ಎಂಸಿಸಿ: ಜಯವರ್ಧನೆಗೆ ಆಜೀವ ಸದಸ್ಯತ್ವ

ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೇಲಾ ಜಯವರ್ಧನೆ ಅವರಿಗೆ ಮೆರ್ಲಿಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ)ನ ಗೌರವ ಆಜೀವ ಸದಸ್ಯತ್ವ ಲಭ್ಯವಾಗಿದೆ..
ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ (ಸಂಗ್ರಹ ಚಿತ್ರ)
ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ (ಸಂಗ್ರಹ ಚಿತ್ರ)

ನವದೆಹಲಿ: ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೇಲಾ ಜಯವರ್ಧನೆ ಅವರಿಗೆ ಮೆರ್ಲಿಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ)ನ ಗೌರವ ಆಜೀವ ಸದಸ್ಯತ್ವ ಲಭ್ಯವಾಗಿದೆ.

ಈ ಗೌರವ ಪಡೆದಿರುವ ಲಂಕಾದ 14ನೇ ಆಟಗಾರನಾಗಿ ಜಯವರ್ಧನೆ ಹೊರಹೊಮ್ಮಿದ್ದಾರೆ. ಈ ಬಗ್ಗೆ ಸೋಮವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಂಸಿಸಿ, 149 ಟೆಸ್ಟ್ ಪಂದ್ಯಗಳನ್ನು  ಆಡಿರುವ ಅವರು, ಸರಾಸರಿ 49.84ರ ಆಧಾರದಲ್ಲಿ ಒಟ್ಟು 11,814 ರನ್ ಪೇರಿಸಿ ವಿಶ್ವದ ಪ್ರಮುಖ ಬ್ಯಾಟ್ಸ್ ಮನ್‍ಗಳಲ್ಲಿ ಒಬ್ಬರಾಗಿದ್ದಾರೆ. ಮಹಾನ್ ಸಾಧನೆಗೈದಿರುವ ಜಯವರ್ಧನೆ ಅವರಿಗೆ  ಗೌರವಯುತವಾಗಿ ಆಜೀವ ಸದಸ್ಯತ್ವ ನೀಡಲಾಗಿದೆ ಎಂದು ಎಂಸಿಸಿ ತನ್ನ ನಡೆಯನ್ನು ಸಮರ್ಥಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com