
ದುಬೈ: ಇತ್ತೀಚೆಗಷ್ಟೇ ಮುಕ್ತಾಯ ಕಂಡ ದಕ್ಷಿಣ ಆಫ್ರಿಕಾ ವಿರುದ್ಧದ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಅರೆಕಾಲಿಕ ಬೌಲರ್ ಆಗಿ ಬೌಲಿಂಗ್ ಮಾಡಿದ ಶಿಖರ್ ಧವನ್ ಅವರ ಶೈಲಿ ಮೇಲೆ ಅನುಮಾನ ವ್ಯಕ್ತವಾಗಿದೆ.
ಪಂದ್ಯದ ಅಧಿಕಾರಿಗಳು ಧವನ್ ಬೌಲಿಂಗ್ ಶೈಲಿಯು ನಿಯಮ ಬಾಹಿರವಾಗಿದೆ ಎಂದು ಐಸಿಸಿಗೆ ವರದಿ ಸಲ್ಲಿಸಿದ್ದಾರೆ. ಅಲ್ಲದೆ ಈ ಕುರಿತು ಟೀಂ ಇಂಡಿಯಾ ಆಡಳಿತ ಮಂಡಳಿಗೂ ಮಾಹಿತಿ ನೀಡಲಾಗಿದೆ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಧವನ್ ಬೌಲಿಂಗ್ ಶೈಲಿ ನಿಗಾ ವಹಿಸಲಾಗಿದ್ದು, ಐಸಿಸಿ ನಿಯಮದಂತೆ ಪರಿಶೀಲಿಸಲಾಗುವುದು. 14 ದಿನಗಳ ಒಳಗಾಗಿ ಅವರು ಪರೀಕ್ಷೆಗೆ ಒಳಗಾಗಬೇಕಿದೆ. ನಂತರ ಫಲಿಂತಾಂಶ ಬರುವವರೆಗೂ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಬೌಲಿಂಗ್ ಮುಂದುವರಿಸಬಹುದು.
Advertisement