ಗರ್ಲ್ ಫ್ರೆಂಡ್ ಇದ್ದರೆ ಹೇಳಿ..!

ಜಗತ್ತಿನ ಅತ್ಯಂತ ವೇಗದ ಜೀವಿ ಯಾವುದು ಎಂಬ ಪ್ರಶ್ನೆ ಕೇಳಿದರೆ ಈಗ ಮಕ್ಕಳು `ಚೀತಾ' ಎಂದು ಉತ್ತರಿಸುವುದಿಲ್ಲ, ಬದಲಾಗಿ `ಉಸೇನ್ ಬೋಲ್ಟ್' ಎನ್ನುತ್ತಾರೆ...
ಉಸೇನ್ ಬೋಲ್ಟ್ (ಸಂಗ್ರಹ ಚಿತ್ರ)
ಉಸೇನ್ ಬೋಲ್ಟ್ (ಸಂಗ್ರಹ ಚಿತ್ರ)

ಜಗತ್ತಿನ ಅತ್ಯಂತ ವೇಗದ ಜೀವಿ ಯಾವುದು ಎಂಬ ಪ್ರಶ್ನೆ ಕೇಳಿದರೆ ಈಗ ಮಕ್ಕಳು `ಚೀತಾ' ಎಂದು ಉತ್ತರಿಸುವುದಿಲ್ಲ, ಬದಲಾಗಿ `ಉಸೇನ್ ಬೋಲ್ಟ್' ಎನ್ನುತ್ತಾರೆ.

ಎರಡೆರಡು ಬಾರಿ ಈತ ವಲ್ರ್ಡ್ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನಲ್ಲಿ ಪ್ರಥಮ ಬಹುಮಾನ ಪಡೆದ ಬಳಿಕ ಈ ಬಿರುದು ಪಡೆಯಬೇಕಾದ್ದೇ ಅಲ್ಲವೆ. ಆದರೆ ಇವನ ವೇಗದ ಕತೆ ಇಷ್ಟಕ್ಕೇ  ಮುಗಿಯುವುದಿಲ್ಲ. ಕಣ್ಣ ರೆಪ್ಪೆ ಮುಚ್ಚುವುದರೊಳಗೆ ಈತ ಗರ್ಲ್ ಫ್ರೆಂಡ್ ಗಳನ್ನೂ ಚಕಾಚಕ್ ಬದಲಾಯಿಸಿಕೊಂಡು ಓಡಿಬಿಡಬಲ್ಲ. ಜಮೈಕಾದ ಈ ವೇಗಿಯ ಖಾತೆಯಲ್ಲಿ ಈಗಾಗಲೇ ಹಲವಾರು ಗೆಳತಿಯರ ಸಂಗದ ಕತೆಗಳಿವೆ. ಬೋಲ್ಟ್‍ನ ಈ ಓಡಾಟದ ಕತೆಗಳು ಆರಂಭವಾದದ್ದು ಆತನ 16ನೇ ವಯಸ್ಸಿನಲ್ಲಿ, ಆಕೆ ಕಾಲೇಜಿನಲ್ಲಿದ್ದಾಗಲೇ. ಮಿಝಿಕನ್ ಎವಾನ್ಸ್ ಎಂಬಾಕೆ ಈತನ ಪ್ರೇಯಸಿ.

ಆಗ ಆಕೆಗಿನ್ನೂ 14 ವರ್ಷ. ಕಾಲೇಜಿನಲ್ಲಿ ಅವಳು ನೆಟ್‍ಬಾಲ್ ಆಟಗಾತಿ. ಮೊದಲ ಪ್ರೀತಿಗಳು ಜೀವನದಲ್ಲಿ ಅಚ್ಚಳಿಯದಂತೆ ಉಳಿಯುತ್ತವೆ. ಬೋಲ್ಟ್ ಜೀವನದಲ್ಲೂ ಹೆಚ್ಚು ಕಾಲ ಉಳಿದ ಪ್ರೀತಿ ಬಹುಶಃ ಇದೇ. ಆಕೆ ಯೂನಿವರ್ಸಿಟಿಗೆ ಕೆರಿಬಿಯನ್‍ಗೆ, ಈತ ಓಟಕ್ಕಾಗಿ ಹೊರದೇಶಕ್ಕೆ ಹೋದಂತೆ ಅವರ ಪ್ರೇಮ ಸಂಪರ್ಕ ದೂರವಾಯ್ತು. ಆಮೇಲೆ ಆತ ಸ್ಲೊವಾಕಿಯಾದ ಲುಬಿಕಾ ಸ್ಲೊವಾಕ್ ಎಂಬ ಬಿಳೀ ಹುಡುಗಿಯನ್ನು ಪ್ರೀತಿಸತೊಡಗಿದ. ಇದರಿಂದ ಎದೆ ಒಡೆದುಕೊಂಡ ಜಮೈಕನ್ನರು ಆತನಿಗೆ `ಬಿಳಿ ಚರ್ಮದ ಸಂಗಕ್ಕೆ ಯಾಕೆ ಬಿದ್ದೆಯೋ ಮಾರಾಯ' ಎಂದು ಹಿಡಿಶಾಪ ಹಾಕಿದರು.  ಇಬ್ಬರಿಗೂ ಈಡುಜೋಡು ಸಮನಲ್ಲ ಎಂಬ ಟೀಕೆ ಬಂತು. ಅದು ಹೇಗೋ ಆ ಪ್ರೀತಿ ಬಾಳಲಿಲ್ಲ. ಲಂಡನ್ ಒಲಿಂಪಿಕ್ಸ್‍ನ ನಂತರ ಆತ ಮೇಗನ್ ಎಡ್ವಡ್ರ್ಸ್ ಎಂಬಾಕೆಯನ್ನು ಪ್ರೇಮಿಸಿದ. ಆಕೆ  ಅವನ ಅಂದರೆ ಜಮೈಕದ ತಂಡವನ್ನು ಪ್ರತಿನಿಧಿಸುವ ಮಾಡೆಲ್ ಆಗಿ ಆಯ್ಕೆಯಾಗಿದ್ದಳು.

ತಂಡದ ಕ್ಯಾಟ್‍ವಾಕ್‍ಗಳಲ್ಲಿ ಈತನ ಕೈಗೆ ಕೈ, ಕಣ್ಣಿಗೆ ಕಣ್ಣು ಬೆಸೆದಳು. ಈಕೆ ಬ್ರಿಟಿಷ್. ಒಮ್ಮೆ ಡೇಟಿಂಗ್ ಅಂತ ಅವನೂರಿಗೆ ಹೋದಳು. ಅದೇನಾಯಿತೋ ಏನೋ, ವಾಪಸು ಲಂಡನ್‍ಗೆ ಹೋದ ಮೇಲೆ `ನಂಗೂ ನಿಂಗೂ ಸರಿಹೋಗಲ್ಲ. ನಾನಲ್ಲಿ, ನೀನಿಲ್ಲಿ. ನೀನು ಜಮೈಕಾಗೇ ಸೇರಿದವ. ನಾನೂ ನಿನ್ನಷ್ಟೇ ಸೆಲೆಬ್ರಿಟಿಯಾಗಿದ್ದರೆ ಜೋಡಿ ಸರಿಹೋಗ್ತಿತ್ತೇನೋ. ಬೈ' ಅಂದಳು. ಇನ್ನು ಬೋಲ್ಟ್ ಜತೆ ಡೇಟ್ ಮಾಡುತ್ತಿದ್ದೇವೆಂದು ಆಗಾಗ ಹೇಳಿಕೊಳ್ಳುವ ತರುಣಿಯರಿಗೂ ಕೊರತೆಯಿಲ್ಲ.

ಇವರೆಲ್ಲಾ ಕೆಲ ಬಾರಿ ಬೋಲ್ಟ್ ಜೊತೆ ಕಾಣಿಸಿಕೊಂಡಿರುವುದೂ ನಿಜ. ತನೇಶ್ ಸಿಂಪ್ಸನ್ ಎಂಬ ಪಾಪ್ ಸಿಂಗರ್, ಜೆಮ್ಮಾ ಜೋನ್ಸ್ ಎಂಬ ಕೇರ್‍ಹೋಮ್ಸಿಬ್ಬಂದಿ, ರೆಬೆಕ್ಕಾ ಪಾಸ್ಲೇ ಎಂಬ ಅಮೆರಿಕದ ಬಾರ್‍ಟೆಂಡರ್, ಟೀಹ್ನಾ ಬ್ಯಾಂಕ್ಸ್ ಎಂಬ ಇನ್ನೊಬ್ಬಾಕೆ ಹೀಗೆ ಕೇಳಿಬಂದ ಹೆಸರುಗಳು. ಹುಡುಕುತ್ತ ಹೋದರೆ ಇವರೊಂದಿಗೆ ಬೋಲ್ಟ್ ಲಲ್ಲೆಗರೆಯುವ ಫೋಟೊಗಳೂ ಸಿಗುತ್ತವೆ. ಬೋಲ್ಟ್ ಅಂದರೆ ಇಂಗ್ಲಿಷ್‍ನಲ್ಲಿ ಮಿಂಚು. ಹೆಸರಿಗೆ ತಕ್ಕಂತೆ ಆತ ಮಿಂಚಿ ಮಾಯವಾಗುತ್ತಾನೆ ಅಂತ ಗೊತ್ತಿದ್ದರೂ ಹುಡುಗಿಯರೇಕೆ ಈತನತ್ತ ಮುಗಿಬೀಳುತ್ತಾರೆ? ಇದಕ್ಕೆ ಉತ್ತರಕ್ಕಾಗಿ  ಹುಡುಕಬೇಕಿಲ್ಲ. ರೊಮ್ಯಾಂಟಿಕ್ ಸ್ವಭಾವದ ಹೆಚ್ಚಿನ ಸ್ತ್ರೀಯರು ಬೌದ್ಧಿಕ ಶ್ರೀಮಂತಿಕೆಗಿಂತಲೂ ಪುರುಷನ ಲೈಂಗಿಕ ಸಾಮಥ್ರ್ಯದೆಡೆಗೆ ಸೆಳೆಯಲ್ಪಡುವುದೇ ಹೆಚ್ಚು. ಬೋಲ್ಟ್  `ಔಟಾಗದೆ  ನೂರಾರು ಮೀಟರ್ ಓಡಬಲ್ಲ' ಸಾಮಥ್ರ್ಯ ಹಾಗೂ ಆತನ ಶ್ರೀಮಂತಿಕೆ ಕಾರಣಗಳೆಂದು ಊಹಿಸಬಹುದು. ಸದ್ಯಕ್ಕೆ ಬೋಲ್ಟ್‍ಗೆ ಗೆಳತಿಯರಿದ್ದಾರೆ.

ಆದರೆ ಜೀವದ ಗೆಳತಿಯರು ಯಾರೂ ಇರುವಂತಿಲ್ಲ. ಇಷ್ಟಲ್ಲದೆ ಇನ್ನೊಂದು ಕಾರಣಕ್ಕೂ ಬೋಲ್ಟ್  ಸುದ್ದಿಯಾಗಿದ್ದಾನೆ. ಈತ ಒಳ್ಳೆಯ ನೆರೆಕೆರೆಯವನಲ್ಲ. ಇವನ ಮನೆ ಕಿಂಗ್‍ಸ್ಟನ್‍ನಲ್ಲಿರುವ  ಪಾಶ್ ಏರಿಯಾದಲ್ಲಿದೆ. ವಿಸ್ತಾರ ಹುಲ್ಲುಗಾವಲು, ಪಾರ್ಕ್, ಡ್ರೈವ್‍ವೇ, ಕಾಂಪೌಂಡ್ ಹೊಂದಿರುವ ಮನೆಯಿದು. ಆದರೆ ಈತನ ಪಕ್ಕದ ಮನೆಯಲ್ಲಿ ವಾಸಿಸುತ್ತಿರುವ `ಜೋಡಿ ಸ್ಟೀವರ್ಟ್' ಎಂಬ ಮಾಡೆಲ್‍ನದು ಒಂದೇ ಕಂಪ್ಲೇಂಟು ಬೋಲ್ಟ್ ತಡರಾತ್ರಿ ಜೋರಾಗಿ ಮ್ಯೂಸಿಕ್ ಹಚ್ಚಿ ಕುಣಿದಾಡುತ್ತಾನೆ. ಗೆಳೆಯ-ಗೆಳತಿಯರನ್ನು ಕರೆದುಕೊಂಡು ಬೆಳಗಿನವರೆಗೂ ಪಾರ್ಟಿ ಮಾಡುತ್ತಾನೆ.  ಬೈಕ್‍ಗಳನ್ನು ವ್ಹೀಲಿಂಗ್ ಮಾಡುತ್ತಾ ಕೋಲಾಹಲ ಎಬ್ಬಿಸುತ್ತಾನೆ. ಈತ ಇಡೀ ಏರಿಯಾಕ್ಕೇ ದೊಡ್ಡ ನ್ಯೂಸೆನ್ಸ್ ಆಗಿದ್ದಾನೆ. ಇನ್ನೊಬ್ಬ ನೆರೆಯಾತ ಈತನನ್ನು `ನರಕದಿಂದ ಬಂದ ನೆರೆಯವನು'  ಎಂದು ಬಣ್ಣಿಸಿದ್ದಾನೆ.

ಯಶಸ್ಸಿನೊಂದಿಗೆ ಕೆಲವೊಮ್ಮ ಖಾಲಿತನವೂ ಉದ್ಭವಿಸುತ್ತದೆ. ಇದಕ್ಕೆ ಈತನೇ ಸಾಕ್ಷಿ. ಸರಿಯಾದ ಗರ್ಲ್ಫ್ರೆಂಡ್ ಸಿಕ್ಕರೆ ಬೋಲ್ಟ್ ಸರಿ ಹೋಗ್ಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com