ಮಾನೆ ಐಟಿಎಫ್ ಚಾಂಪಿಯನ್

ಭಾರತದ ಐದನೇ ಶ್ರೀಯಾಂಕಿತೆ ಸ್ನೇಹಲ್ ಮಾನೆ ಐಟಿಎಫ್ ಟೆನಿಸ್‍ನ ಪೆಟಿಟ್ ಕ್ಯಾಂಪ್ ಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಭಾರತದ ಐದನೇ ಶ್ರೀಯಾಂಕಿತೆ ಸ್ನೇಹಲ್ ಮಾನೆ ಐಟಿಎಫ್ ಟೆನಿಸ್‍ನ ಪೆಟಿಟ್ ಕ್ಯಾಂಪ್ ಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಶನಿವಾರ ನಡೆದ ಬಾಲಕಿಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ವಿಶ್ವ ರ್ಯಾಂಕಿಂಗ್ ನಲ್ಲಿ 678ನೇ ಸ್ಥಾನ ಪಡೆದಿರುವ ಸ್ನೇಹಲ್, ತನ್ನ ಪ್ರತಿಸ್ಪರ್ಧಿ ಹಾಗೂ ಡಬಲ್ಸ್ ವಿಭಾಗದ ಜತೆಗಾರ್ತಿ ಜೂಲಿಯಾ ವುಲ್ಪಿಯೊ ವಿರುದ್ಧ 5-7, 6-2, 6-2 ಸೆಟ್‍ಗಳ ಅಂತರದಲ್ಲಿ ಮಣಿಸಿದರು.

ಸ್ನೇಹಲ್ ಬಾಲಕಿಯರ ಡಬಲ್ಸ್‍ನಲ್ಲಿ ಜೂಲಿಯಾ ಜತೆಗೂಡಿ ರನ್ನರ್‍ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. 2 ಗಂಟೆ 10 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸ್ನೇಹಲ್, ಪ್ರತಿರೋಧ ಎದುರಿಸಿದರೂ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com