ಗುರಿಕಾರ್ತಿಗೆ ಸಿಕ್ತು ರಿಲೀಫ್ !

ಇತ್ತೀಚೆಗಷ್ಟೇ ಆರ್ಥಿಕ ಸಮಸ್ಯೆಗೆ ಸಿಲುಕಿ ರಸ್ತೆ ಬದಿಯಲ್ಲಿ ಫುಡ್ ಅಂಗಡಿಯನ್ನು ತೆರೆದಿದ್ದ 21 ವರ್ಷದ ರಾಜ್ಯ ಮಟ್ಟದ ರೈಫಲ್ ಶೂಟರ್ ಪುಷ್ಪ ಗುಪ್ತಾ ಅವರಿಗೆ ಗುಜರಾತ್ ಸ್ಟೇಟ್ ಫರ್ಟಿಲೈಸರ್ ಕಂಪನಿ..
ಪುಷ್ಪಾ ಗುಪ್ತಾ (ಸಂಗ್ರಹ ಚಿತ್ರ)
ಪುಷ್ಪಾ ಗುಪ್ತಾ (ಸಂಗ್ರಹ ಚಿತ್ರ)

ವಡೋದರ: ಇತ್ತೀಚೆಗಷ್ಟೇ ಆರ್ಥಿಕ ಸಮಸ್ಯೆಗೆ ಸಿಲುಕಿ ರಸ್ತೆ ಬದಿಯಲ್ಲಿ ಫುಡ್ ಅಂಗಡಿಯನ್ನು ತೆರೆದಿದ್ದ 21 ವರ್ಷದ ರಾಜ್ಯ ಮಟ್ಟದ ರೈಫಲ್ ಶೂಟರ್ ಪುಷ್ಪ ಗುಪ್ತಾ ಅವರಿಗೆ ಗುಜರಾತ್ ಸ್ಟೇಟ್  ಫರ್ಟಿಲೈಸರ್ ಕಂಪನಿ ಉದ್ಯೋಗಾವಕಾಶ ನೀಡಲು ಮುಂದಾಗಿದೆ.

ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ 8 ಪದಕಗಳನ್ನು ಜಯಿಸಿದ್ದ ಪುಷ್ಪ ಗುಪ್ತಾ, ರಾಷ್ಟ್ರೀಯ ಚಾಂಪಿಯನ್ ಆಗಬೇಕೆಂಬ ಕನಸನ್ನು ಬೆನ್ನಟ್ಟಿದ್ದು, ಆರ್ಥಿಕ ಸಂಕಷ್ಟ ಎದುರಾದ ಹಿನ್ನೆಲೆಯಲ್ಲಿ ಕಳೆದ ಫೆಬ್ರವರಿಯಲ್ಲಿ ಚೈನೀಸ್ ತಿನಿಸುಗಳ ಅಂಗಡಿಯನ್ನು ತೆರೆದಿದ್ದರು. ಇತ್ತೀಚೆಗಷ್ಟೇ ಶೂಟರ್ ರಸ್ತೆಬದಿಯಲ್ಲಿ ತಿನಿಸು ಮಾರುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾದ ನಂತರ,  ಜಿಎಸ್ ಎಫ್ ಸಿ ಆಕೆಗೆ ಉದ್ಯೋಗಾವಕಾಶ ನೀಡಲು ಮುಂದಾಗಿದ್ದು, ಗುಮಾಸ್ತೆ ಕೆಲಸ ನೀಡಲು ನಿರ್ಧರಿಸಿದೆ.

``ನಾನು ಬುಧವಾರ ಆಕೆಯ ಮನೆಗೆ ತೆರಳಿ ಭೇಟಿ ಮಾಡಿದ್ದೆ. ಕುಟುಂಬದ ಜವಾಬ್ದಾರಿ ಹೊತ್ತು ಜೀವನ ನಿರ್ವಹಣೆಗಾಗಿ ರಸ್ತೆಬದಿಯಲ್ಲಿ ಅಂಗಡಿ ನಡೆಸುತ್ತಿರುವ ಕತೆ ಕೇಳಿ ಉದ್ಯೋಗ ನೀಡಲು ನಿರ್ಧರಿಸಿದೆ'' ಎಂದು ಜಿಎಸ್‍ಎಫ್  ಸಿ ಮುಖ್ಯಸ್ಥ ಸುದೀಪ್ ಕುಮಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com