
ಬೆಂಗಳೂರು: ಕರ್ನಾಟಕದ ಭರವಸೆಯ ಡಿಸ್ಕಸ್ ಥ್ರೋ ಆಟಗಾರ ವಿಕಾಸ್ಗೌಡ, ಒಲಿಂಪಿಕ್ಸ್ಗೂ ಮುನ್ನ ನಡೆಯಲಿರುವ ವಿಶ್ವ ಚಾಂಪಿಯನ್ಶಿಪ್ನಲ್ಲಿ ಉತ್ತಮ ಪ್ರದರ್ಶನ ನೀಡುವುದು ಸದ್ಯದ ಗುರಿ ಎಂದು ತಿಳಿಸಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಕಾಸ್ಗೌಡ, ರಿಯೊ ಒಲಿಂಪಿಕ್ಸ್ಗೆ 2 ವರ್ಷ ಕಾಲಾವಕಾಶವಿದೆ. ಆದರೆ ಸದ್ಯಕ್ಕೆ ಮುಂದಿನ ವರ್ಷ ಬೀಜಿಂಗ್ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಲಾಗಿದೆ. ಆದರೂ ಒಲಿಂಪಿಕ್ಸ್ ಗುರಿ ಮನಸ್ಸಿನಲ್ಲಿದೆ ಎಂದು ತಿಳಿಸಿದರು.
ಏಷ್ಯನ್ ಕ್ರೀಡಾಕೂಟಕ್ಕೆ 10 ದಿನ ಮುನ್ನ ಗಾಯದ ಸಮಸ್ಯೆ ಎದುರಿಸಿದೆ. ಆದರೂ ಕ್ರೀಡಾಕೂಟದಲ್ಲಿ ಭಾಗವಹಿಸುವ ನಿರ್ಧಾರ ತೆಗೆದುಕೊಂಡೆ. ಹಾಗಾಗೀ ಕ್ರೀಡಾಕೂಟದಲ್ಲಿ ನನ್ನ ಪ್ರದರ್ಶನ ತೃಪ್ತಿದಾಯಕವಾಗಿದೆ. ಗಾಯದ ಸಮಸ್ಯೆ ಕ್ರೀಡಾ ವೃತ್ತಿ ಜೀವನದಲ್ಲಿ ಸಹಜ ಅದನ್ನು ನಾವು ನಿಭಾಯಿಸಬೇಕು ಎಂದು ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ. ಈ ಮೂಲಕ ಯುವ ಕ್ರೀಡಾಪಟುಗಳಿಗೆ ಭವಿಷ್ಯದಲ್ಲಿ ಉತ್ತಮ ವಾತಾವರಣ ಕಲ್ಪಿಸಿದೆ ಎಂದರು.
Advertisement