
ನವದೆಹಲಿ: ಭಾರತ-ಪಾಕಿಸ್ತಾನ ಮಧ್ಯೆ ಕ್ರಿಕೆಟ್ ಸರಣಿ ನಡೆಯುವ ಯಾವುದೇ ಖಾತರಿ ಇಲ್ಲದಿದ್ದರೂ, ಮುಂದಿನ ವರ್ಷ ಆರಂಭಕ್ಕೆ ನಡೆಯುವ ಐಸಿಸಿ ವಿಶ್ವಕಪ್ ಟ್ವಂಟಿ-ಟ್ವಂಟಿ ಪಂದ್ಯದಲ್ಲಿ ಭಾರತ-ಪಾಕ್ ರಾಷ್ಟ್ರಗಳು ಜೊತೆಯಾಗಿ ಆಡುವುದನ್ನಂತೂ ವೀಕ್ಷಿಸುವ ಅದೃಷ್ಟ ಕ್ರಿಕೆಟ್ ಪ್ರೇಮಿಗಳಿಗಿದೆ.
ಐಸಿಸಿ ಟ್ವಂಟಿ-20 ವಿಶ್ವಕಪ್ 2016ರ ಪಂದ್ಯಕ್ಕೆ ತಂಡಗಳು ಮತ್ತು ವೇಳಾಪಟ್ಟಿಗಳನ್ನು ನಿರ್ಧರಿಸಿ ಐಸಿಸಿ ಇಂದು ಪ್ರಕಟಣೆ ಹೊರಡಿಸಿದೆ.ಭಾರತ ಮತ್ತು ಪಾಕ್ ಒಂದೆ ಗುಂಪಿನಲ್ಲಿ ಕಾಣಿಸಿಕೊಂಡಿದ್ದು, ಕ್ವಾಲಿಫಯರ್ 1 ಗುಂಪಿನಲ್ಲಿ ಇರುವ ಇತರೆರಡು ಬಲಾಡ್ಯ ತಂಡಗಳು ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್ .ಕ್ವಾಲಿಫಯರ್ 2 ಗುಂಪಿನಲ್ಲಿ ಶ್ರೀಲಂಕಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳಿವೆ.
ಮಾರ್ಚ್ 8ರಿಂದ ಏಪ್ರಿಲ್ 3ರವರೆಗೆ 27 ದಿನಗಳ ಕಾಲ ಬೆಂಗಳೂರು, ಚೆನ್ನೈ, ಧರ್ಮಶಾಲ, ಕೋಲ್ಕತ್ತಾ, ಮೊಹಾಲಿ, ಮುಂಬೈ, ನಾಗ್ಪುರ ಮತ್ತು ದೆಹಲಿಗಳಲ್ಲಿ ಪಂದ್ಯ ನಡೆಯಲಿದೆ.
ಭಾರತ-ಪಾಕಿಸ್ತಾನ ನಡುವೆ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಮಾರ್ಚ್ 19ರಂದು ಪಂದ್ಯ ನಡೆಯಲಿದೆ. ಟಿ-20 ವಿಶ್ವಕಪ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
Advertisement