2015 ನೇ ಸಾಲಿನ ಐಸಿಸಿ ಟೀಮ್ ಪ್ರಕಟ: ಮಹೇಂದ್ರ ಸಿಂಗ್ ಧೋನಿ ಔಟ್
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ 2015ನೇ ಸಾಲಿನ ಶ್ರೇಷ್ಠ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ತಂಡಗಳನ್ನು ಬುಧವಾರ ಪ್ರಕಟಿಸಿದೆ. ಆಫ್ ಸ್ಪಿನ್ನರ್ ಆರ್ ಅಶ್ವಿನ್ ಹಾಗೂ ಮೊಹಮ್ಮದ್ ಶಮಿ ಇಬ್ಬರು ಮಾತ್ರ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಶ್ರೇಷ್ಠ ತಂಡಗಳನ್ನು ಐಸಿಸಿ ಪ್ರಕಟಿಸಿದ್ದು, ಇಂಗ್ಲೆಂಡಿನ ಆಲೆಸ್ಟಕ್ ಕುಕ್ ಅವರು ಟೆಸ್ಟ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದರೆ, ಎಬಿ ಡಿವಿಲಿಯರ್ಸ್ ಅವರು ಏಕದಿನ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ. ಭಾರತದಿಂದ ವೇಗಿ ಮೊಹಮ್ಮದ್ ಶಮಿ ಅವರು ಏಕದಿನ ಕ್ರಿಕೆಟ್ ನ ಮೊದಲ XI ಗೆ ಆಯ್ಕೆಯಾಗಿದ್ದರೆ, ಆಫ್ ಸ್ಪಿನ್ನರ್ ಆರ್ ಅಶ್ವಿನ್ ಅವರು ಟೆಸ್ಟ್ ತಂಡದಲ್ಲಿ 12ನೇ ಆಟಗಾರರಾಗಿ ಆಯ್ಕೆಯಾಗಿದ್ದಾರೆ.
ಸತತವಾಗಿ ಏಳು ವರ್ಷಗಳ ಕಾಲ ಐಸಿಸಿ ಏಕದಿನ ಕ್ರಿಕೆಟ್ ಶ್ರೇಷ್ಠದಲ್ಲಿ ಸ್ಥಾನ ಪಡೆದಿದ್ದ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರು ಈ ಬಾರಿ ಐಸಿಸಿ ಪ್ರಕಟಿಸಿರುವ 2015 ಶ್ರೇಷ್ಠ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಕಳೆದ ಬಾರಿ 34 ವರ್ಷ ವಯಸ್ಸಿನ ಧೋನಿ ಅವರು 5 ಬಾರಿ ಸತತವಾಗಿ ನಾಯಕರಾಗಿದ್ದರು. ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಹಾಗೂ ಶಮಿ ಅವರು ಟೆಸ್ಟ್ ತಂಡದಲ್ಲಿದ್ದರು. ಸೆಪ್ಟೆಂಬರ್ 18, 2014ರಿಂದ ಸೆಪ್ಟೆಂಬರ್ 13, 2015 ಅವಧಿಯಲ್ಲಿ ನೀಡಿರುವ ಪ್ರದರ್ಶನವನ್ನು ಆಯ್ಕೆಗೆ ಪರಿಗಣಿಸಲಾಗಿದೆ.
ಐಸಿಸಿ ಶ್ರೇಷ್ಠ ಟೆಸ್ಟ್ ತಂಡ 2015
* ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)
* ಅಲೆಸ್ಟರ್ ಕುಕ್ (ಇಂಗ್ಲೆಂಡ್)
* ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್)
* ಯೂನಿಸ್ ಖಾನ್ (ಪಾಕಿಸ್ತಾನ)
* ಸ್ಟೀವನ್ ಸ್ಮಿತ್ (ಆಸ್ಟ್ರೇಲಿಯಾ)
* ಜೋ ರೂಟ್ (ಇಂಗ್ಲೆಂಡ್)
* ಸರ್ಫಾಜ್ ಅಹ್ಮದ್ (ಪಾಕಿಸ್ತಾನ, ವಿಕೆಟ್ ಕೀಪರ್)
* ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್)
* ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್)
* ಯಾಸೀರ್ ಶಾ (ಪಾಕಿಸ್ತಾನ)
* ಜೋಶ್ ಹೇಜಲ್ ವುಡ್ (ಆಸ್ಟ್ರೇಲಿಯಾ)
* ರವಿಚಂದ್ರನ್ ಅಶ್ವಿನ್ (12ನೇ ಆಟಗಾರ, ಭಾರತ) ಐಸಿಸಿ ಏಕದಿನ ಕ್ರಿಕೆಟ್ ತಂಡ
* ತಿಲಕರತ್ನೆ ದಿಲ್ಶನ್ (ಶ್ರೀಲಂಕಾ)
* ಹಶೀಂ ಆಮ್ಲಾ (ದಕ್ಷಿಣ ಆಫ್ರಿಕಾ)
* ಕುಮಾರ್ ಸಂಗಕ್ಕಾರ (ಶ್ರೀಲಂಕಾ, ವಿಕೆಟ್ ಕೀಪರ್)
* ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ, ನಾಯಕ)
* ಸ್ಟೀವನ್ ಸ್ಮಿತ್ (ಆಸ್ಟ್ರೇಲಿಯಾ)
* ರಾಸ್ ಟೇಲರ್ (ನ್ಯೂಜಿಲೆಂಡ್)
* ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್)
* ಮೊಹಮ್ಮದ್ ಶಮಿ (ಭಾರತ)
* ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ)
* ಮುಸ್ತಾಫಿಜುರ್ ರಹಮಾನ್ (ಬಾಂಗ್ಲಾದೇಶ)
* ಇಮ್ರಾನ್ ತಾಹೀರ್ (ದಕ್ಷಿಣ ಆಫ್ರಿಕಾ)
* ಜೋ ರೂಟ್ (12ನೇ ಆಟಗಾರ, ಇಂಗ್ಲೆಂಡ್)
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ