ಅಕ್ಷರ್ ಪಟೇಲ್ (ಸಂಗ್ರಹ ಚಿತ್ರ)
ಅಕ್ಷರ್ ಪಟೇಲ್ (ಸಂಗ್ರಹ ಚಿತ್ರ)

ಹರಿಣಗಳ ಕಾಡಿದ ಅಕ್ಷರ್

ದಕ್ಷಿಣ ಆಫ್ರಿಕಾ ಎ ವಿರುದ್ಧದ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ (5 ವಿಕೆಟ್, ಅಜೇಯ 69 ರನ್) ಆಲ್ರೌಂಡ್ ಪ್ರದರ್ಶನ ನೀಡುವ ಮೂಲಕ ಪ್ರವಾಸಿಗರಿಗೆ ಪಾಠ ಕಲಿಸಿದ್ದಾರೆ...
Published on

ವಯನಾಡು: ದಕ್ಷಿಣ ಆಫ್ರಿಕಾ ಎ ವಿರುದ್ಧದ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ (5 ವಿಕೆಟ್, ಅಜೇಯ 69 ರನ್) ಆಲ್ರೌಂಡ್ ಪ್ರದರ್ಶನ ನೀಡುವ ಮೂಲಕ ಪ್ರವಾಸಿಗರಿಗೆ ಪಾಠ ಕಲಿಸಿದ್ದಾರೆ.

ಪಂದ್ಯದ ಮೂರನೇ ದಿನವಾದ ಗುರುವಾರದ ಆಟದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದ ಪರಿಣಾಮ ಕೇವಲ 22 ಓವರ್‍ಗಳ ಆಟ ನಡೆದಿದ್ದು, ಭಾರತ ಎ ತಂಡ 8 ವಿಕೆಟ್ ನಷ್ಟಕ್ಕೆ 417 ರನ್ ದಾಖಲಿಸಿದೆ. ಪಂದ್ಯದಲ್ಲಿ ಹರಿಣಗಳ ಮೊದಲ ಇನಿಂಗ್ಸ್ ವೇಳೆ ಬ್ಯಾಟ್ಸ್‍ಮನ್‍ಗಳನ್ನು ಕಾಡಿದ್ದ ಅಕ್ಷರ್ ಪಟೇಲ್, ಈಗ ಹರಿಣಗಳ ಬೌಲರ್‍ಗಳನ್ನು ಕಾಡಿದ್ದಾರೆ. ಪಂದ್ಯದ ಎರಡನೇ ದಿನದಾಟಕ್ಕೆ 6 ವಿಕೆಟ್ ಕಳೆದು ಕೊಂಡು 342 ರನ್ ದಾಖಲಿಸಿದ್ದ ಭಾರತ ಎ ತಂಡ, ಮೂರನೇ ದಿನದಾಟ ಮುಂದುವರೆಸಿತು.

16 ರನ್‍ಗಳೊಂದಿಗೆ ದಿನದಾಟ ಆರಂಬಿsಸಿದ ಅಕ್ಷರ್ ಪಟೇಲ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ಭಾರತ ಬೃಹತ್ ಮೊತ್ತದತ್ತ ಸಾಗಲು ನೆರವಾಗಿದ್ದಾರೆ. 93 ಎಸೆತಗಳನ್ನು ಎದುರಿಸಿದ ಅಕ್ಷರ್ 10 ಬೌಂಡರಿ 2 ಸಿಕ್ಸರ್ ನೆರವಿನಿಂದ ಅಜೇಯ ಆಟವಾಡಿದರು. ಅಕ್ಷರ್ ಜತೆ ದಿನದಾಟ ಆರಂಭಿಸಿದ ಅಂಕುಶ್ ಬೈನ್ಸ್ ಕೇವಲ 1 ರನ್ ಕಲೆ ಹಾಕಿ 35ಕ್ಕೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಜಯಂತ್ ಯಾದವ್ ರನ್ ಖಾತೆ ತೆರೆಯದೇ ವಿಕೆಟ್ ಒಪ್ಪಿಸಿದರು.

ಈ ವೇಳೆ ಜತೆಯಾದ ಕರಣ್ ಶರ್ಮಾ ಅಕ್ಷರ್‍ಗೆ ಉತ್ತಮ ಸಾಥ್ ನೀಡುವ ಮೂಲಕ ಅಜೇಯ 19 ರನ್ ದಾಖಲಿಸಿದ್ದಾರೆ. ಪಂದ್ಯದಲ್ಲಿ ಅಂತಿಮ ದಿನದಾಟ ಮಾತ್ರ ಬಾಕಿ ಉಳಿದಿರುವಾಗ ಭಾರತ ಎ ತಂಡ 157 ರನ್‍ಗಳ ಮುನ್ನಡೆ ಸಂಪಾದಿಸಿದೆ. ಶುಕ್ರವಾರ ಭಾರತ ತಂಡ ಆರಂಭದಲ್ಲೇ ಡಿಕ್ಲೇರ್ ಮಾಡಿಕೊಂಡು ಗೆಲುವಿಗಾಗಿ ಪ್ರಯತ್ನಿಸುವುದೇ ಎಂಬುದನ್ನು
ಕಾದು ನೋಡಬೇಕು.

ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ 260, ಭಾರತ ಎ ಮೊದಲ ಇನಿಂಗ್ಸ್ 110 ಓವರ್ ಗಳಲ್ಲಿ 8 ವಿಕೆಟ್‍ಗೆ 417 (ಅಕ್ಷರ್ ಪಟೇಲ್ ಅಜೇಯ 69, ಅಂಕುಶ್ ಬೈನ್ಸ್ 35, ಕರ್ಣ್ ಶರ್ಮಾ ಅಜೇಯ 19, ಡೇನ್ ಪೀಟ್ 191ಕ್ಕೆ5, ಸೊಸೊಬೆ 52ಕ್ಕೆ2)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com