ಸೆ.5ರಿಂದ ಭಾರತ ಹಾಕಿ ತಂಡದ ತರಬೇತಿ ಶಿಬಿರ

ಇದೇ ವರ್ಷಾಂತ್ಯದಲ್ಲಿ ತವರಿನಲ್ಲಿ ನಡೆಯಲಿರುವ ಪ್ರತಿಷ್ಠಿತ ವಿಶ್ವ ಹಾಕಿ ಲೀಗ್ ಫೈನಲ್ ಟೂರ್ನಿಗಾಗಿ ಪೂರ್ವ ತಯಾರಿ ನಡೆಸಲು ಭಾರತ ಹಾಕಿ ಪುರುಷರ ತಂಡಕ್ಕೆ ಸೆ.5ರಿಂದ ತರಬೇತಿ ಶಿಬಿರ ಆರಂಭವಾಗಲಿದ್ದು..
ಟೀಂ ಇಂಡಿಯಾ (ಸಂಗ್ರಹ ಚಿತ್ರ)
ಟೀಂ ಇಂಡಿಯಾ (ಸಂಗ್ರಹ ಚಿತ್ರ)
Updated on

ನವಹೆದಲಿ: ಇದೇ ವರ್ಷಾಂತ್ಯದಲ್ಲಿ ತವರಿನಲ್ಲಿ ನಡೆಯಲಿರುವ ಪ್ರತಿಷ್ಠಿತ ವಿಶ್ವ ಹಾಕಿ ಲೀಗ್ ಫೈನಲ್ ಟೂರ್ನಿಗಾಗಿ ಪೂರ್ವ ತಯಾರಿ ನಡೆಸಲು ಭಾರತ ಹಾಕಿ ಪುರುಷರ ತಂಡಕ್ಕೆ ಸೆ.5ರಿಂದ ತರಬೇತಿ ಶಿಬಿರ ಆರಂಭವಾಗಲಿದ್ದು, ವಿ.ಆರ್. ರಘುನಾಥ್, ಎಸ್.ವಿ. ಸುನೀಲ್, ನಿಕಿನ್ ತಿಮ್ಮಯ್ಯ ಹಾಗೂ ಎಸ್.ಕೆ. ಉತ್ತಪ್ಪ ಸೇರಿ ನಾಲ್ವರು ಕನ್ನಡಿಗರು ಇದರಲ್ಲಿ ಭಾಗವಹಿಸಲಿದ್ದಾರೆ.

ನವದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸುಮಾರು 25 ದಿನಗಳ ಕಾಲ ನಡೆಯಲಿರುವ ತರಬೇತಿ ಶಿಬಿರದಲ್ಲಿ ಭಾರತ ತಂಡ ಟೂರ್ನಿಗಾಗಿ ಸಕಲ ತಯಾರಿ ನಡೆಸಲಿದೆ. ಈ  ಟೂರ್ನಿಯಲ್ಲಿ ಒಟ್ಟು 26 ಆಟಗಾರರು ಭಾಗವಹಿಸಲಿದ್ದು, ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲಿದ್ದಾರೆ. ಅಲ್ಲದೆ ಹಲವಾರು ಪ್ರಯೋಗಗಳಿಗೆ ಅವಕಾಶ ಕಲ್ಪಿಸಲಾಗುವುದು. ವಿಶ್ವ ಹಾಕಿ ಲೀಗ್ ಫೈನಲ್ ಟೂರ್ನಿಯು ನವೆಂಬರ್ 27ರಿಂದ ಡಿಸೆಂಬರ್ 6ರವರೆಗೆ ನಡೆಯಲಿದ್ದು, ಮುಂದಿನ ವರ್ಷ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿರುವ ಹಿನ್ನಲೆಯಲ್ಲಿ ಈ ಟೂರ್ನಿ ಮಹತ್ವದ್ದಾಗಿದೆ|.

``ಇತ್ತೀಚೆಗಷ್ಟೇ ಯುರೋಪ್ ಪ್ರವಾಸದಲ್ಲಿ ಫ್ರಾನ್ಸ್ ಹಾಗೂ ಸ್ಪೇನ್ ವಿರುದ್ಧದ ಸರಣಿಗಳನ್ನು ಗೆದ್ದಿರುವ ಭಾರತ ತಂಡ ಉತ್ತಮ ಲಯದಲ್ಲಿದೆ ಎಂದು ಕೋಚ್ ಒಲ್ಟ್ಸ್ ಮನ್ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com