
ಬೀಜಿಂಗ್: ಬರ್ಡ್ಸ್ ನೆಸ್ಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚ್ಯಾಂಪಿಯನ್ ಶಿಪ್ ನ ಎರಡನೇ ದಿನವಾದ ಭಾನುವಾರ ಭಾರತದ ಶಾಟ್ ಪುಟ್ ಆಟಗಾರ ಇಂದರ್ ಜೀತ್ ಸಿಂಗ್ ಅಂತಿಮ ಸುತ್ತು ಪ್ರವೇಶಿಸಿದ್ದಾರೆ, ಹಾಗೆಯೇ ಪುರುಷರ 20 ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಬಲ್ಜಿಂದರ್ ಸಿಂಗ್ 12ನೇ ಸ್ಥಾನ ಗಳಿಸಿದ್ದಾರೆ.
ಏಷ್ಯಾದ ಭರವಸೆಯ ಆಟಗಾರರಾಗಿರುವ ಇಂದರ್ ಜೀತ್ ಸಿಂಗ್ ಮುಂದಿನ ವರ್ಷದ ಓಲಂಪಿಕ್ ಪಂದ್ಯಕ್ಕೆ ಅರ್ಹತಾ ಸುತ್ತಿನ ಪಂದ್ಯ ಆರಂಭಿಸಿದ್ದು, ಇಂದು 20.47 ಮೀಟರ್ ಉದ್ದಕ್ಕೆ ಕಬ್ಬಿಣದ ಚೆಂಡನ್ನು ಎಸೆದಿದ್ದಾರೆ. ಈ ಮೂಲಕ ಅಂತಿಮ ಸುತ್ತು ಪ್ರವೇಶಿಸಿದ 12 ಮಂದಿಯಲ್ಲಿ ಒಬ್ಬರಾಗಿದ್ದಾರೆ. ಅಂತಿಮ ಪಂದ್ಯ ಇಂದು ಸಂಜೆ ನಡೆಯಲಿದೆ.
ಪುರುಷರ 20 ಕಿಲೋ ಮೀಟರ್ ಉದ್ದದ ನಡಿಗೆಯಲ್ಲಿ ವಿಶ್ವದ 51 ಮಂದಿ ಅಥ್ಲಿಟ್ ಗಳಲ್ಲಿ ಬಲ್ಜಿಂದರ್ ಸಿಂಗ್ 1 ಗಂಟೆ 21 ನಿಮಿಷ 44 ಸೆಕೆಂಡ್ ತೆಗೆದುಕೊಂಡು 12ನೆಯವರಾಗಿ ಹೊರಹೊಮ್ಮಿದ್ದಾರೆ. ಇತರ ಇಬ್ಬರು ಭಾರತೀಯರಾದ ಗು ರ್ಮೀತ್ ಸಿಂಗ್ ಮತ್ತು ಚಂದನ್ ಸಿಂಗ್ 36ನೇ ಹಾಗೂ 42ನೇ ಸ್ಥಾನ ಗಳಿಸಿದ್ದಾರೆ.
Advertisement