ಮಾನ ಕಾಪಾಡಿದ ಕರುಣ್ ನಾಯರ್

ಕರ್ನಾಟಕದ ಪ್ರತಿಭಾವಂತ ಬ್ಯಾಟ್ಸ್ ಮನ್ ಕರುಣ್ ನಾಯರ್ ಆಟದ ನೆರವಿನಿಂದ ಭಾರತ 'ಎ' ತಂಡದ ಮಾನ ಉಳಿದಿದೆ. ...
ಕರುಣ್ ನಾಯರ್
ಕರುಣ್ ನಾಯರ್

ವಯನಾಡು: ಕರ್ನಾಟಕದ ಪ್ರತಿಭಾವಂತ ಬ್ಯಾಟ್ಸ್ ಮನ್ ಕರುಣ್ ನಾಯರ್ ಆಟದ ನೆರವಿನಿಂದ ಭಾರತ 'ಎ' ತಂಡದ ಮಾನ ಉಳಿದಿದೆ. ದಕ್ಷಿಣ ಆಫ್ರಿಕಾ 'ಎ' ತಂಡದ ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಎ ತಂಡ ಡ್ರಾ ಸಾಧಿಸಿದೆ.

ಗೆಲುವಿಗೆ ಬೇಕಾದ 444 ರನ್ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತ ಎ ತಂಡ ದಿನದ ಅಂತ್ಯಕ್ಕೆ 309/4 ರನ್ ಗಳಿಸಿದ್ದಾಗ ಅಂಪೈರ್ ಗಳು ಪಂದ್ಯವನ್ನು ಮುಕ್ತಾಯಗೊಳಿಸಿದರು. ಭಾರತ ಎ ನಾಯಕ ಅಂಬಟಿ ರಾಯುಡು ಹಾಗೂ ದಕ್ಷಿಣ ಆಫ್ರಿಕಾ ಎ ತಂಡದ ನಾಯಕ ಡೇನ್ ವಿಲಾಸ್ ಅವರು ಕೂಡಾ ಡ್ರಾಗೆ ಸಮ್ಮತಿಸಿದರು.

ಪಂದ್ಯದ ಕೊನೆ ದಿನವಾದ ಶುಕ್ರವಾರ (ಆಗಸ್ಟ್ 21) ಭಾರತ ಎ ಪರ 23 ವರ್ಷ ವಯಸ್ಸಿನ ಕರುಣ್ ನಾಯರ್ ಅವರು ಅಜೇಯ 114ರನ್ ಗಳಿಸಿದ್ದು ವಿಶೇಷವಾಗಿತ್ತು. 192 ಎಸೆತಗಳಲ್ಲಿ ಶತಕ ಬಾರಿಸಿದ ಕರುಣ್ ಅವರ ಆಕರ್ಷಕ ಆಟದಲ್ಲಿ 18 ಬೌಂಡರಿ ಹಾಗೂ ಒಂದು ಸಿಕ್ಸ್ ಇತ್ತು.

ಕರುಣ್ ನಾಯರ್ ಗೆ ತಮಿಳುನಾಡಿನ ಆಲ್ ರೌಂಡರ್ ವಿಜಯ್ ಶಂಕರ್ ಸಾಥ್ ನೀಡಿದರು. ಇಬ್ಬರು ಐದನೇ ವಿಕೆಟ್ ಗೆ ಮುರಿಯದ 148 ರನ್ ಜೊತೆಯಾಟ ಪ್ರದರ್ಶಿಸಿದರು. ಈ ಮೂಲಕ ದಕ್ಷಿಣ ಆಫ್ರಿಕಾ ತಂಡದ ಗೆಲುವಿನ ಆಸೆಗೆ ತಣ್ಣೀರೆರಚಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com