
ಮನಿಲಾ: ಪಂದ್ಯದ ಅಂತಿಮ ಕ್ಷಣದವರೆಗೂ ರೋಚಕ ಹಣಾಹಣಿಯಿಂದ ಕೂಡಿದ್ದ ಇಂಟರ್ ನ್ಯಾಷನಲ್ ಪ್ರಿಮಿಯರ್ ಟೆನಿಸ್ ಲೀಗ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಇಂಡಿಯನ್ ಏಸಸ್ ತಂಡ ಕೂದಲೆಳೆಯ ಅಂತರದಲ್ಲಿ ಫಿಲಿಪ್ಪೀನ್ಸ್ ಮ್ಯಾವರಿಕ್ಸ್ ವಿರುದ್ಧ ಸೋಲನುಭವಿಸಿತು.
ಮಂಗಳವಾರ ನಡೆದ ಪಂದ್ಯದಲ್ಲಿ ಇಂಡಿಯನ್ ಏಸಸ್ ತಂಡ 2425 ಅಂಕಗಳ ಅಂತರದಲ್ಲಿ ಆತಿಥೇಯ ಫಿಲಿಪ್ಪೀನ್ಸ್ ವಿರುದ್ಧ ಪರಾಭವಗೊಂಡಿತು. ಪಂದ್ಯದ ಅಂತಿಮ ಸೆಣಸಾಟದಲ್ಲಿ 14 ಬಾರಿ ಗ್ರ್ಯಾನ್ ಸ್ಲಾಮ್ಪ್ರಶಸ್ತಿ ವಿಜೇತ ಸ್ಪಿನ್ ನ ರಾಫೆಲ್ ನಡಾಲ್ ತಮ್ಮ ಪ್ರತಿಸ್ಪರ್ಧಿ ಸರ್ಬಿಯಾದ ಮಿಲೊಸ್ ರೊನಿಕ್ ವಿರುದ್ಧ 56 (67) ಅಂತರದಲ್ಲಿ ಸೋಲನುಭವಿಸಿದ್ದು, ಇಂಡಿಯನ್ ಏಸಸ್ ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು. ಇದಕ್ಕೂ ಮುನ್ನ ಲೆಜೆಂಡ್ ಸಿಂಗಲ್ಸ್ ನಲ್ಲಿ ಏಸಸ್ ನ ಫ್ಯಾಬ್ರಿಸ್ ಸ್ಯಾಂಟೊರೊ ನಿರಾಸೆ ಅನುಭವಿಸಿದರು.
ನಂತರ ಪುರುಷರ ಡಬಲ್ಸ್ ನಲ್ಲಿ ಏಸಸ್ ಇವಾನ್ ಡೊಡಿಗ್ ಮತ್ತು ನಡಾಲ್ ಜಯ ಸಾಧಿಸಿ ಪಂದ್ಯದಲ್ಲಿ ಸಮಬಲ ಸಾಧಿಸಿದರು. ರೋಹನ್ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ಜೋಡಿ ಮುನ್ನಡೆ ತಂದು ಕೊಟ್ಟರು. ಈ ವೇಳೆ ಸೆರೆನಾ ವಿಲಿಯಮ್ಸ್ ಆತಿಥೇಯರಿಗೆ ಆಸರೆಯಾದರು.
Advertisement