ಸೆರೆನಾಗೆ "ಮಿಯಾಮಿ" ಮುಕುಟ

ವಿಶ್ವದ ನಂಬರ್ ಒನ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಮಿಯಾಮಿ ಓಪನ್ ಡಬ್ಲ್ಯುಟಿಎ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ...
ಸೆರೆನಾ ವಿಲಿಯಮ್ಸ್ (ಚಿತ್ರಕೃಪೆ: ಯುಎಸ್ ಎಟುಡೇ ಸ್ಪೋರ್ಟ್ಸ್)
ಸೆರೆನಾ ವಿಲಿಯಮ್ಸ್ (ಚಿತ್ರಕೃಪೆ: ಯುಎಸ್ ಎಟುಡೇ ಸ್ಪೋರ್ಟ್ಸ್)
Updated on

ಮಿಯಾಮಿ: ವಿಶ್ವದ ನಂಬರ್ ಒನ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಮಿಯಾಮಿ ಓಪನ್ ಡಬ್ಲ್ಯುಟಿಎ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಶನಿವಾರ ತಡರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಅಮೆರಿಕದ ಸೂಪರ್ ಸ್ಟಾರ್ ಸೆರೆನಾ ವಿಲಿಯಮ್ಸ್ 6-2, 6-0  ನೇರ ಸೆಟ್‍ಗಳಿಂದ ಸ್ಪೇನಿನ ಕಾರ್ಲಾ ಸೂರೆಜ್ ನವಾರೊ ಅವರನ್ನು ಪರಾಭವಗೊಳಿಸಿ ಟ್ರೋಫಿಗೆ ಭಾಜನರಾದರು. ಕೇವಲ 56 ನಿಮಿಷಗಳ ಆಟದಲ್ಲಿಯೇ ಸೆರೆನಾಗೆ ಚಾಂಪಿಯನ್ ಪಟ್ಟ ಒಲಿದುಬಂದಿತು. ಈ ಮುನ್ನ 2002ರಿಂದ 2004ರ ವರೆಗೆ ಸತತ ಮೂರು ಬಾರಿ ಮಿಯಾಮಿ ಓಪನ್ ಪ್ರಶಸ್ತಿ ಗೆದ್ದಿದ್ದ ಅಮೆರಿಕದ ಆಟಗಾರ್ತಿಯು 2007ರಿಂದ 2008ರ ವರೆಗೆ ಒಂದರ ಹಿಂದೆ ಒಂದರಂತೆ ಪ್ರಶಸ್ತಿ ಜಯಿಸಿ ಅಪಾರ ಸಾಧನೆ ಮಾಡಿದ್ದರು.

ಇದರೊಂದಿಗೆ ಅವರು, ಈ ಟೂರ್ನಿಯ ಮುಕ್ತ ಯುಗದಲ್ಲಿ ಕನಿಷ್ಠ ಎಂಟು ಬಾರಿ ಪ್ರಶಸ್ತಿಗಳನ್ನು ಗೆದ್ದ ಸ್ಟೆಫಿ ಗ್ರಾಫ್, ಮಾರ್ಟಿನಾ ನವ್ರಾಟಿಲೊವಾ ಮತ್ತು ಕ್ರಿಸ್ ಎವರ್ಟ್ ಅವರನ್ನು ಸರಿಗಟ್ಟಿದರು. ಇದು ಸೆರೆನಾಗೆ ಜೀವನದ 66ನೇ ಡಬ್ಲ್ಯುಟಿಎ ಪ್ರಶಸ್ತಿಯಾಗಿದೆ. ಮತ್ತೊಂದೆಡೆ ಜೀವನದ ಮೊದಲ ದೊಡ್ಡ ಫೈನಲ್ ಪಂದ್ಯವಾಡಿದ ವಿಶ್ವದ 12ನೇ ಶ್ರೇಯಾಂಕಿತೆ ಸೂರೆಜ್ ನವಾರೊಗೆ ಪ್ರಶಸ್ತಿ ಗೆದ್ದುಕೊಳ್ಳಲು ಸಾಧ್ಯವಾಗದೇ, ರನ್ನರ್ ಅಪ್ ಗೌರವಕ್ಕೆ ಸಮಾಧಾನಗೊಳ್ಳಬೇಕಾಯಿತು. ಎರಡೂ ಸೆಟ್‍ಗಳ ಹೋರಾಟದಲ್ಲಿ ಸೆರೆನಾರ ಪ್ರಭಾವಶಾಲಿ ಹೊಡೆತಗಳ ಮುಂದೆ ಸ್ಪೇನ್ ಆಟಗಾರ್ತಿಯ ಬಳಿ ಉತ್ತರವೇ ಇರಲಿಲ್ಲ. ಮೊದಲ ಸೆಟ್‍ನಲ್ಲಿ ಎರಡು ಗೇಮ್ ಗಳನ್ನು ಮಾತ್ರ ಗೆದ್ದುಕೊಂಡ ಸೂರೆಜ್, ಎರಡನೇ ಸೆಟ್‍ನಲ್ಲಿ ಒಂದೂ ಗೇಮ್ ಗೆಲ್ಲಲಾಗದೇ, ಎದುರಾಳಿಗೆ ಸುಲಭವಾಗಿ ತಲೆಬಾಗಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com