
ಇಸ್ಲಾಮಾಬಾದ್: ಮುಂದಿನ ವರ್ಷ ನಡೆಯಲಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ಏಕದಿನ ಮಾದರಿಯಿಂದ ಟಿ-20 ಮಾದರಿಗೆ ಬದಲಾಗಲಿದೆ.
ಈ ಟೂರ್ನಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಟಿ-20 ಮಾದರಿಯಲ್ಲಿ ಆಯೋಜಿಸಲಾಗುತ್ತಿದ್ದು, ಈ ನಿರ್ಧಾರವನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಯ್ಯದ್ ಅಶ್ರಫುಲ್ ಹಕ್ ಖಚಿತಪಡಿಸಿದ್ದಾರೆ. ಟೂರ್ನಿಯಲ್ಲಿ ಪ್ರಮುಖ ತಂಡಗಳ ಜತೆಗೆ ಎರಡು ಸಹಾಯಕ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ ಎಂದು ತಿಳಿಸಿದರು.
ಈವೆರೆಗೂ ಏಷ್ಯಾಕಪ್ ಟೂರ್ನಿಯನ್ನು 2 ಬಾರಿ ಟೆಸ್ಟ್ ಮಾದರಿಯಲ್ಲಿ ಹಾಗೂ 12 ಬಾರಿ ಏಕದಿನ ಮಾದರಿಯಲ್ಲಿ ಆಯೋಜಿಸಲಾಗಿದೆ. ಮುಂದಿನ ವರ್ಷ ಟಿ-20 ವಿಶ್ವಕಪ್ ಟೂರ್ನಿ ನಡೆಯಲಿದ್ದು, ಏಷ್ಯಾಕಪ್ ಟೂರ್ನಿಯೂ ಟಿ-20 ಮಾದರಿಯಲ್ಲಿ ಫೆಬ್ರವರಿ ಹಾಗೂ ಮಾರ್ಚ್‍ನಲ್ಲಿ ನಡೆಯಲಿದೆ. ಈ ಟೂರ್ನಿಯನ್ನು ಯಾವ ದೇಶ ಆತಿಥ್ಯ ವಹಿಸಲಿದೆ ಎಂಬುದು ಇನ್ನು ನಿರ್ಧಾರವಾಗಿಲ್ಲ ಎಂದು ಹಕ್ ತಿಳಿಸಿದರು.
Advertisement