ಶಶಾಂಕ್ ಮನೋಹರ್
ಕ್ರೀಡೆ
ನಾನೇನು ಜ್ಯೋತಿಷಿಯೇ: ಶಶಾಂಕ್ ಮನೋಹರ್
ಬಹು ಚರ್ಚಿತ ಭಾರತ ಮತ್ತು ಪಾಕಿಸ್ತಾ ನ ನಡುವಣದ ಕ್ರಿಕೆಟ್ ಸರಣಿ ಇಂಥ ದಿನವೇ ನಡೆಯುತ್ತದೆ ಎಂದು ಮುಂತಿಳಿಸಲು ತಾನೇನೂ ಜ್ಯೋತಿಷಿಯೇ ಎಂದು ಬಿಸಿಸಿಐ...
ನವದೆಹಲಿ: ಬಹು ಚರ್ಚಿತ ಭಾರತ ಮತ್ತು ಪಾಕಿಸ್ತಾ ನ ನಡುವಣದ ಕ್ರಿಕೆಟ್ ಸರಣಿ ಇಂಥ ದಿನವೇ ನಡೆಯುತ್ತದೆ ಎಂದು ಮುಂತಿಳಿಸಲು ತಾನೇನೂ ಜ್ಯೋತಿಷಿಯೇ ಎಂದು ಬಿಸಿಸಿಐ
ಅಧ್ಯಕ್ಷ ಶಶಾಂಕ್ ಮನೋಹರ್ ಪ್ರತಿಕ್ರಿಯಿಸಿದ್ದಾರೆ. 2 ನೂತನ ಐಪಿಎಲ್ ತಂಡಗಳ ಸೇರ್ಪಡೆ ಸಂದರ್ಭದಲ್ಲಿ ಮಾತ ನಾಡಿದ ಅವರು, ``ಸರಣಿ ನಡೆಯುವ ತಾಣ, ಪ್ರಸಾರದ ಸಂಗತಿಗಳನ್ನು ಕುರಿತು ಪಾಕಿಸ್ತಾನ ನಿರ್ಧರಿಸಲಿದೆ. ಏಕೆಂದರೆ ಇದು ಅವರ ಸರಣಿ. ದ್ವಿಪಕ್ಷೀಯ ಸರಣಿಗಂತೂ ನಮ್ಮ ಕಡೆಯಿಂದ ಒಪ್ಪಿಗೆ ಸಿಕ್ಕಿದೆ. ಆದರೆ, ಸರ್ಕಾರ ಈ ಕುರಿತು ಏನು ನಿರ್ಧಾರ ತಳೆಯುತ್ತದೆ ಎಂಬುದನ್ನು ಗ್ರಹಿಸಲು ನಾನು ಜ್ಯೋತಿಷಿಯೂ ಅಲ್ಲ ಎಂದು ಶಶಾಂಕ್ ಅತೀವ ಜಾಣ್ಮೆಯಿಂದ ಉತ್ತರಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ