ಮಲೇಷ್ಯಾ ಓಪನ್ ನಲ್ಲಿ ಸೋಲು: ನಂಬರ್ 1 ಸ್ಥಾನ ಕಳೆದ ಕೊಂಡ ಸೈನಾ
ನವದೆಹಲಿ: ಇತ್ತೀಚೆಗಷ್ಟೇ ಮಲೇಷ್ಯನ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಸೆಮಿಫೈನಲ್ ತಲುಪುವ ಮೂಲಕ ನಂಬರ್ 1 ಸ್ಥಾನವನ್ನು ಅಲಂಕರಿಸಿದ್ದ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಸೆಮಿ ಫೈನಲ್ ನಲ್ಲಿ ಸೋಲು ಕಾಣುವ ಮೂಲಕ ಅಗ್ರ ಸ್ಥಾನದಿಂದ ಕೆಳಗಿಳಿದಿದ್ದಾರೆ.
ಇಂದು ನಡೆದ ಮಲೇಷ್ಯನ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಸೆಮಿ ಫೈನಲ್ ಪಂದ್ಯದಲ್ಲಿ ಭಾರತೀಯ ಸೈನಾ ನೆಹ್ವಾಲ್ ಅವರು ಚೀನಾದ ಲೀ ಕ್ಷೆರುಯಿ ವಿರುದ್ಧ 13-21, 21-17, 22-20 ರ ನೇರ ಸೆಟ್ ಗಳಲ್ಲಿ ಸೋಲನ್ನು ಅನುಭವಿಸಿದರು. ಸತತ 1 ಗಂಟೆ 8 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಆರಂಭಿಕ ಹಿನ್ನಡೆ ಅನುಭವಿಸಿದ ಚೀನಾದ ಆಟಗಾರ್ತಿ ಲೀ ಕ್ಷೆರುಯಿ ಅವರು ಆ ಬಳಿಕದ ಸೆಟ್ ಗಳಲ್ಲಿ ತಮ್ಮ ಪಾರುಪತ್ಯ ಮೆರೆದರು. ಭಾರತೀಯ ಆಟಗಾರ್ತಿ ವಿರುದ್ಧ ಒಟ್ಟು 11 ಪಂದ್ಯಗಳನ್ನಾಡಿರುವ ಲೀ ಕ್ಷೆರುಯಿ ಈ ಪಂದ್ಯದ ವಿಜಯದೊಂದಿಗೆ ತಮ್ಮ ಗೆಲುವಿನ ಸಂಖ್ಯೆಯನ್ನು 9ಕ್ಕೆ ಏರಿಸಿಕೊಂಡರು.
ಅಲ್ಲದೆ ತಮ್ಮ ಕೈಯಿಂದ ಜಾರಿ ಹೋಗಿದ್ದ ನಂಬರ್ ಸ್ಥಾನವನ್ನು ಕೂಡ ಕ್ಷೆರುಯಿ ಮತ್ತೆ ತಮ್ಮದಾಗಿಸಿಕೊಂಡರು. ಈ ವಿಜಯದ ಮೂಲಕ ಚೀನಾದ ಆಟಗಾರ್ತಿ ಲೀ ಕ್ಷಿರುಯಿ ಅವರು ತಮ್ಮ ಅಂಕಗಳನ್ನು 80,764ಕ್ಕೆ ಏರಿಕೆ ಮಾಡಿಕೊಂಡು ಅಗ್ರ ಸ್ಥಾನಕ್ಕೇರಿದರು. ಈ ಪಂದ್ಯದ ಸೋಲಿನಿಂದಾಗಿ ಸೈನಾ ನೆಹ್ವಾಲ್ 80,191 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ