ಬಿಎಫ್ ಸಿ ಜಯದ ಕೇಕೆ

ಪಂದ್ಯದ ಮೊದಲನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಗೋಲು ದಾಖಲಿಸಿದ ಬೆಂಗಳೂರು ಎಫ್ ಸಿ, ಐ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಆತಿಥೇಯ ಪುಣೆ ಎಫ್ ಸಿ ವಿರುದ್ಧ ಅರ್ಹ ಗೆಲವು ದಾಖಲಿಸಿದೆ...
ಬಿಎಫ್ ಸಿ ಜಯದ ಕೇಕೆ
ಬಿಎಫ್ ಸಿ ಜಯದ ಕೇಕೆ

ಪುಣೆ: ಪಂದ್ಯದ ಮೊದಲನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಗೋಲು ದಾಖಲಿಸಿದ ಬೆಂಗಳೂರು ಎಫ್ ಸಿ, ಐ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಆತಿಥೇಯ ಪುಣೆ ಎಫ್ ಸಿ ವಿರುದ್ಧ ಅರ್ಹ ಗೆಲವು ದಾಖಲಿಸಿದೆ.

ಶ್ರೀ ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ 2-0 ಗೋಲುಗಳ ಅಂತರದಲ್ಲಿ ಪುಣೆ ಎಫ್ ಸಿ  ವಿರುದ್ಧ ಜಯ ಸಾಧಿಸಿತು. ಈ ಮೂಲಕ ಬಿಎಫ್ ಸಿ 25 ಅಂಕಗಳೊಂದಿಗೆ 3 ನೇ ಸ್ಥಾನಕ್ಕೇರಿದೆ.

ಈ ಬಾರಿ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿರುವ ಬೆಂಗಳೂರು ಎಫ್ ಸಿ ಟೂರ್ನಿಯ ಆರಂಭದಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಈ ಪಂದ್ಯಕ್ಕೂ ಮೊದಲು 13 ಪಂದ್ಯಗಳಲ್ಲಿ 6 ಗೆಲುವು 4 ಡ್ರಾ ಹಾಗೂ 3 ರಲ್ಲಿ  ಸೋಲನುಭವಿಸಿ 22 ಅಂಕಗಳನ್ನು ಸಂಪಾದಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡಿತ್ತು. ಪುಣೆ ಎಫ್ ಸಿ ತಂಡ 14 ಪದ್ಯಗಳಲ್ಲಿ  6 ಜಯ, 5 ಡ್ರಾ, 3 ಸೋಲಿನಿಂದ 23 ಅಂಕ  ಸಂಪಾದಿಸಿ ಮೂರನೇ ಸ್ಥಾನದಲ್ಲಿತ್ತು. ಅಲ್ಲದೆ ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಪುಣೆ ಎಫ್ ಸಿ ಗೆಲವಿನ ಫೇವರಿಟ್ ತಂಡ  ವಾಗಿತ್ತು. ಆದರೆ, ಪಂದ್ಯದಲ್ಲಿ ಹಾಲಿ ಚಾಂಪಿಯನ್ನರ ಸಂಘಟಿತ ಪ್ರದರ್ಶನದ ಮುಂದೆ ಮಂಕಾಯಿತು.

ಅದ್ಭುತ ಆರಂಭ: ಪಂದ್ಯದಲ್ಲಿ ಗೆಲವು ದಾಖಲಿಸಲೇಬೇಕು ಎಂಬ ಹಠದೊಂದಿಗೆ ಕಣಕ್ಕಿಳಿದ ಆ್ಯಶ್ಲೆ ವೆಸ್ಟ್ ವುಡ್ ಮಾರ್ಗದರ್ಶನದ ಬಿಎಫ್ ಸಿ,  ಪಂದ್ಯದ ಮೊದಲ ನಿಮಿಷದಲ್ಲೇ ಗೋಲು ದಾಖಲಿಸುವ ಮೂಲಕ ಆಕರ್ಷಕ ಆರಂಭ ಪಡೆಯಿತು. ವಿನೀತ್ ನೀಡಿದ ಪಾಸ್ ಅನ್ನು ಪಡೆದ ಯುಗೆನ್ಸನ್  ಗೋಲಿನತ್ತ ಸಾಗಿ ಚೆಂಡನ್ನು ಶಂಕರ್ ಸಂಪಂಗಿರಾಜ್ ಗೆ ಸೇರಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ತಂಡ ಬೇಗನೆ  ಗೋಲಿನ ಖಾತೆ ತೆರೆಯಿತು.

ನಂತರದ ಹಂತದಲ್ಲೂ ಸುನೀಲ್ ಛೆಟ್ರಿ ಬಳಗ ಚುರುಕಿನ ಆಟ ಪ್ರದರ್ಶಿಸಿತು. 21ನೇ ಹಾಗೂ  34ನೇ ನಿಮಿಷದಲ್ಲಿ ಸ್ಟ್ರೈಕರ್ ಸೀನ್ ರೂನಿ ಗೋಲು  ದಾಖಲಿಸುವ ಪ್ರಯತ್ನ ನಡೆಸಿದರಾದರೂ ಕೂದಲೆಳೆಯ ಅಂತರದಲ್ಲಿ ಅವಕಾಶ ಕೈತಪ್ಪಿತು. ಆದರೆ ಮೊದಲ ಅವ„ ಮುಕ್ತಾಯಕ್ಕೂ ಮುನ್ನ ಅಂದರೆ,  44ನೇ ನಿಮಿಷದಲ್ಲಿ ಸಿ.ಕೆ ವಿನೀತ್ ಸಹ ಆಟಗಾರ ಬೈಕೊ ಜತೆಗೆ ಉತ್ತಮ ಹೊಂದಾಣಿಕೆಯ ಪಾಸ್‍ಗಳನ್ನು ನೀಡುತ್ತಾ ಎದುರಾಳಿ ರಕ್ಷಣಾತ್ಮಕ  ವಿಭಾಗವನ್ನು ಮೆಟ್ಟಿನಿಂತರು. ಈ ವೇಳೆ ವಿನೀತ್ ಗೋಲು ದಾಖಲಿಸಿ ತಂಡದ ಮುನ್ನಡೆ ಹೆಚ್ಚಿಸಿದರು. ಇದರೊಂದಿಗೆ ಪಂದ್ಯದ ಮೊದಲಾರ್ಧದಲ್ಲಿ ಬಿಎಫ್ ಸಿ 2-0 ಮುನ್ನಡೆ ಪಡೆದುಕೊಂಡಿತು.

ಪಂದ್ಯದ ದ್ವಿತಿಯಾರ್ಧದಲ್ಲಿ ಸುನೀಲ್ ಛೆಟ್ರಿ 54ನೇ ನಿಮಿಷದಲ್ಲಿ ರೂನಿ ಅವರ ಬದಲಿ ಆಟಗಾರನಾಗಿ ಕಣಕ್ಕಿಳಿದರು. 65ನೇ ನಿಮಿಷದಲ್ಲಿ ಸುನೀಲ್  ಛೆಟ್ರಿ ಹಾಗೂ ಯುಗೆನ್ಸನ್ ಗೋಲು ದಾಖಲಿಸುವ ಸನಿಹಕ್ಕೆ ಸಾಗಿದ್ದರು. ಆದರೆ, ಎದುರಾಳಿ ತಂಡದ ಮಿಡ್ ಫೀಲ್ಡರ್ ಅಮ್ರಿಂದರ್ ಈ ಅವಕಾಶವನ್ನು ತಡೆದರು. ಅಂತಿಮದವರೆಗೂ ಪುಣೆ ವಿರುದ್ಧ  ಪ್ರಾಬಲ್ಯ ಮೆರೆದ ಬಿಎಫ್ ಸಿ ಗೆಲವಿನ ನಗೆ ಬೀರಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com