ನೈಟ್ ರೈಡ್‍ನಲ್ಲಿ ಮಿನುಗುವುದೇ ಸನ್?

ಗೆಲವಿನ ಅಲೆಯಲ್ಲಿ ತೇಲುತ್ತಿರುವ ಕೋಲ್ಕತಾ ನೈಟ್‍ರೈಡರ್ಸ್ ತಂಡ ಐಪಿಎಲ್ 8ನೇ ಆವೃತ್ತಿಯಲ್ಲಿ ತಮ್ಮ ಗೆಲವಿನ ಪಯಣ ಮುಂದುವರಿಸಲು ಎದುರು ನೋಡುತ್ತಿದ್ದು, ಮುಂದಿನ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ...
ನೈಟ್ ರೈಡ್‍ನಲ್ಲಿ ಮಿನುಗುವುದೇ ಸನ್ ರೈಸರ್ಸ್ ಹೈದರಾಬಾದ್ ? (ಪೋಟೋ ಕೃಪೆ: ಬಿಸಿಸಿಐ)
ನೈಟ್ ರೈಡ್‍ನಲ್ಲಿ ಮಿನುಗುವುದೇ ಸನ್ ರೈಸರ್ಸ್ ಹೈದರಾಬಾದ್ ? (ಪೋಟೋ ಕೃಪೆ: ಬಿಸಿಸಿಐ)
Updated on: 

ವಿಶಾಖಪಟ್ಟಣ: ಗೆಲವಿನ ಅಲೆಯಲ್ಲಿ ತೇಲುತ್ತಿರುವ ಕೋಲ್ಕತಾ ನೈಟ್‍ರೈಡರ್ಸ್ ತಂಡ ಐಪಿಎಲ್ 8ನೇ ಆವೃತ್ತಿಯಲ್ಲಿ ತಮ್ಮ ಗೆಲವಿನ ಪಯಣ ಮುಂದುವರಿಸಲು  ಎದುರು ನೋಡುತ್ತಿದ್ದು, ಮುಂದಿನ  ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.

ಬುಧವಾರ ನಡೆಯಲಿರುವ ಪಂದ್ಯದಲ್ಲಿ ಸನ್ ರೈಸರ್ಸ್  ಹೈದರಾಬಾದ್ ತಂಡ ಗೆಲವು ದಾಖಲಿಸಬೇಕಾದ ಒತ್ತಡದಲ್ಲಿದೆ. ಆಡಿರುವ ನಾಲ್ಕು  ಪಂದ್ಯಗಳ ಪೈಕಿ ಸನ್ ರೈಸರ್ಸ್ ಹೈದರಾಬಾದ್, ಬೆಂಗಳೂರು ತಂಡದ ವಿರುದ್ಧ ಜಯ ಸಾಧಿಸಿದ್ದರೆ, 3 ಪಂದ್ಯಗಳಲ್ಲಿ ಸೋಲನುಭವಿಸಿದೆ.

ಹಾಗಾಗಿ ಗೆಲವಿನ ಲಯಕ್ಕೆ ಮರಳಬೇಕಾದ ಅನಿವಾರ್ಯತೆ ಯಲ್ಲಿದೆ. ಕೆಕೆಆರ್ ತಂಡ ಆರ್‍ಸಿಬಿ ವಿರುದ್ಧದ ಪಂದ್ಯ ಹೊರತುಪಡಿಸಿ ಉಳಿದ  ಪಂದ್ಯಗಳಲ್ಲಿ ಜಯಗಳಿಸಿದೆ. ಹಾಗಾಗಿ, ಕೆಕೆಆರ್ ಫೇವರಿಟ್ ಎನಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com