ಉತ್ತಪ್ಪಗೆ ಗಂಭೀರ್ ಬೆಂಬಲ

ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಕಳೆದ ಶನಿವಾರ ನಡೆದ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ...
ರಾಬಿನ್ ಉತ್ತಪ್ಪ, ಸರ್ಫರಾಜ್ ಖಾನ್
ರಾಬಿನ್ ಉತ್ತಪ್ಪ, ಸರ್ಫರಾಜ್ ಖಾನ್

ಕೋಲ್ಕತಾ: ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಕಳೆದ ಶನಿವಾರ ನಡೆದ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಣದ ಪಂದ್ಯದಲ್ಲಿ ತಮ್ಮ ಆಟಗಾರ ರಾಬಿನ್ ಉತ್ತಪ್ಪ, ಎದುರಾಳಿ ತಂಡದ ಸರ್ಫರಾಜ್ ಖಾನ್ ಮೇಲೆ ಕೈ ಮಾಡಿದ್ದರು ಎನ್ನಲಾದ ಘಟನೆಯನ್ನು ಆತಿಥೇಯ ನಾಯಕ ಗೌತಮ್ ಗಂಭೀರ್ ಸಮರ್ಥಿಸಿಕೊಂಡಿದ್ದಾರೆ.

ಪಂದ್ಯದ ಬಿಗುವಿನ ಸಂದರ್ಭದಲ್ಲಿ ಆಟಗಾರರ ನಡುವೆ ಮಾತಿನ ಚಕಮಕಿಯ ಘಟನೆಗಳು ಸಂಭವಿಸುವುದು ಸಹಜ ಎಂದು ಹೇಳುವ ಮೂಲಕ ಕೆಕೆಆರ್ ತಂಡದ ನಾಯಕ ಗೌತಮ್ ಗಂಭೀರ್, ತಂಡದ ಸಹ ಆಟಗಾರ ರಾಬಿನ್ ಉತ್ತಪ್ಪ ಅವರನ್ನು ಸಮರ್ಥಿಸಿಕೊಂಡಿದ್ದಾರೆ.

ಕೆಲವು ವರದಿ ಪ್ರಕಾರ ಪಂದ್ಯದ ನಂತರ ಸೈಡ್ ಸ್ಕ್ರೀನ್ ಹಿಂದೆ ರಾಬಿನ್ ಉತ್ತಪ್ಪ, ಸರ್ಫರಾಜ್ ಖಾನ್ ಜೆರ್ಸಿಯ ಕುತ್ತಿಗೆ ಪಟ್ಟಿ ಹಿಡಿದರು. ಈ ವೇಳೆ ಆರ್‍ಸಿಬಿ ತಂಡದ ಎಬಿ ಡಿವಿಲಿಯರ್ಸ್ ಹಾಗೂ ಅಶೋಕ್ ದಿಂಡಾ ಮಧ್ಯ ಪ್ರವೇಶಿಸಿ ಈ ಇಬ್ಬರು ಆಟಗಾರರನ್ನು ಬಿಡಿಸಿದ್ದಾಗಿ ತಿಳಿದು ಬಂದಿದೆ. ನಂತರ ಪಂದ್ಯದ ರೆಫರಿ ಜಾವಗಲ್ ಶ್ರೀನಾಥ್, ಉತ್ತಪ್ಪ ಹಾಗೂ ಕೆಕೆಆರ್ ಸಿಇಒ ಅವರಿಗೆ ಸಮನ್ಸ್ ಜಾರಿ ಮಾಡಿದ್ದರು. ಅಲ್ಲದೆ ಈ ಬಗೆಗಿನ ಚರ್ಚೆಗೆ ಡಿವಿಲಿಯರ್ಸ್ ಸಹ ಭಾಗಿಯಾಗಿದ್ದರು ಎಂದು ತಿಳಿಸಲಾಗಿತ್ತು. ಆದರೆ ಈ ರೀತಿಯಾದ ಪ್ರಕರಣದ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ರೆಫರಿ ಜಾವಗಲ್ ಶ್ರೀನಾಥ್ ಹೇಳಿದ್ದರು.

ಇದು ದೊಡ್ಡ ವಿಷಯವಲ್ಲ. ಪಂದ್ಯ ರೋಚಕ ಹೋರಾಟದ ಘಟ್ಟದಲ್ಲಿದ್ದಾಗ ಈ ರೀತಿಯಾದ ಘಟನೆಗಳು ಸಾಕಷ್ಟು ಬಾರಿ ಸಂಭವಿಸಿದ ಉದಾಹರಣೆಗಳಿಗೆ. ಬಹುತೇಕ ಆಟಗಾರರಿಗೆ ಇದರ ಅನುಭವವಾಗಿರುತ್ತದೆ. ಪಂದ್ಯದ ಬಿಗುವಿನ ಪರಿಸ್ಥಿತಿಗಳಲ್ಲಿ ಇಂತಹ ಪ್ರಕರಣಗಳು ಸಂಭವಿಸುವುದು ಸಹಜ. ಈ ವಿಚಾರವನ್ನು ಮಾಧ್ಯಮಗಳು ಅನಾವಶ್ಯಕವಾಗಿ ದೊಡ್ಡದಾಗಿ ಬಿಂಬಿಸಬಾರದು ಎಂದು ಗಂಭೀರ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com