
ನವದೆಹಲಿ: ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮುಡಿಗೆ ಮತ್ತೊಂದು ಗರಿ ಸೇರಿದ್ದು, ಮಕಾವ್ ಗ್ರಾಂಡ್ ಪ್ರಿಕ್ಸ್ ಗೋಲ್ಡ್ ಬ್ಯಾಡ್ಮಿಂಟನ್ ಸಿರೀಸ್ ಅನ್ನು ಗೆದ್ದುಕೊಂಡಿದ್ದಾರೆ.
ಮಕಾವ್‌ನಲ್ಲಿ ಇಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತದ ಪಿವಿ ಸಿಂಧು ದಕ್ಷಿಣ ಕೋರಿಯಾದ ಕಿಮ್ ಹ್ಯೋ ಮಿನ್ ವಿರುದ್ಧ 21-12 21-17 ನೇರ ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಸುಮಾರು 45 ನಿಮಿಷ ನಡೆದ ಈ ಪಂದ್ಯದಲ್ಲಿ 11ನೇ ಶ್ರೇಯಾಂಕಿತ ಆಟಗಾರ್ತಿ ಸಿಂಧು 91ನೇ ಶ್ರೇಯಾಂಕಿತ ಆಟಗಾರ್ತಿ ಕಿಮ್ ಹ್ಯೋ ಮಿನ್‌ರನ್ನು ಸುಲಭವಾಗಿ ಮಣಿಸಿದರು.
ಪಂದ್ಯದ ಆರಂಭದಲ್ಲಿ ಕಿಮ್ ಹ್ಯೋ ಮಿನ್ ಕೊಂಚ ಆಕ್ರಮಣಕಾರಿ ಆಟಕ್ಕೆ ಮೊರೆ ಹೊದರಾದರೂ ಹಿನ್ನಡೆ ಅನುಭವಿಸಿದರು. ಆದರೆ ನಿಧಾನಗತಿಯಲ್ಲಿ ಆಟವನ್ನು ಆರಂಭಿಸಿದ ಸಿಂಧು ಸಮಯ ಕಳೆದಂತೆ ತಮ್ಮ ಬಲವಾದ ರಿವರ್ಸ್‌ನಿಂದಾಗಿ ಆಟದ ಮೇಲೆ ಹಿಡಿತ ಸಾಧಿಸಿದರು. ಅಂತಿಮವಾಗಿ ಸಿಂಧು 21-12 21-17 ನೇರ ಸೆಟ್‌ಗಳ ಅಂತರದಿಂದ ಅಮೋಘ ಜಯ ಸಾಧಿಸಿದರು. ಸಿಂಧು ಪಾಲಿಗೆ ಇದು ಪ್ರಸಕ್ತ ಋತುವಿನ ಮೊದಲ ಪ್ರಶಸ್ತಿಯಾಗಿದ್ದು, ಪ್ರಶಸ್ತಿಯು 1, 20,000 ಯುಎಸ್ ಡಾಲರ್ ಮೊತ್ತವನ್ನು ಒಳಗೊಂಡಿದೆ.
Advertisement