ಕ್ವಾರ್ಟರ್ ಗೆ ಸೈನಾ, ಸಿಂಧು

ವಿಶ್ವದ ಅಗ್ರ ಶ್ರೇಯಾಂಕಿತೆ ಸೈನಾ ನೆಹ್ವಾಲ್ ಹಾಗೂ ಮತ್ತೊಬ್ಬ ಭರವಸೆಯ ಆಟಗಾರ್ತಿ ಪಿ.ವಿ ಸಿಂಧು ಉತ್ತಮ ಪ್ರದರ್ಶನ ಮುಂದುವರಿಸುವ ಮೂಲಕ...
ಸೈನಾ ನೆಹ್ವಾಲ್
ಸೈನಾ ನೆಹ್ವಾಲ್

ವುಹಾನ್ (ಚೀನಾ): ವಿಶ್ವದ ಅಗ್ರ ಶ್ರೇಯಾಂಕಿತೆ ಸೈನಾ ನೆಹ್ವಾಲ್ ಹಾಗೂ ಮತ್ತೊಬ್ಬ ಭರವಸೆಯ ಆಟಗಾರ್ತಿ ಪಿ.ವಿ ಸಿಂಧು ಉತ್ತಮ ಪ್ರದರ್ಶನ ಮುಂದುವರಿಸುವ ಮೂಲಕ 2 ಲಕ್ಷ ಅಮೆರಿಕನ್ ಡಾಲರ್ ಬಹುಮಾನ ಮೊತ್ತದ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‍ನಲ್ಲಿ ಮುಂದಡಿ ಇಟ್ಟಿದ್ದಾರೆ.

ಆದರೆ, ಪುರುಷರ ಸಿಂಗಲ್ಸ್‍ನಲ್ಲಿ ಪರುಪಳ್ಳಿ ಕಶ್ಯಪ್, ಪ್ರಿ-ಕ್ವಾರ್ಟರ್ ಫೈನಲ್ ಸುತ್ತಿನಲ್ಲೇ ಸೋಲನುಭವಿಸುವ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಂಬರ್ ಒನ್ ಕ್ರಮಾಂಕದ ಸೈನಾ ನೆಹ್ವಾಲ್, ಎದುರಾಳಿ ಜಪಾನ್ ಆಟಗಾರ್ತಿ ನೊಜೊಮಿ ಒಕುಹರಾ ವಿರುದಟಛಿ 21-14, 10-21, 21-10 ಗೇಮ್ ಗಳಿಂದ ಗೆಲವು ದಾಖಲಿಸಿದರು. ಆರಂಬಿsಕ ಎರಡು ಸುತ್ತುಗಳಲ್ಲಿ ವಾಕ್ ಓವರ್ ಪಡೆದಿದ್ದ, ಸೈನಾ ಈ ಪಂದ್ಯದಲ್ಲಿ ಒಂದು ಗಂಟೆ ಏಳು
ನಿಮಿಷಗಳ ಅವಧಿಯಲ್ಲಿ ಎದುರಾಳಿ ಆಟಗಾರ್ತಿಯನ್ನು ಮಣಿಸಿದರು.

ಪಂದ್ಯದ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿ ಮುನ್ನಡೆ ಸಾಧಿಸಿದ್ದ ಹೈದರಾಬಾದ್ ಆಟಗಾರ್ತಿ, ಎರಡನೇ ಗೇಮ್ ನಲ್ಲಿ ಜಪಾನ್ ಆಟಗಾರ್ತಿಯ ಮುಂದೆ ಮಂಕಾದರು. ಅಂತಿಮವಾಗಿ ನಿರ್ಣಾಯಕ ಸೆಟ್‍ನಲ್ಲಿ ಪ್ರಾಬಲ್ಯ ತೋರಿ ಗೆಲವು ತಮ್ಮದಾಗಿಸಿಕೊಂಡರು. ಸೈನಾ ತಮ್ಮ ಮುಂದಿನ ಪಂದ್ಯದಲ್ಲಿ ಚೈನೀಸ್ ತೈಪೇನ ಐದನೇ ಶ್ರೇಯಾಂಕಿತೆ ಜು ಯಿಂಗ್ ಥೈ ಅವರನ್ನು ಎದುರಿಸಲಿದ್ದಾರೆ. ಎಂಟನೇ ಶ್ರೇಯಾಂಕಿತೆ ಪಿ.ವಿ ಸಿಂಧು ಸಹ ತಮ್ಮ ಪ್ರತಿಸ್ಪರ್ಧಿ ಮಕಾವು ದೇಶದ ಟೆಂಗ್ ಲೊಕ್ ಯು ವಿರುದ್ಧ ನೇರ ಗೇಮ್
ಗಳಿಂದ ಸುಲಭ ಜಯ ಸಾಧಿಸಿದರು.

ಕೇವಲ 20 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಿಂಧು, 21-8, 21-9 ಗೇಮïಗಳ ಅಂತರದಲ್ಲಿ ಗೆಲವು ದಾಖಲಿಸಿದರು. ಪಂದ್ಯದ ಆರಂಭದಿಂದ ಅಂತ್ಯದವರೆಗೂ ಎದುರಾಳಿ ಆಟಗಾರ್ತಿ ಮೇಲೆ ಸವಾರಿ ನಡೆಸಿದ ಸಿಂಧು ಸುಲಭವಾಗಿ ಪಂದ್ಯ ಗೆದ್ದುಕೊಂಡರು. ಸಿಂಧು ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಅಗ ಶ್ರೇಯಾಂಕಿತೆ ಲೀ ಕ್ಷುರುಯಿ ವಿರುದ್ಧ ಸೆಣಸಲಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗ ದಲ್ಲಿ ಪಿ.ಕಶ್ಯಪ್, ಚೀನಾದ ಎದುರಾಳಿ ಜೆಂಗ್‍ಮಿಂಗ್ ವಾಂಗ್ ವಿರುದ್ಧ ಮೂರನೇ ಸುತ್ತಿನಲ್ಲಿ ಸೋಲನುಭವಿಸಿದರು. 67 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 23-21, 17-21, 8-21 ಗೇಮïಗಳ ಅಂತರದಲ್ಲಿ ಸೋಲನುಭವಿಸಿದರು.

ಪಂದ್ಯದ ಮೊದಲ ಗೇಮ್ ನಲ್ಲಿ ತೀವ್ರ ಹೋರಾಟದ ನಡುವೆಯೂ ಮುನ್ನಡೆ ಸಾ„ಸಿದ್ದ ಕಶ್ಯಪ್, ನಂತರದ ಎರಡು ಗೇಮ್ ಗಳಲ್ಲಿ ಎಡವಿ ಟೂರ್ನಿಯಿಂದ ಹೊರಗುಳಿದರು. ಮಿಶ್ರ ಡಬಲ್ಸ್‍ನಲ್ಲಿ ಭಾರತದ ಅರುಣ ವಿಷ್ಣು ಮತ್ತು ಅಪರ್ಣಾ ಬಾಲನ್ 13-21, 5-21 ಗೇಮïಗಳ ಅಂತರದಲ್ಲಿ ಚೀನಾದ ಜೋಡಿ ಕೈ ಲು ಮತ್ತು ಯಾಕ್ವಿಂಗ್ ಹೌಂಗ್ ಜೋಡಿ ವಿರುದ್ಧ
ಸೋಲನುಭವಿಸಿದರು. ಪುರುಷರ ಡಬಲ್ಸ್‍ನಲ್ಲಿ ಮನು ಅತ್ರಿ ಮತ್ತು ಸುಮಿತ್ ರೆಡ್ಡಿ ಜೋಡಿ, ಚೀನಾದ ಕ್ಸೈಲೊಂಗ್ ಮತ್ತು ಜಿಹಾನ್ ಕ್ವಿ ವಿರುದ್ಧ 10-21, 13-21 ಗೇಮ್ ಗಳಿಂದ ಪರಾಭವಗೊಂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com