
ನವದೆಹಲಿ: ಮುಂದಿನ ಒಲಂಪಿಕ್ಸ್ ಸಿದ್ದತೆಗಾಗಿ ಟಾರ್ಗೆಟ್ ಒಲಂಪಿಕ್ಸ್ ಪೋಡಿಯಮ್ (ಟಾಪ್) ಯೋಜನೆಯ ಮೂಲಕ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಕರ್ನಾಟಕದ ಡಿಸ್ತಕ್ ರ್ಥೋಪಟು ವಿಕಾಸ್ ಗೌಡ ಅವರ ತರಬೇತಿಗಾಗಿ ಕೇಂದ್ರ ಸರ್ಕಾರ ಶುಕ್ರವಾರ ಹಣ ಬಿಡುಗಡೆ ಮಾಡಿದೆ.
ಅಗತ್ಯ ಕೋಚ್ ನೇಮಕ ಮತ್ತು ತರಬೇತಿಗಾಗಿ ತಗಲುವ ವೆಚ್ಚಕ್ಕಾಗಿ ಹಣ ಬಿಡುಗಡೆ ಮಾಡಲಾಗಿದೆ. ಕಳೆದ ಜೂನ್ ನಿಂದ ಒಲಂಪಿಕ್ಸ್ ಕ್ರೀಡಾಕೂಟದವರೆಗೂ ವಿಮಲ್ ಕುಮಾರ್ ಅವರನ್ನು ವೈಯಕ್ತಿಕ ಕೋಟ್ ಆಗಿ ನೇಮಿಸಿಕೊಂಡಿರುವ ಸೈನಾ ಅವರಿಗೆ ರು.10.81 ಲಕ್ಷ ಹಣ ನೀಡಲಾಗಿದೆ.
ಸೈನಾ ನೆಹ್ವಾಲ್ ಅವರು ವಿಮಲ್ ಕುಮಾರ್ ಅವರನ್ನು ಕೋಚ್ ಆಗಿ ನೇಮಕವಾಗಿರುವುದರಿಂದ ಅವರಿಗೆ ತಿಂಗಳಿಗೆ ರು.1 ಲಕ್ಷ ವೇತನ ಹಾಗೂ ಇತರೆ ಜಿಮ್ ಸಲಕರಣೆಗಳನ್ನು ಖರೀದಿಸಲು ಹಣ ಬಿಡುಗಡೆ ಮಾಡಲಾಗಿದೆ ಎಂದು ಕ್ರೀಡಾ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ವಿಕಾಸ್ ಗೌಡ ಅವರಿಗೆ ಹಣ ನೀಡಲಾಗಿದ್ದು, 2014ರ ಡಿಸೆಂಬರ್ ನಿಂದ ಆಗಸ್ಟ್ 2015 ಮತ್ತು ನವೆಂಬರ್ 2015 ಆಗಸ್ಟ್ 2016ರವರೆಗೆ ಒಟ್ಟು 19 ತಿಂಗಳ ತರಬೇತಿಗಾಗಿ ಒಟ್ಟು ರು.1.12 ಕೋಟಿ ಹಣವನ್ನು ನೀಡಲು ನಿರ್ಧರಿಸಿತ್ತು. ಈ ಪೈಕಿ ಈವರೆಗೂ ಅಗತ್ಯವಾಗಿದ್ದ ಮೊತ್ತವನ್ನು ಸಚಿವಾಲಯ ಬಿಡುಗಡೆ ಮಾಡಿದೆ.
Advertisement