ಫೆ ಲ್ಫ್ಸ್ ಗೆ ಸತತ ಮೂರನೇ ಚಿನ್ನ

ಅಮೆರಿಕ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಮೈಕಲ್ ಫೆಲ್ಫ್ಸ್ ಮತ್ತೊಂದು ಚಿನ್ನಗೆದ್ದಿದ್ದಾರೆ...
ಮೈಕಲ್ ಫೆಲ್ಫ್ಸ್ (ಸಂಗ್ರಹ ಚಿತ್ರ)
ಮೈಕಲ್ ಫೆಲ್ಫ್ಸ್ (ಸಂಗ್ರಹ ಚಿತ್ರ)

ಲಾಸ್ ಏಂಜಲೀಸ್: ಅಮೆರಿಕ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಮೈಕಲ್ ಫೆಲ್ಫ್ಸ್ ಮತ್ತೊಂದು ಚಿನ್ನಗೆದ್ದಿದ್ದಾರೆ.

ಗುರುವಾರ, 200 ಮೀ. ಮಿಡ್ಲೆಯಲ್ಲಿ ಚಿನ್ನ ಗೆದ್ದಿದ್ದ ಅವರು, ಶುಕ್ರವಾರ 100 ಮೀ. ಬಟರ್ ಫ್ಲೈನಲ್ಲಿಯೂ ಚಿನ್ನ ಗಳಿಸಿದ್ದರು. ಶನಿವಾರ ನಡೆದ 200 ಮೀ. ಬಟರ್ ಫ್ಲೈನಲ್ಲಿಯೂ ಚಿನ್ನದ ಪದಕಕ್ಕೆ  ಪಾತ್ರರಾಗಿದ್ದಾರೆ. ಇಲ್ಲಿನ ಕಿಂಗ್ ಕಂಟ್ರಿ ಆಕ್ವಟಿಕ್ ಸೆಂಟರ್‍ನಲ್ಲಿ ನಡೆದ ಸ್ಪರ್ಧೆಯಲ್ಲಿ ಅವರು ನಿಗದಿತ ದೂರವನ್ನು 56.11 ಸೆಕೆಂಡ್ ಗಳಲ್ಲಿ ಕ್ರಮಿಸಿ, ಬಂಗಾರದ ನಗೆ ಬೀರಿದರು. ಈ ವಿಭಾಗದಲ್ಲಿ  55.1 ಸೆಕೆಂಡ್ ಗಳ ಹಿನ್ನಡೆಯಲ್ಲಿ ಸ್ಪರ್ಧೆ ಮುಗಿಸಿದ ಚೇಸ್ ಕಾಲಿಜ್ 2ನೇ ಸ್ಥಾನ ಪಡೆದರೆ, 53.11 ಸೆಕೆಂಡ್ ಗಳ ಅಂತರದಲ್ಲಿ ಗುರಿ ಮುಟ್ಟಿದ ಡಕೊಟಾ ಹಾಡ್ಜ್‍ಸನ್ 3ನೇ ಸ್ಥಾನ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com