ಸ್ಕ್ವಾಷ್: ಜೋಷ್ನಾ ಚಿನ್ನಪ್ಪಗೆ ಮೆಲ್ಬರ್ನ್ ಗರಿ

ಭಾರತದ ಭರವಸೆಯ ಸ್ಕ್ವಾಷ್ ಆಟಗಾರ್ತಿ ಜೋಷ್ನಾ ಚಿನ್ನಪ್ಪ ತಮ್ಮ ಯಶಸ್ಸಿನ ಹಾದಿಯಲ್ಲಿ ಮುನ್ನಡೆದಿದ್ದು, ವಿಕ್ಟೋರಿಯಾ ಓಪನ್ ಸ್ಕ್ವಾಷ್ ಟೂರ್ನಿಯಲ್ಲಿ...
ಜೋಷ್ನಾ ಚಿನ್ನಪ್ಪ
ಜೋಷ್ನಾ ಚಿನ್ನಪ್ಪ

ಮೆಲ್ಬರ್ನ್: ಭಾರತದ ಭರವಸೆಯ ಸ್ಕ್ವಾಷ್ ಆಟಗಾರ್ತಿ ಜೋಷ್ನಾ ಚಿನ್ನಪ್ಪ ತಮ್ಮ ಯಶಸ್ಸಿನ ಹಾದಿಯಲ್ಲಿ ಮುನ್ನಡೆದಿದ್ದು, ವಿಕ್ಟೋರಿಯಾ ಓಪನ್ ಸ್ಕ್ವಾಷ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು
ಕೊಂಡಿದ್ದಾರೆ. ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮೂರನೇ ಶ್ರೇಯಾಂಕಿತ ಪಡೆದಿದ್ದ ಜೋಷ್ನಾ ಚಿನ್ನಪ್ಪ, ತಮ್ಮ ಪ್ರತಿಸ್ಪರ್ಧಿ ಎರಡನೇ ಶ್ರೇಯಾಂಕಿತ ಲೈನ್ ಹನ್ಸೆನ್ ವಿರುದ್ಧ 11-5, 11-4, 11-9 ಅಂಕಗಳ ಅಂತರದಲ್ಲಿ ಜಯಿಸಿ ದ್ದಾರೆ. ಈ ಮೂಲಕ ಜೋಷ್ನಾ ತಮ್ಮ ವೃತ್ತಿ ಜೀವನದ 10ನೇ ವಿಶ್ವ ಸ್ಕ್ವಾಷ್ ಸಂಸ್ಥೆಯ ಪ್ರಶಸ್ತಿ ಗೆದ್ದಂತಾಗಿದೆ.
ಕಳೆದ ವಾರವಷ್ಟೇ ಕೋಯಂಗ್ ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಲೈನ್ ಹನ್ಸೆನ್ ವಿರುದ್ಧ ಸೋಲನುಭವಿಸಿದ್ದ ಜೋಷ್ನಾ ಈ ಪಂದ್ಯದಲ್ಲಿ ಆಕರ್ಷಕ ಪ್ರದರ್ಶನ ನೀಡುವ ಮೂಲಕ ಈ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದಾರೆ. ಕಳೆದ ವರ್ಷ ಏಪ್ರಿಲ್‍ನಲ್ಲಿ ರಿಚ್ ಮಂಡ್ ಓಪನ್ ಕಪ್‍ನಲ್ಲಿ ಗೆದ್ದ ನಂತರ ಯಾವುದೇ ಟ್ರೋಫಿಯನ್ನು ಗೆಲ್ಲದ ಜೋಷ್ನಾ, ವರ್ಷಕ್ಕೂ ಹೆಚ್ಚಿನ ಸಮಯದ ನಂತರ ಪ್ರಶಸ್ತಿಯ ದಾಹವನ್ನು
ನೀಗಿಸಿಕೊಂಡಿದ್ದಾರೆ. ಪಂದ್ಯದಲ್ಲಿ ಎದುರಾಳಿಯಿಂದ ಪ್ರತಿರೋಧ ಎದುರಿಸಿ ದ್ದಾಗಿ ಒಪ್ಪಿಕೊಂಡಿರುವ ಜೋಶ್ನಾ, ತಮ್ಮ ಮಿಶ್ರಭರಿತ ಹೊಡೆತಗಳು, ಅತ್ಯುತ್ತಮ ಹಾಗೂ ನಿಖರವಾದ ಪ್ಲೇಸ್ಮೆಂಟ್  ಮೂಲಕ ಮೇಲುಗೈ ಸಾಧಿಸಿದ ಜೋಷ್ನಾ ಆಡಿದ ಮೂರೂ ಗೇಮ್ ಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.ಇತ್ತೀಚೆಗಷ್ಟೇ ರಾಷ್ಟ್ರೀಯ ಚಾಂಪಿಯನ್‍ಶಿಪ್ ಪ್ರಶಸ್ತಿ ಗೆದ್ದಿದ್ದ ಜೋಷ್ನಾ, ತಮ್ಮ ಪ್ರಸಕ್ತ ಲಯದ ಬಗ್ಗೆ ಹರ್ಷ ವ್ಯಕ್ತಪಡಿಸಿದ ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾ ಓಪನ್ ಟೂರ್ನಿ ಆರಂಭವಾಗಲಿದ್ದು  ಈ ಯಶಸ್ಸನ್ನು ಮುಂದಿನ  ಸ್ಪರ್ಧೆಗಳಲ್ಲೂ ಮುಂದುವರಿಸುವ ವಿಶ್ವಾಸ ಹೊಂದಿದ್ದಾರೆ.
ಈ ಪ್ರಶಸ್ತಿ ಗೆಲುವಿನಿಂದ ಬಹಳ ಸಂತೋಷವಾಗಿದೆ. ಆಸ್ಟ್ರೇಲಿಯಾ ಓಪನ್ ಟೂರ್ನಿ ಸಹ ಇದೇ ಅಂಗಣ ದಲ್ಲಿ ನಡೆಯಲಿರುವುದು ಮತ್ತೊಂದು ಪ್ಲಸ್ ಪಾಯಿಂಟ್ ಎಂದರು. ಇನ್ನು ಪುರುಷರ ಸಿಂಗಲ್ಸ್ ವಿಭಾಗ ದಲ್ಲಿ ಆಸ್ಟ್ರೇಲಿಯಾದ ರೆಯಾನ್ ಕುಸ್ಕೆಲ್ಲಿ  ತಮ್ಮ ಪ್ರತಿಸ್ಪರ್ಧಿ ಸ್ಕಾಟ್ಲೆಂಡ್‍ನ  ಗ್ರೇಗ್ ಲೊಬ್ಬನ್ 12-10, 12-11, 11-9 ಗೇಮ್ ಗಳ ಅಂತರದಿಂದ ಜಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com