ಸುನೀಲ್‍ಗೆ ಗ್ರೀನ್ ಸಿಗ್ನಲ್, ಐಪಿಎಲ್‍ಗೆ ಲಭ್ಯ

ಸಂಶಯಾಸ್ಪದ ಬೌಲಿಂಗ್ ಶೈಲಿಯ ಆರೋಪಕ್ಕೆ ಗುರಿಯಾಗಿ ನಿಷೇಧಕ್ಕೆ ಒಳಗಾಗಿದ್ದ ವೆಸ್ಟ್ ಇಂಡೀಸ್‍ನ ಸ್ಪಿನ್ನರ್ ಸುನೀಲ್ ನಾರಾಯಣ್‍..
ಸುನಿಲ್ ನಾರಾಯಣ್‍ (ಸಂಗ್ರಹ ಚಿತ್ರ)
ಸುನಿಲ್ ನಾರಾಯಣ್‍ (ಸಂಗ್ರಹ ಚಿತ್ರ)

ನವದೆಹಲಿ: ಸಂಶಯಾಸ್ಪದ ಬೌಲಿಂಗ್ ಶೈಲಿಯ ಆರೋಪಕ್ಕೆ ಗುರಿಯಾಗಿ ನಿಷೇಧಕ್ಕೆ ಒಳಗಾಗಿದ್ದ ವೆಸ್ಟ್ ಇಂಡೀಸ್‍ನ ಸ್ಪಿನ್ನರ್ ಸುನೀಲ್ ನಾರಾಯಣ್‍ಗೆ ಈಗ ಬಿಸಿಸಿಐ ಗ್ರೀನ್ ಸಿಗ್ನಲ್ ನೀಡಿದೆ.

ಇದರೊಂದಿಗೆ ಸುನೀಲ್ ಅವರು, ಈ ಬಾರಿ ನಡೆಯಲಿರುವ 8ನೇ ಆವೃತ್ತಿಯ ಐಪಿಎಲ್‍ನಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಮತ್ತೆ ದಾಳಿ ಆರಂಭಿಸಬಹುದು. ಚೆನ್ನೈನಲ್ಲಿರುವ ಐಸಿಸಿ ಪರವಾನಗಿಯ ಶ್ರೀ ರಾಮಚಂದ್ರ ಯುನಿವರ್ಸಿಟಿ ಕೇಂದ್ರದಲ್ಲಿ ತಮ್ಮ ಬೌಲಿಂಗ್ ಶೈಲಿಯ ಪರೀಕ್ಷೆಗೆ ಒಳಗಾಗಿದ್ದ ವೆಸ್ಟ್ ಇಂಡೀಸ್ ಬೌಲರ್, ಈಗ ಅದನ್ನು ಸರಿಪಡಿಸಿಕೊಂಡಿದ್ದಾರೆ ಎಂದು ಭಾರತ ತಂಡದ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ನೇತೃತ್ವದ ಸಮಿತಿ ದೃಢಪಡಿಸಿದೆ.

ಶೈಲಿ ಸುಧಾರಿಸಿಕೊಂಡ ನಂತರ ಹಲವಾರು ವಿಧದ ಪರೀಕ್ಷೆಗಳಿಗೆ ಒಳಗಾಗಿದ್ದ ಸುನೀಲ್, ನಿಯಮಾನುಸಾರ ಶೈಲಿಯಲ್ಲಿ ಬದಲಾವಣೆ ತಂದುಕೊಂಡಿದ್ದಾರೆ. ಪರೀಕ್ಷೆಯ ವೇಳೆ ಎಲ್ಲ ತರಹದ ರೀತಿಯಲ್ಲಿ ಚೆಂಡನ್ನು ಎಸೆದಿದ್ದ ಅವರು, ಸುಧಾರಣೆ ತಂದುಕೊಂಡಿರುವುದು ಖಚಿತಪಟ್ಟಿದೆ. ಹಾಗಾಗಿ, ಅವರು ಐಪಿಎಲ್ ಪಂದ್ಯಗಳಿಗೆ ಲಭ್ಯರಿದ್ದಾರೆ ಎಂದು ಬಿಸಿಸಿಐ ಪ್ರಕಟಣೆ ಹೇಳಿದೆ. ಈ ಮಧ್ಯೆ ಸಂಶಯಾಸ್ಪದ ಶೈಲಿ ಹೊಂದಿರುವ ಬೌಲರ್ ಗಳ ಎಚ್ಚರಿಕೆಯ ಪಟ್ಟಿಯಿಂದಲೂ ಅವರ ಹೆಸರನ್ನು ಕೈಬಿಡುವಂತೆ ಬಿಸಿಸಿಐಗೆ ಸಮಿತಿ ಶಿಫಾರಸು ಮಾಡಿದೆ. ಅಲ್ಲದೆ, ಬಿಸಿಸಿಐ ಸಂಘಟಿಸಲಿರುವ ಯಾವುದೇ ಟೂರ್ನಿಗಳಲ್ಲೂ ಅವರು ಆಡಲು ಅರ್ಹರಾಗಿದ್ದಾರೆ ಎಂದು ಹೇಳಿದೆ.

ಇದರೊಂದಿಗೆ ವೆಸ್ಟ್ ಇಂಡೀಸ್‍ನ ಸ್ಪಿನ್ನರ್, ಐಪಿಎಲ್ ಉದ್ಘಾಟನೆ ಪಂದ್ಯದಲ್ಲೇ ಕೋಲ್ಕತಾ ನೈಟ್ ರೈಡರ್ಸ್ ತಂಡ ಪ್ರತಿನಿಧಿಸಬಹುದಾಗಿದೆ. ಕೆಕೆಆರ್ ತಂಡ ಏಪ್ರಿಲ್ 8ರಂದು ಈಡನ್ ಗಾರ್ಡನ್ ಮೈದಾನದಲ್ಲಿ ಆಡಲಾಗುವ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಕಳೆದ ಅಕ್ಟೋಬರ್‍ನಲ್ಲಿ ಚಾಂಪಿಯನ್ಸ್ ಲೀಗ್ ಟಿ-20 ಟೂರ್ನಿಯ ಸಂದರ್ಭದಲ್ಲಿ ಸಂದೇಹಾಸ್ಪದ ಬೌಲಿಂಗ್ ಆರೋಪಕ್ಕೆ ಒಳಗಾಗಿದ್ದ ಸುನೀಲ್ ನಾರಾಯಣ್, ಸ್ಪರ್ಧಾ ಅಖಾಡ ತೊರೆದು ಶೈಲಿ ಸರಿಪಡಿಸಿಕೊಳ್ಳುವತ್ತ ಗಮನ ಹರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com