ಯೋಧಾಸ್ ಪಡೆಗೆ ಯುಲಿಯಾ

ಇದೆ 10ರಿಂದ ಆರಂಭವಾಗಲಿರುವ ಚೊಚ್ಚಲ ಪ್ರೊ ಕುಸ್ತಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಯೋಧಾಸ್ ತಂಡದಲ್ಲಿ ಸ್ವೀಡನ್‍ನ ಜೊಹಾನ್ ಮ್ಯಾಟ್‍ಸನ್ ಬದಲಿಗೆ ಅಜರ್..
ಬೆಂಗಳೂರು ಯೋಧಾಸ್ (ಸಂಗ್ರಹ ಚಿತ್ರ)
ಬೆಂಗಳೂರು ಯೋಧಾಸ್ (ಸಂಗ್ರಹ ಚಿತ್ರ)

ರಾಯ್ ಪುರ: ಇದೆ 10ರಿಂದ ಆರಂಭವಾಗಲಿರುವ ಚೊಚ್ಚಲ ಪ್ರೊ ಕುಸ್ತಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಯೋಧಾಸ್ ತಂಡದಲ್ಲಿ ಸ್ವೀಡನ್‍ನ ಜೊಹಾನ್ ಮ್ಯಾಟ್‍ಸನ್ ಬದಲಿಗೆ ಅಜರ್  ಬಜೇನ್‍ನ ಒಲಿಂಪಿಕ್ಸ್ ಪದಕ ವಿಜೇತೆ ಯುಲಿಯಾ ರಾಟ್ಕೆವಿಚ್ ಅವರನ್ನು ಸೇರಿಸಿಕೊಳ್ಳಲಾಗಿದೆ.

ಬೆಂಗಳೂರು ಯೋಧಾಸ್ ತಂಡ ತನ್ನ ಮೊದಲ ಪಂದ್ಯವನ್ನು ಡಿ.11ರಂದು ಹರ್ಯಾಣ ವಿರುದ್ಧ ದೆಹಲಿಯ ಕೆ.ಡಿ ಜಾಧವ್ ಕ್ರೀಡಾಂಗಣದಲ್ಲಿ ಆಡಲಿದೆ. ನಾನು ಕಳೆದ ಕೆಲ ತಿಂಗಳಿನಿಂದ ಹಲವು  ಟೂರ್ನಿಗಳಲ್ಲಿ ಭಾಗವಹಿಸಿದ್ದು, ಹೊಸ ಸವಾಲಿಗೆ ಸಂಪೂರ್ಣವಾಗಿ ಸಿದ್ಧನಾಗಿದ್ದೇನೆ. ಬೆಂಗಳೂರು ತಂಡ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಂಪೂರ್ಣ ಪ್ರಯತ್ನ ನೀಡುತ್ತೇನೆ ಎಂದು  ಯುಲಿಯಾ ತಿಳಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com