ಕ್ವಾರ್ಟರ್‍ಗೆ ಸಿಂಧು, ಪ್ರಣಯ್ ಹೊರಕ್ಕೆ

ಅಗ್ರ ಶ್ರೇಯಾಂಕಿತ ಆಟಗಾರರಾದ ಪಿ.ವಿ. ಸಿಂಧು 120,000 ಡಾಲರ್ ಮೊತ್ತದ ಇಂಡೋನೇಷಿಯಾ ಮಾಸ್ಟರ್ಸ್ ಗ್ರಾಂಡ್ ಪ್ರಿಕ್ಸ್ ಗೋಲ್ಡ್ ಪಂದ್ಯಾವಳಿಯಲ್ಲಿ ಕ್ವಾರ್ಟರ್ ಫೈನಲ್‍ಗೆ ತಲುಪಿದ್ದಾರೆ...
ಪಿವಿ ಸಿಂಧು (ಸಂಗ್ರಹ ಚಿತ್ರ)
ಪಿವಿ ಸಿಂಧು (ಸಂಗ್ರಹ ಚಿತ್ರ)

ಮಲಾಂಗ್: ಅಗ್ರ ಶ್ರೇಯಾಂಕಿತ ಆಟಗಾರರಾದ ಪಿ.ವಿ. ಸಿಂಧು 120,000 ಡಾಲರ್ ಮೊತ್ತದ ಇಂಡೋನೇಷಿಯಾ ಮಾಸ್ಟರ್ಸ್ ಗ್ರಾಂಡ್ ಪ್ರಿಕ್ಸ್ ಗೋಲ್ಡ್ ಪಂದ್ಯಾವಳಿಯಲ್ಲಿ ಕ್ವಾರ್ಟರ್ ಫೈನಲ್‍ಗೆ  ತಲುಪಿದ್ದಾರೆ.

ಹಾಲಿ ಚಾಂಪಿಯನ್ ಎಚ್. ಎಸ್ ಪ್ರಣಯ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ 2ನೇ ಸುತ್ತಿನ ಪಂದ್ಯದಲ್ಲಿ ಎರಡು ಬಾರಿಯ ವಿಶ್ವ  ಬ್ಯಾಡ್ಮಿಂಟನ್‍ಶಿಪ್‍ನ ಕಂಚು ಪದಕ ವಿಜೇತೆ ಸಿಂಧು, ಸ್ಥಳೀಯ ಆಟಗಾರ್ತಿ ವುಲಾನ್ ಚಹಾಯ ಸುಕುಪುಟ್ರಿ ವಿರುದ್ಧ 21-12, 21-9ರ ಎರಡು ನೇರ ಗೇಮ್ಗಳಲ್ಲಿ ಜಯಿಸಿ ಪ್ರೀ-ಕ್ವಾರ್ಟರ್ ಫೈನಲ್‍ಗೆ ಧಾವಿಸಿದರು. ಇತ್ತ ಪುರುಷರ ವಿಭಾಗದಲ್ಲಿ ವಿಶ್ವದ ಶ್ರೀಕಾಂತ್ ಸ್ಥಳೀಯ ಆಟಗಾರ ಸಪುಟ್ರಾ ವಿಕಿ ಆಂಗಾ ವಿರುದ್ಧ 21-14, 17-21, 25-23ರಿಂದ ಜಯಿಸಿದರು. ಒಂದು ತಾಸು, 5  ನಿಮಿಷಗಳ ಕಾಲ ನಡೆದ ಸೆಣಸಾಟದಲ್ಲಿ ಇಂಡೋನೇಷ್ಯಾ ಆಟಗಾರ ಶ್ರೀಕಾಂತ್ ಪ್ರಬಲ ಬಲ ಸವಾಲೊಡ್ಡಿದರು.

ಶ್ರೀಕಾಂತ್‍ಮುಂದಿನ ಸುತ್ತಿನಲ್ಲಿ ಚೀನಾದ ಕಿಯಾ ವೊ ಬಿನ್ ವಿರುದ್ಧ  ಸೆಣಸಲಿದ್ದಾರೆ. ಇನ್ನು 8ನೇ ಶ್ರೇಯಾಂಕಿತ ಆರ್‍ಎಂವಿ ಗುರುಸಾಯಿ ದತ್ ಕೂಡ ಟೂರ್ನಿಯಲ್ಲಿ 3ನೇ ಸುತ್ತು ತಲುಪುವಲ್ಲಿ  ಯಶ ಕಂಡಿದ್ದಾರೆ. ಸಿಂಗಪುರದ ಕಿಯಾನ್ ಯೆವ್ ಲೊಹ್ ಎದುರು 21-19, 19-21, 21-15ರಿಂದ ಜಯ ಪಡೆದರು. ಪ್ರಣಯ್ ತಮ್ಮ ಪ್ರತಿಸ್ಪರ್ಧಿ ಚೀನಾದ ಶಿ ಯೂಕಿ ವಿರುದ್ಧ 12-21, 22-20, 13-21  ಅಂತರದಿಂದ ಮಣಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com