ಮೇರಿ ಕೋಮ್ (ಸಂಗ್ರಹ ಚಿತ್ರ)
ಕ್ರೀಡೆ
ಸೆಮಿಫೈನಲ್‍ನಲ್ಲಿ ಸೋತ ಮೇರಿ
ಐದು ಬಾರಿ ವಿಶ್ವ ಚಾಂಪಿಯನ್ ಹಿರಿಮೆ ಹೊಂದಿರುವ ಮೇರಿ ಕೋಮ್, ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ)ನ ಒಲಿಂಪಿಕ್ಸ್ ಪರೀಕ್ಷಾ ಸುತ್ತಿನ ಪಂದ್ಯಾವಳಿಯಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ...
ನವದೆಹಲಿ: ಐದು ಬಾರಿ ವಿಶ್ವ ಚಾಂಪಿಯನ್ ಹಿರಿಮೆ ಹೊಂದಿರುವ ಮೇರಿ ಕೋಮ್, ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ)ನ ಒಲಿಂಪಿಕ್ಸ್ ಪರೀಕ್ಷಾ ಸುತ್ತಿನ ಪಂದ್ಯಾವಳಿಯಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.
ರಿಯೋ ಡಿ ಜುನೈರೋನಲ್ಲಿ ಶನಿವಾರ ರಾತ್ರಿ ನಡೆದ ಟೂರ್ನಿಯ ಉಪಾಂತ್ಯದ ಪಂದ್ಯದಲ್ಲಿ ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಮೇರಿ, ಅಮೆರಿಕದ ವರ್ಜೀನಿಯಾ ಫುಕ್ಸ್ ವಿರುದ್ಧ ಸೋಲು ಕಂಡರು. ಒಂದು ವರ್ಷ ದೀರ್ಘ ವಿಶ್ರಾಂತಿಯ ಬಳಿಕ ಮೇರಿಯವರು ಪಾಲ್ಗೊಂಡಿದ್ದ ಮೊದಲ ಅಂತಾರಾಷ್ಟ್ರೀಯ ಪಂದ್ಯಾವಳಿ ಇದಾಗಿತ್ತು. ಕಳೆದ ವರ್ಷ ಇಂಚಿಯಾನ್‍ನಲ್ಲಿ ನಡೆದಿದ್ದ ಏಷ್ಯನ್ ಕ್ರೀಡಾಕೂಟದ ಬಳಿಕ ಭುಜದ ಶಸ್ತ್ರಚಿಕಿತ್ಸೆಯಿಂದಾಗಿ ವಿಶ್ರಾಂತಿಯಲ್ಲಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ