ಯದಲ್ಲಿ ಪ್ರಬಲ ಪ್ರತಿರೋಧ ನೀಡಲಿಲ್ಲ. ಈ ಮೂಲಕ ಕಳೆದ 3 ಬಾರಿಯೂ ನೇಪಾಳ, ಭಾರತಕ್ಕೆ ಫೈನಲ್ ಪಂದ್ಯದಲ್ಲಿ ಬಲಿಯಾಗಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com