ಕ್ರಿಕೆಟಿಗ ಜಾಂಟಿ ರೋಡ್ಸ್ ಮಗಳ ಹೆಸರು 'ಇಂಡಿಯಾ'

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ -ಮೆಲೆನೀ ಜಿಯಾನೀ ದಂಪತಿಗಳಿಗೆ ಗುರುವಾರ ಹೆಣ್ಣು ಮಗು ಹುಟ್ಟಿದೆ...
ಜಾಂಟಿ ರೋಡ್ಸ್
ಜಾಂಟಿ ರೋಡ್ಸ್

ಮುಂಬೈ: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ -ಮೆಲೆನೀ ಜಿಯಾನೀ ದಂಪತಿಗಳಿಗೆ ಗುರುವಾರ ಹೆಣ್ಣು ಮಗು ಹುಟ್ಟಿದೆ. ಮುಂಬೈಯ ಸಾಂತಾ ಕ್ರೂಜ್ ಆಸ್ಪತ್ರೆಯಲ್ಲಿ ಮೆಲಿನೀ ಮಗುವಿಗೆ ಜನ್ಮ ನೀಡಿದ್ದಾರೆ.

ಐಪಿಎಲ್ ಕ್ರಿಕೆಟ್ ಅವಧಿಯಲ್ಲಿ ಮಗು ಹುಟ್ಟಿರುವ ಕಾರಣ ಮಗುವಿಗೆ ಇಂಡಿಯಾ ಜೆನ್ನೆ ಜಾಂಟಿ ರೋಡ್ಸ್ ಎಂದು ನಾಮಕರಣ ಮಾಡಲಾಗಿದೆ.

ನ್ಯಾಚುರಲ್ ವಾಟರ್ ಡೆಲಿವರಿ ಮೂಲಕ ಮೆಲಿನೀ ಮಗುವಿಗೆ ಗುರುವಾರ ಅಪರಾಹ್ನ 3.29 ಕ್ಕೆ ಜನ್ಮ ನೀಡಿದ್ದು ಮಗುವಿನ ಭಾರ  3.71 ಕೆ.ಜಿ ಇದೆ ಎಂದು ವೈದ್ಯರು ಹೇಳಿದ್ದಾರೆ.

ವಾಟರ್ ಡೆಲಿವರಿ ಅಂದರೆ?:
ಉಗುರು ಬಿಸಿ ನೀರಿರುವ ಟಬ್‌ನಲ್ಲಿ ಗರ್ಭಿಣಿಯನ್ನು ಹೆರಿಗೆಗೆ ಸಹಾಯವಾಗುವ ಭಂಗಿಯಲ್ಲಿ ಮಲಗಿಸಲಾಗುತ್ತದೆ. ಬಿಸಿ ನೀರಿನಲ್ಲಿ ನೋವು ಅಷ್ಟೊಂದು ಗೊತ್ತಾಗುವುದಿಲ್ಲ, ಮಾತ್ರವಲ್ಲದೆ ಬೇಗನೆ ಹೆರಿಗೆಯಾಗಲು ಇದು ಸಹಾಯ ಮಾಡುತ್ತದೆ. ವಾಟರ್ ಡೆಲಿವರಿಯಿಂದಾಗಿ ತಾಯಿ ಮತ್ತು ಮಗುವಿಗೆ ಸಾಕಷ್ಟು ಪ್ರಯೋಜನವಾಗಿದೆ. ಇದು ಸಾಮಾನ್ಯ ಹೆರಿಗೆಯಂತೆ ಪ್ರಯಾಸಕರವಾಗಿರುವುದಿಲ್ಲ. ಶಾಂತರೀತಿಯ ಹೆರಿಗೆಗೆ ವಾಟರ್ ಡೆಲಿವರಿ ಉತ್ತಮ. ಹೆರಿಗೆ ವೇಳೆ ಚಲನೆಗೂ, ಹೆರಿಗೆ ಬೇನೆಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಗರ್ಭದಲ್ಲಿರುವ ಶಿಶು ಅಮಿನಿಯೋಟಿಕ್ ಫ್ಲ್ಯೂಯೆಡ್‌ನಲ್ಲಿ ತೇಲುವಂತೆ ನೀರಿನಲ್ಲಿ ಆಗುವ ಹೆರಿಗೆಗೆ ಶಿಶು ಬೇಗ ಹೊಂದಿಕೊಳ್ಳುತ್ತದೆ . ಡಾಕ್ಟರ್‌ರ ಸಲಹೆಯ ಮೇರೆಗೆ ಆಸ್ಪತ್ರೆಗಳಲ್ಲಿ ಮಾತ್ರ ಇಂಥಾ ಹೆರಿಗೆಗಳನ್ನು ಮಾಡಿಸಲಾಗುತ್ತದೆ

ಬ್ರಿಟನ್, ಅಮೆರಿಕದಲ್ಲಿ ವಾಟರ್ ಡೆಲಿವರಿ ಸಾಮಾನ್ಯವಾಗಿದ್ದರೂ, ಭಾರತದಲ್ಲಿ ಇದು ಇನ್ನೂ ಹೆಚ್ಚು ಪ್ರಚಾರ ಪಡೆದಿಲ್ಲ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com