ಭಾರತದ ಕೈತಪ್ಪಿದ ಒಲಿಂಪಿಕ್ಸ್ ಆತಿಥ್ಯ

ಕೇಂದ್ರ ಸರ್ಕಾರದ ನಿರಾಸಕ್ತಿಯಿಂದಾಗಿ 2024ರ ಒಲಿಂಪಿಕ್ಸ್ ಆತಿಥ್ಯ ವಹಿಸುವ ಅವಕಾಶ ಭಾರತದ ಕೈತಪ್ಪಿದೆ. ಬಿಡ್‍ಗೆ ಸಂಬಂಧಿಸಿದಂತೆ, ಸೋಮವಾರ ಸಂಜೆ ನಡೆದ
ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ ಐಒಸಿ ಅಧಕ್ಷ ಥಾಮಸ್ ಬಾಕ್
ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ ಐಒಸಿ ಅಧಕ್ಷ ಥಾಮಸ್ ಬಾಕ್

ನವದೆಹಲಿ: ಕೇಂದ್ರ ಸರ್ಕಾರದ ನಿರಾಸಕ್ತಿಯಿಂದಾಗಿ 2024ರ ಒಲಿಂಪಿಕ್ಸ್ ಆತಿಥ್ಯ ವಹಿಸುವ ಅವಕಾಶ ಭಾರತದ ಕೈತಪ್ಪಿದೆ. ಬಿಡ್‍ಗೆ ಸಂಬಂಧಿಸಿದಂತೆ, ಸೋಮವಾರ ಸಂಜೆ ನಡೆದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ (ಐಒಸಿ) ಅಧ್ಯಕ್ಷ ಥಾಮಸ್ ಬಾಕ್ ಅವರ ಮಾತುಕತೆ ನಂತರ, ಬಾಕ್ ಈ ವಿಚಾರ ತಿಳಿಸಿದರು.

ಕೇಂದ್ರ ಸರ್ಕಾರದ ಜೊತೆಗೆ ಮಾತುಕತೆ ನಡೆಸಲು ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ), ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ (ಐಒಸಿ)ಯನ್ನು ಕೋರಿತ್ತು. ಅದರಂತೆ, ಐಒಎ ನಿಯೋಗ ಭಾರತಕ್ಕೆ ಸೋಮವಾರ ಆಗಮಿಸಿತ್ತು. ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಅವರ ನೇತೃತ್ವದ ನಿಯೋಗ ಸೋಮವಾರ ಸಂಜೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿತ್ತು.

ಆದರೆ, ಭೇಟಿಯ ವೇಳೆ ಮೋದಿಯವರು, ಪಂದ್ಯಾವಳಿಯ ಆತಿಥ್ಯದ ಬಗ್ಗೆ ಸ್ಪಷ್ಟವಾಗಿ ನಕಾರ ವ್ಯಕ್ತಪಡಿಸಿದ್ದರಿಂದ, ಭಾರತಕ್ಕೆ ಆತಿಥ್ಯದ ಅವಕಾಶ ತಪ್ಪಿಹೋಗಿದೆ. ಭೇಟಿಯ ನಂತರ ಸುದ್ದಿಗಾರರಿಗೆ ಬಾಕ್ ಈ ವಿಷಯ ತಿಳಿಸಿದರು.

2024ರ ಒಲಿಂಪಿಕ್ಸ್ ಕ್ರೀಡಾಕೂಟದ ಆತಿಥ್ಯವನ್ನು ಭಾರತಕ್ಕೆ ನೀಡಬಹುದು ಎಂಬ ಪ್ರಸ್ತಾವನೆ ಐಒಎಯಿಂದ ಕೇಳಿದಾಗ, ನಾನು ಅಚ್ಚರಿಗೊಂಡಿದ್ದೆ ಭಾರತಕ್ಕಿನ್ನೂ ಆ ಶಕ್ತಿ ಬರಲು ಇನ್ನೂ ಸಾಕಷ್ಟು ದಿನಗಳು ಬೇಕಿವೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com