ವಿಕಾಸ್ ಫೈನಲ್ ಗೆ

ಇನ್ನು ಭಾರತದ ಹೆಸರಾಂತ ಡಿಸ್ಕಸ್ ಎಸೆತಗಾರ, ಕರ್ನಾಟಕದ ಹೆಮ್ಮೆಯ ಅಥ್ಲೀಟ್ ವಿಕಾಸ್ ಗೌಡ ನಿರೀಕ್ಷೆಯಂತೆಯೇ ಬೀಜಿಂಗ್ ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ಕ್ರೀಡಾಕೂಟದ ಡಿಸ್ಕಸ್ ಎಸೆತ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ...
ಭಾರತದ ಹೆಸರಾಂತ ಡಿಸ್ಕಸ್ ಎಸೆತಗಾರ ಅಥ್ಲೀಟ್ ವಿಕಾಸ್ ಗೌಡ
ಭಾರತದ ಹೆಸರಾಂತ ಡಿಸ್ಕಸ್ ಎಸೆತಗಾರ ಅಥ್ಲೀಟ್ ವಿಕಾಸ್ ಗೌಡ

ಬೀಜಿಂಗ್: ಇನ್ನು ಭಾರತದ ಹೆಸರಾಂತ ಡಿಸ್ಕಸ್ ಎಸೆತಗಾರ, ಕರ್ನಾಟಕದ ಹೆಮ್ಮೆಯ ಅಥ್ಲೀಟ್ ವಿಕಾಸ್ ಗೌಡ ನಿರೀಕ್ಷೆಯಂತೆಯೇ ಬೀಜಿಂಗ್ ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ಕ್ರೀಡಾಕೂಟದ ಡಿಸ್ಕಸ್ ಎಸೆತ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ.

ಗುರುವಾರ ನಡೆದ ಆರ್ಹತಾ ಸುತ್ತಿನಲ್ಲಿ ವಿಕಾಸ್ 63,86 ಮೀಟರ್ ಡಿಸ್ಕ್ ಎಸೆದು ಪದಕ ಸುತ್ತಿಗೆ ಸುನಾಯಾಸವಾಗಿ ಪ್ರವೇಶ ಪಡೆದರು. ಎರಡು ಬಾರಿಯ ಏಷ್ಯನ್ ಚಾಂಪಿಯನ್‍ಶಿಪ್ ಸ್ವರ್ಣ ಪದಕ ವಿಜೇತ ಹಾಗೂ 32 ವರ್ಧದ ವಿಕಾಸ್ ಮೊದಲ ಯತ್ನದಲ್ಲಿ 63.86 ಮೀಟರ್ ಗೆ ಡಿಸ್ಕ್ ಎಸೆಯುವ ಮೂಲಕ ತಾನು ಭರ್ಜರಿ ಫಾರ್ಮ್ ನಲ್ಲಿರುವುದಾಗಿ ಖಚಿತಪಡಿಸಿದರು. ಆದರೆ ಎರಡನೇ ಯತ್ನದಲ್ಲಿ 0.02 ಮೀಟರ್ ಹಿನ್ನಡೆ ಅನುಭವಿಸಿದ ವಿಕಾಸ್, ಮೂರನೇ ಯತ್ನದಲ್ಲಿ ಅನರ್ಹಗೊಂಡರು.

ಶನಿವಾರ ನಡೆಯಲಿರುವ ಪದಕ ಸುತ್ತಿನಲ್ಲಿ ಮರುಕಳಿಸದಂತೆ ಜಾಗ್ರತೆವಹಿಸಬೇಕಾದ ಜರೂರನ್ನು ವಿಕಾಸ್ ಗೆ ಮನಗಾಣಿಸಿದೆ. ಇನ್ನು ಜಮೈಕಾ ಅಥ್ಲೀಟ್ ಫೆಡರಿಕ್ ಡ್ಯಾಕ್ರೆಸ್ ಅಹ್ರತಾ ಸುತ್ತಿನಲ್ಲಿ ಮೇರು ಸ್ಥಾನ ಪಡೆದರು. ಅವರು 65.77 ಮೀಟರ್ ವರೆಗಿನ ಸಾಧನೆಯಿಂದ ಈ ಸಾಧನೆ ಮಾಡಿದರು.

ದಾಖಲೆ ಬರೆದ ಅನಿತಾ

ಇನ್ನು ವಿಶ್ವ ಕ್ರೀಡಾಕೂಟದ 6ನೇ ದಿನದಂದು ಮಹಿಳೆಯರ ಹ್ಯಾಮರ್ ಥ್ರೋ ವಿಭಾಗದಲ್ಲಿ ಪೊಲೆಂಡ್‍ನ ಅನಿತಾ ವ್ಲೊಡಾರ್ಸ್‍ಜಿಕ್ (80.85 ಮೀ.) ವಿಶ್ವದಾಖಲೆಯೊಂದಿಗೆ
ಸ್ವರ್ಣ ಪದಕ ಜಯಿಸಿದರು. ಇನ್ನುಳಿದಂತೆ ಈ ವಿಭಾಗದಲ್ಲಿ ಚೀನಾದ ವೆಂಕ್ಸುಯಿ ಝಾಂಗ್ (76.33 ಮೀ.) ಹಾಗೂ ಫ್ರಾನ್ಸ್ ನ ಅಲೆಕ್ಸಾಂಡ್ರೆ ಟವೆರ್ನಿಯರ್ 74.02 ಮೀಟರ್ ಸಾಧನೆಯೊಂದಿಗೆ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com