ಬೌಲರ್‍ಗಳ ಪ್ರಾಬಲ್ಯ, ಭಾರತಕ್ಕೆ ಮುನ್ನಡೆ

ಆತಿಥೇಯ ಶ್ರೀಲಂಕಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬೌಲರ್‍ಗಳ ಪರಾಕ್ರಮ ಹೆಚ್ಚಾಗಿದೆ. ಪರಿಣಾಮ ಪಂದ್ಯದ ಮೂರನೇ ದಿನದಾಟದಲ್ಲಿ ಎರಡು ತಂಡಗಳಿಂದ 15 ವಿಕೆಟ್‍ಗಳು ಉರುಳಿವೆ...
ಚೇತೇಶ್ವರ ಪೂಜಾರ ಶತಕ ಸಂಭ್ರಮ
ಚೇತೇಶ್ವರ ಪೂಜಾರ ಶತಕ ಸಂಭ್ರಮ
Updated on

ಕೊಲಂಬೋ: ಆತಿಥೇಯ ಶ್ರೀಲಂಕಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬೌಲರ್‍ಗಳ ಪರಾಕ್ರಮ ಹೆಚ್ಚಾಗಿದೆ. ಪರಿಣಾಮ ಪಂದ್ಯದ ಮೂರನೇ ದಿನದಾಟದಲ್ಲಿ ಎರಡು ತಂಡಗಳಿಂದ 15 ವಿಕೆಟ್‍ಗಳು ಉರುಳಿವೆ.

ಸಿಂಹಳೆ ಸ್ಪೋರ್ಟ್ಸ್ ಕ್ಲಬ್‍ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ತೃತೀಯ ದಿನವಾದ ಭಾನುವಾರ ಭಾರತ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿ, ನಂತರ 312 ರನ್ ಗಳಿಸಿ  ಆಲೌಟ್ ಆಯಿತು. ನಂತರ ಮೊದಲ ಇನಿಂಗ್ಸ್ ಆರಂಭಿಸಿದ ಲಂಕಾ ಪಡೆ ಭಾರತದ ವೇಗದ ದಾಳಿಗೆ ಸಂಪೂರ್ಣ ನಲುಗಿ ಹೋಯಿತು. ಕೆಳ ಕ್ರಮಾಂಕದಲ್ಲಿ ಪ್ರತಿರೋಧಕಾರಿ ಬ್ಯಾಟಿಂಗ್‍ನಿಂದ  52.2 ಓವರ್‍ಗಳಲ್ಲಿ 201 ರನ್‍ಗಳಿಗೆ ಆಲೌಟ್ ಆಯಿತು. ಎರಡನೇ ಇನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ದಿನದಾಟ ಮುಕ್ತಾಯಕ್ಕೆ 8.1 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 21 ರನ್ ಕಲೆ  ಹಾಕಿತು. ಈ ಮೂಲಕ ಪಂದ್ಯ ರೋಚಕ ಘಟ್ಟದತ್ತ ಸಾಗಿದ್ದು, ಮಳೆ ಅಡ್ಡಿಯಾಗದಿದ್ದರೆ ನಿಚ್ಚಳ ಫಲಿತಾಂಶ ಹೊರಬರುವ ಸಾಧ್ಯತೆಗಳಿವೆ. ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಈಗಾಗಲೇ  ಉಭಯ ತಂಡಗಳು ತಲಾ ಒಂದು ಪಂದ್ಯಗಳನ್ನು ಗೆದ್ದುಕೊಂಡಿದ್ದು 1-1ರ ಸಮಬಲ ಸಾಧಿಸಿವೆ.

ಅದರಲ್ಲೂ ಈ ಪಂದ್ಯದಲ್ಲಿ ಭಾರತ ಗೆದ್ದರೆ, ಮೊದಲ ಬಾರಿಗೆ ಲಂಕಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದಂತಾಗಲಿದೆ. ಹಾಗಾಗಿ ಟೀಂ ಇಂಡಿಯಾ ಈ ಐತಿಹಾಸಿಕ ಸಾಧನೆ ಮಾಡಲು ಎದುರು  ನೋಡುತ್ತಿದೆ. ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್‍ಗೆ 292 ರನ್ ದಾಖಲಿಸಿದ್ದ ಭಾರತ ತಂಡ, ಬ್ಯಾಟಿಂಗ್ ಮುಂದುವರಿಸಿತು. ಆರಂಭದಿಂದಲೇ ಭಾರತ ತಂಡ ಹೊಡಿ ಬಡಿ  ಆಟಕ್ಕೆ ಮುಂದಾಯಿತು. ಚೇತೇಶ್ವರ ಪೂಜಾರ ಜತೆಗೆ ಕ್ರೀಸ್‍ನಲ್ಲಿದ್ದ ಇಶಾಂತ್ ಶರ್ಮಾ 6 ರನ್ ಗಳಿಸಿ ಔಟಾದರೆ, ಅಂತಿಮ ಕ್ರಮಾಂಕದಲ್ಲಿ  ಕಣಕ್ಕಿಳಿದ ಉಮೇಶ್ ಯಾದವ್ 4 ರನ್‍ಗಳಿಗೆ  ಆಲೌಟ್ ಆದರು. ಇನ್ನು ಅಜೇಯರಾಗುಳಿದ ಚೇತೇಶ್ವರ ಪೂಜಾರ 289 ಎಸೆತಗಳಲ್ಲಿ 14 ಬೌಂಡರಿ ನೆರವಿನಿಂದ 145 ರನ್ ದಾಖಲಿಸಿದರು.

ಇಶಾಂತ್ ಮಿಂಚಿನ ದಾಳಿ
ಭಾರತ ತಂಡವನ್ನು ಮೊದಲ ಇನಿಂಗ್ಸ್ ನಲ್ಲಿ 312 ರನ್‍ಗಳಿಗೆ ಆಲೌಟ್ ಮಾಡಿ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ತಂಡ, ವೇಗದ ದಾಳಿಗೆ ತತ್ತರಿಸಿತು. ಇಶಾಂತ್ ಶರ್ಮಾ, ಉಮೇಶ್ ಯಾದವ್ ಹಾಗೂ ಸ್ಟುವರ್ಟ್ ಬಿನ್ನಿ ಬೌಲಿಂಗ್ ಮುಂದೆ ಲಂಕಾ ಬ್ಯಾಟ್ಸ್‍ಮನ್‍ಗಳು ತರಗೆಲೆಗಳಂತೆ ಉದುರಿದರು. ಆರಂಭದಿಂದಲೇ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ  ಶ್ರೀಲಂಕಾ ತಂಡ ತೀವ್ರ ಕುಸಿತ ಕಂಡಿತು. ಅಗ್ರ ಕ್ರಮಾಂಕದಲ್ಲಿ ಕಣಕ್ಕಿಳಿದ ಉಪುಲ್ ತರಂಗಾ (4), ಕೌಶಲ ಸಿಲ್ವಾ (3), ಕರುಣಾ ರತ್ನೆ (11), ಚಂಡಿಮಲ್ (23), ಆ್ಯಂಜೆಲೊ ಮ್ಯಾಥ್ಯೂಸ್ (1),  ತಿರಿಮಾನೆ (0) ಬೇಗನೇ ವಿಕೆಟ್ ಒಪ್ಪಿಸಿದರು.

ಈ ಮೂಲಕ ಲಂಕಾ 47 ರನ್‍ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಹೋರಾಟದ ಬ್ಯಾಟಿಂಗ್ ಪ್ರದರ್ಶನ ನೀಡಿದ  ಕುಶಾಲ್ ಪೆರೇರಾ (55), ಧಮ್ಮಿಕಾ ಪ್ರಸಾದ್ (29) ಹಾಗೂ ರಂಗನಾ ಹೆರಾಥ್ (49) ತಂಡವನ್ನು 200ರ ಗಡಿ ಮುಟ್ಟಿಸಿದರಲ್ಲದೇ ಫಾಲೋ ಆನ್‍ನಿಂದ ಪಾರಾಗುವ ಮೂಲಕ ಆಸರೆಯಾದರು.  ಭಾರತದ ಪರ ಇಶಾಂತ್ ಶರ್ಮಾ 5, ಸ್ಟುವರ್ಟ್ ಬಿನ್ನಿ, ಅಮಿತ್ ಮಿಶ್ರಾ ತಲಾ 2 ಹಾಗೂ ಉಮೇಶ್ ಯಾದವ್ 1 ವಿಕೆಟ್ ಪಡೆದರು.

ಭಾರತಕ್ಕೆ ಶಾಕ್

ಮೊದಲ ಇನಿಂಗ್ಸ್ ನಲ್ಲಿ 111 ರನ್‍ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ತಂಡ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್‍ಮನ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಆರಂಭಿಕರಾದ ಪೂಜಾರ (0), ರಾಹುಲ್ (2) ಹಾಗೂ ರಹಾನೆ (4) ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಮುರಿಯದ ನಾಲ್ಕನೇ ವಿಕೆಟ್‍ಗೆ ಜತೆಯಾದ ಕೊಹ್ಲಿ (1) ಹಾಗೂ ರೋಹಿತ್   ಶರ್ಮಾ (14) ಅಜೇಯ ರಾಗುಳಿದಿದ್ದಾರೆ. ಅಂತಿಮ ಹಂತದಲ್ಲಿ ಮಳೆ ಸುರಿದ ಪರಿಣಾಮ ಪಂದ್ಯದ ದಿನದಾಟವನ್ನು ಬೇಗನೆ ಅಂತ್ಯಗೊಳಿಸಿದರು. ಲಂಕಾ ಪರ ಪ್ರದೀಪ್ 2 ಹಾಗೂ ಪ್ರಸಾದ್ 1  ವಿಕೆಟ್ ಕಬಳಿಸಿದ್ದಾರೆ.

ಪೂಜಾರ ಮೈಲುಗಲ್ಲು

ಟೀಂ ಇಂಡಿಯಾದ ಮೊದಲ ಇನಿಂಗ್ಸ್ ನಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಅಜೇಯರಾಗುಳಿದ ಚೇತೇಶ್ವರ ಪೂಜಾರ, ಈ ಸಾಧನೆ ಮಾಡಿದ ಭಾರತದ 4ನೇ ಆಟಗಾರನಾದರು. ಈ ಹಿಂದೆ ಸುನೀಲ್ ಗಾವಸ್ಕರ್, ವಿರೇಂದ್ರ ಸೆಹ್ವಾಗ್ ಹಾಗೂ ರಾಹುಲ್ ದ್ರಾವಿಡ್ ಇನಿಂಗ್ಸ್ ಪೂರ್ಣ ಪ್ರಮಾಣದಲ್ಲಿ ಆಡಿ ಅಜೇಯರಾಗುಳಿದಿದ್ದರು. ಈ ಮೂಲಕ ಈ ಹಿರಿಯರ ಸಾಧನೆಯ ಸಾಲಿಗೆ ಪೂಜಾರ ಸೇರ್ಪಡೆಯಾಗಿದ್ದಾರೆ.

ಸ್ಕೋರ್ ವಿವರ
ಭಾರತ ಮೊದಲ ಇನಿಂಗ್ಸ್ 100.1 ಓವರ್‍ಗಳಲ್ಲಿ 312

ಚೇತೇಶ್ವರ ಪೂಜಾರ ಅಜೇಯ 145, ಇಶಾಂತ್ ಶರ್ಮಾ ಬಿ ಹೆರಾಥ್ 6,  ಉಮೇಶ್ ಯಾದವ್ ಬಿ ಹೆರಾಥ್ 4
ಇತರೆ: (ಎಲ್‍ಬಿ2, ವೈಡ್4, ನೋಬಾಲ್ 7, ಪೆನಾಲ್ಟಿ 5) 18
ವಿಕೆಟ್ ಪತನ: 1--2 (ರಾಹುಲ್), 2--14 (ರಹಾನೆ), 3--64 (ಕೊಹ್ಲಿ), 4--119 (ರೋಹಿತ್), 5--119 (ಬಿನ್ನಿ), 6--173 (ನಮನ್ ಓಜಾ), 7--180 (ಅಶ್ವಿನ್), 8--284 (ಅಮಿತ್ ಮಿಶ್ರಾ), 9--298   (ಇಶಾಂತ್), 10--312 (ಉಮೇಶ್)
ಬೌಲಿಂಗ್ ವಿವರ: ಧಮ್ಮಿಕಾ ಪ್ರಸಾದ್ 26-4-100-4, ಪ್ರದೀಪ್ 22-6-52-1, ಮ್ಯಾಥ್ಯೂಸ್ 13-6-24-1, ಹೆರಾಥ್ 27.1-3-84-3, ಕೌಶಲ 12-2-45-1

ಶ್ರೀಲಂಕಾ ಮೊದಲ ಇನಿಂಗ್ಸ್ 52.2 ಓವರ್‍ಗಳಲ್ಲಿ 201
ತರಂಗಾ ಸಿ ರಾಹುಲ್ ಬಿ ಇಶಾಂತ್ 4
ಕೌಶಲಾ ಸಿಲ್ವಾ ಬಿ ಯಾದವ್ 3
ಕರುಣಾರತ್ನೆ ಸಿ ರಾಹುಲ್ ಬಿ ಬಿನ್ನಿ 11
ಚಂಡಿಮಲ್ ಎಲ್‍ಬಿ ಬಿ ಬಿನ್ನಿ 23
ಮ್ಯಾಥ್ಯೂಸ್ ಸಿ ಓಜಾ ಬಿ ಇಶಾಂತ್ 1
ತಿರಿಮಾನೆ ಸಿ ರಾಹುಲ್ ಬಿ ಇಶಾಂತ್ 0
ಕೌಶಲಾ ಪೆರೇರಾ ಸಿ ಕೊಹ್ಲಿ ಬಿ ಇಶಾಂತ್ 55
ಪ್ರಸಾದ್ ಸ್ಟಂಪ್ ಓಜಾ ಬಿ ಮಿಶ್ರಾ 27
ಹೆರಾಥ್ ಸಿ ಓಜಾ ಬಿ ಇಶಾಂತ್ 49
ತರಿಂದು ಕೌಶಾಲ ಎಲ್‍ಬಿ ಮಿಶ್ರಾ 16
ಪ್ರದೀಪ್ ಅಜೇಯ 2

ಇತರೆ: (ಎಲ್‍ಬಿ 1, ವೈಡ್ 2, ನೋಬಾಲ್ 7) 10

ವಿಕೆಟ್ ಪತನ: 1--11 (ತರಂಗಾ), 2--11 (ಸಿಲ್ವಾ), 3--40 (ಚಂಡಿಮಲ್), 4--45 (ಮ್ಯಾಥ್ಯೂಸ್), 5--47 (ಕರುಣಾರತ್ನೆ), 6--47 (ತಿರಿಮಾನೆ), 6--48* (ಪ್ರಸಾದ್ ಗಾಯಗೊಂಡು ನಿವೃತ್ತಿ), 7--127  (ಪೆರೇರಾ), 8--156 (ಕೌಶಲಾ), 9--183 (ಹೆರಾಥ್), 10--201 (ಪ್ರಸಾದ್)

ಬೌಲಿಂಗ್ ವಿವರ: ಇಶಾಂತ್ 15-2-54-5, ಉಮೇಶ್ ಯಾದವ್ 13-2-64-1, ಸ್ಟುವರ್ಟ್ ಬಿನ್ನಿ 9-3-24-2,  ಅಶ್ವಿನ್ 8-1-33-0, ಅಮಿತ್ ಮಿಶ್ರಾ 7.2-1-25-2

ಭಾರತ ಎರಡನೇ ಇನಿಂಗ್ಸ್ 8.1ಓವರ್‍ಗಳಲ್ಲಿ 3 ವಿಕೆಟ್‍ಗೆ 21
ಪೂಜಾರ ಬಿ ಪ್ರಸಾದ್ 0, ರಾಹುಲ್ ಬಿ ಪ್ರದೀಪ್ 2, ರಹಾನೆ ಎಲ್‍ಬಿ ಬಿ ಪ್ರದೀಪ್ 4, ಕೊಹ್ಲಿ ಅಜೇಯ 1, ರೋಹಿತ್ ಅಜೇಯ 13

ಇತರೆ:0
ವಿಕೆಟ್ ಪತನ: 1--0 (ಪೂಜಾರ), 2--2 (ರಾಹುಲ್), 3--7 (ರಹಾನೆ)
ಬೌಲಿಂಗ್ ವಿವರ: ಪ್ರಸಾದ್ 4.1-2-8-1, ಪ್ರದೀಪ್ 3-1-6-2, ಹೆರಾಥ್ 1-0-7-0

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com