ಮತ್ತೊಂದು ಪರೀಕ್ಷೆಗೆ ಮುಂಬೈ ಸಜ್ಜು

ಸತತ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಎಂಟನೇ ಆವೃತ್ತಿಯ ಟೂರ್ನಿಯಲ್ಲಿ ಪ್ರಬಲ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಗೆಲವಿನ ಲಯದಲ್ಲಿರುವ ಕಿಂಗ್ಸ್ ದಾಳಿಯನ್ನು ಒತ್ತಡದಲ್ಲಿರುವ ಮುಂಬೈ ಹೇಗೆ...
ಮತ್ತೊಂದು ಪರೀಕ್ಷೆಗೆ ಮುಂಬೈ ಸಜ್ಜು
ಮತ್ತೊಂದು ಪರೀಕ್ಷೆಗೆ ಮುಂಬೈ ಸಜ್ಜು
Updated on

ಮುಂಬೈ: ಸತತ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಎಂಟನೇ ಆವೃತ್ತಿಯ ಟೂರ್ನಿಯಲ್ಲಿ ಪ್ರಬಲ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಗೆಲವಿನ ಲಯದಲ್ಲಿರುವ ಕಿಂಗ್ಸ್ ದಾಳಿಯನ್ನು ಒತ್ತಡದಲ್ಲಿರುವ ಮುಂಬೈ ಹೇಗೆ ಎದುರಿಸಲಿದೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ತವರಿನ ಅಂಗಣದಲ್ಲಿ ಆಡುತ್ತಿದೆಯಾದರೂ, ಚೆನ್ನೈ ಸೂಪರ್ ಕಿಂಗ್ಸ್ ಗೆಲವಿನ ಫೇವರಿಟ್ ತಂಡವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ತವರಲ್ಲೇ ಈವರೆಗೆ ಎರಡು ಪಂದ್ಯಗಳನ್ನಾಡಿ ಗೆಲವು ದಾಖಲಿಸಿದೆ. ಇದೀಗ ಮುಂಬೈ ಇಂಡಿಯನ್ಸ್ ತಂಡವನ್ನು ಆದರದೇ ನೆಲದಲ್ಲಿ ಎದುರಿಸಲು ಸಜ್ಜಾಗಿದೆ. ಮುಂಬೈ ಇಂಡಿಯನ್ಸ್ ಆಡಿರುವ ಮೂರು ಪಂದ್ಯಗಳ ಪೈಕಿ ಎರಡು ಪಂದ್ಯವನ್ನು ಹೊರ ಅಂಗಣದಲ್ಲಿ ಮತ್ತೊಂದು ಪಂದ್ಯವನ್ನು ತವರಿನ ಅಂಗಣದಲ್ಲಿ ಆಡಿದೆ.ಈ ಮೂರೂ ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಕಡೆಯ ಸ್ಥಾನಕ್ಕೆ ಕುಸಿದಿದೆ. ಹಾಗಾಗಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ತಂಡ ಈ ಪಂದ್ಯದಲ್ಲಿ ಸಾಕಷ್ಟು ಒತ್ತಡದಲ್ಲಿ ಕಣಕ್ಕಿಳಿಯಲಿದೆ.

ನಿಯಂತ್ರಣ ಕಾಣದ ಮುಂಬೈ:
ಮುಂಬೈ ಇಂಡಿಯನ್ಸ್ ತಂಡದಲ್ಲಿ ಎಂಥಾ ಒತ್ತಡಲ್ಲೂ ತಂಡವನ್ನು ಗೆಲ್ಲಿಸಬಲ್ಲ ಆಟಗಾರರಿದ್ದಾರೆ. ಆದರೂ, ಗೆಲವಿನ ಹಾದಿಯಲ್ಲಿ ಸಾಗಲು ಮುಂಬೈಗೆ ಸಾಧ್ಯವಾಗಿಲ್ಲ. ತಂಡದಲ್ಲಿ ಸಮತೋಲಿತ ಆಟಗಾರರ ಸಂಯೋಜನೆಯ ಕೊರತೆ ಎದ್ದು ಕಾಣುತ್ತಿದೆ. ಈ ಬಾರಿ ಮುಂಬೈ ಆಡಿರುವ ಎಲ್ಲಾ ಪಂದ್ಯಗಳಲ್ಲೂ ಸಂಘಟಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಬ್ಯಾಟಿಂಗ್ ವಿ ವಿಭಾಗವಂತೂ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದ್ದು, ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.

ಬ್ಯಾಟಿಂಗ್ ವಿಭಾಗದಲ್ಲಿ ಅಗ್ರ ಕ್ರಮಾಂಕದ ದಾಂಡಿಗರು ತಂಡಕ್ಕೆ ಉತ್ತಮ ಆರಂಭ ನೀಡುತ್ತಿಲ್ಲ. ಬ್ಯಾಟಿಂಗ್ ವಿಭಾಗದ ವೈಫಲ್ಯದಿಂದ ಬೌಲಿಂಗ್ ವಿಭಾಗದ ಮೇಲೆ ಒತ್ತಡ ಹೆಚ್ಚಿದ್ದು, ಬೌಲರ್‍ಗಳು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಉತ್ತಮ ಲಯದಲ್ಲಿ ಸಿಎಸ್‍ಕೆ: ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದು ಆತ್ಮ ವಿಶ್ವಾಸದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಗೆಲವಿನ ಹಾದಿಯಲ್ಲಿ ಮುಂದುವರಿಯಲು ಎದುರು ನೋಡುತ್ತಿದೆ.

ಅಗ್ರಕ್ರಮಾಂಕದ ಬ್ಯಾಟಿಂಗ್‍ನಿಂದ ಕೆಳ ಕ್ರಮಾಂಕದವರೆಗೆ, ಬೌಲಿಂಗ್ ವಿಭಾಗದಲ್ಲಿ ಶಿಸ್ತು ಬದಟಛಿ ಮಧ್ಯಮ ವೇಗಿಗಳು ಹಾಗೂ ಪರಿಣಾಮಕಾರಿ ಸ್ಪಿನ್ನರ್‍ಗಳನ್ನು ಹೊಂದಿದ್ದು, ಸಮತೋಲಿತ ತಂಡವಾಗಿ ಬಿಂಬಿತವಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಈಶ್ವರ್ ಪಾಂಡೆ ಹೊರತಾಗಿ ಉಳಿದ 10 ಆಟಗಾರರು ಅಂತಾರಾಷ್ಟ್ರೀಯ ಆಟಗಾರರಾಗಿದ್ದಾರೆ. ಹಾಗಾಗಿ ತಂಡ ಹೆಚ್ಚು ಅನುಭವಿ ಆಟಗಾರರನ್ನು ಹೊಂದಿದೆ. ಬ್ಯಾಟಿಂಗ್ ವಿಭಾಗದಲ್ಲಿ ಬ್ರೆಂಡನ್ ಮೆಕಲಂ ಮತ್ತು ಡ್ವೈನ್ ಸ್ಮಿತ್, ಸುರೇಶ್ ರೈನಾ, ಫಫ್ ಡುಪ್ಲೆಸಿಸ್, ಮಹೇಂದ್ರ ಸಿಂಗ್ ಧೋನಿ ಇದ್ದಾರೆ. ಆಲ್ರೌಂಡರ್ ಜವಾಬ್ದಾರಿಯನ್ನು ಡ್ವೈನ್ ಬ್ರಾವೊ, ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜಾ ವಹಿಸಿಕೊಂಡಿದ್ದಾರೆ. ಬೌಲಿಂಗ್‍ನಲ್ಲಿ ಆಶಿಶ್ ನೆಹ್ರಾ, ಈಶ್ವರ್ ಪಾಂಡೆ ಹಾಗೂ ಮೋಹಿತ್ ಶರ್ಮಾ ಪರಿಣಾಮಕಾರಿಯಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com