
ಮಲೇಷ್ಯಾ: ಕಳೆದ ವರ್ಷದ `ಐ' ಲೀಗ್ ಪಂದ್ಯಾವಳಿಯ ರನ್ನರ್ ಅಪ್ ಬೆಂಗಳೂರು ಎಫ್ ಸಿ ಮುಂದಿನ ಆವೃತ್ತಿಯ ಏಷ್ಯನ್ ಫುಟ್ಬಾಲ್ ಕಾನೆ#ಡರೇಷನ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಎಚ್ ಗುಂಪಿನಲ್ಲಿ ಸ್ಥಾನ ಪಡೆದಿದೆ.
ಗುರುವಾರ ಕೌಲಾಂಲಂಪುರದಲ್ಲಿ ನಡೆದ ಏಷ್ಯನ್ ಫುಟ್ಬಾಲ್ ಕಾನ್ಫೆಡರೇಷನ್ ಕ್ಲಬ್‍ಗಳ ಕಾರ್ಯಾಗಾರದಲ್ಲಿ ಮುಂದಿನ ಆವೃತ್ತಿಯ ಎಎಫ್ ಸಿ ಕಪ್ ತಂಡಗಳನ್ನು ಗುಂಪುಗಳಾಗಿ ವಿಂಗಡಿಸಿ ವೇಳಾಪಟ್ಟಿ ಪ್ರಕಟಿಸಲಾಯಿತು. ಬಿಎಫ್ ಸಿ `ಎಚ್' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಮಲೇಷ್ಯಾದ ಜೊಹೊರ್ ಡರುಲ್ ತಜ್ಮಿ, ಲಾವೊದ ಲಾವೊ ಟೊಯೋಟಾ ಎಫ್ ಸಿ ಮತ್ತು ಮ್ಯಾನ್ಮಾರ್‍ನ ಅಯೆಯವಾಡಿ ಎಫ್ ಸಿ ವಿರುದ್ಧ ಸೆಣಸಲಿದೆ. ``ಎಎಫ್ ಸಿ ಕಪ್ ಟೂರ್ನಿಯ ವೇಳಾಪಟ್ಟಿ ಬಿಡುಗಡೆಯಾಗಿರುವುದು ಸಂತೋಷ ತಂದಿದೆ. ಈ ವರ್ಷವೂ ಉತ್ತಮ ಪ್ರದರ್ಶನ ನೀಡುತ್ತೆವೆ'' ಎಂದು ಬಿಎಫ್ ಸಿ ಕೋಚ್ ಆ್ಯಶ್ಲೆ ವೆಸ್ಟ್ ವುಡ್ ತಿಳಿಸಿದ್ದಾರೆ.
Advertisement