ರೋ ಎನ್ನುವ ಪತ್ನಿ ರಿತಿಕಾ

ರೋಹಿತ್ ಶರ್ಮಾ ಅವರು ಬೋಲ್ಡ್ ಆಗಿರುವ ಸುದ್ದಿ ಈಗ ಜಗತ್ತಿಗೆ ಗೊತ್ತು. ಅವರನ್ನು ಬೋಲ್ಡ್ ಮಾಡಿದ್ದು ಯಾರು ಎಂಬುದೂ ಗೊತ್ತಾಗಿದೆ...
ರೋಹಿತ್ ಶರ್ಮಾ ಮತ್ತು ರಿತಿಕಾ (ಸಂಗ್ರಹ ಚಿತ್ರ)
ರೋಹಿತ್ ಶರ್ಮಾ ಮತ್ತು ರಿತಿಕಾ (ಸಂಗ್ರಹ ಚಿತ್ರ)

ರೋಹಿತ್ ಶರ್ಮಾ ಅವರು ಬೋಲ್ಡ್ ಆಗಿರುವ ಸುದ್ದಿ ಈಗ ಜಗತ್ತಿಗೆ ಗೊತ್ತು. ಅವರನ್ನು ಬೋಲ್ಡ್ ಮಾಡಿದ್ದು ಯಾರು ಎಂಬುದೂ ಗೊತ್ತಾಗಿದೆ.

ಆದರೆ ಅವರ ಹಿನ್ನೆಲೆಯೇನು ಗೊತ್ತೆ? ರೋಹಿತ್ ಶರ್ಮಾ ಅವರ ಕೈ ಹಿಡಿದಿರುವ ರಿತಿಕಾ 28 ವರ್ಷದ ಸ್ಪೋರ್ಟ್ಸ್ ಮ್ಯಾನೇಜರ್. ಆರು ವರ್ಷಗಳಿಂದ ರೋಹಿತ್ರಿತಿಕಾ ಪ್ರೀತಿಯಲ್ಲಿ ಮುಳುಗಿ  ಎದ್ದಿದ್ದಾರೆ. ಬೋರಿವಲಿ ಸ್ಪೋರ್ಟ್ಸ್  ಕ್ಲಬ್‍ನಲ್ಲಿ ಪ್ರಫೋಸ್ ಮಾಡಿ ರಿತಿಕಾರ ಹೃದಯ ಗೆದ್ದಿದ್ದ ರೋಹಿತ್, ರಿತಿಕಾ ಪಾಲಿಗೆ ಪ್ರೀತಿಯ `ರೋ'. ಶಿಸ್ತಿನ ಸಿಪಾಯಿ ಆದ ರಿತಿಕಾ, ರೋಹಿತ್ ಆಡುವ  ಪ್ರತಿಯೊಂದು ಮ್ಯಾಚ್‍ನಲ್ಲಿ ಪ್ರತ್ಯಕ್ಷರಾಗಿರುತ್ತಿದ್ದರಂತೆ. ಅದು ದೇಸಿ ಕ್ರಿಕೆಟ್ ಪಂದ್ಯವಿರಲಿ, ಅಂತಾರಾಷ್ಟ್ರೀಯ ಪಂದ್ಯವಿರಲಿ.

ರೋಹಿತ್ ಎಲ್ಲಿದ್ದರೂ, ಅಲ್ಲಿ ಜೊತೆಗಿದ್ದು ಹುರಿದುಂಬಿಸುವ ಉತ್ಸಾಹಿ ಈಕೆ. ಯುವ ರಾಜ್ ಸಿಂಗ್‍ಗೆ ರಾಖಿ ಕಟ್ಟುವ ಸೋದರಿ. ಭಾರತ ಕ್ರಿಕೆಟ್ ತಂಡಕ್ಕೆ ಮತ್ತು ಮುಂಬೈ ಇಂಡಿಯನ್ ಟೀಮ್ಗೆ ಜೈ  ಎನ್ನುವುದಕ್ಕೆ ಸದಾ ಮುಂದಿರುವ ರಿತಿಕಾ ರೋಹಿತ್ ಶರ್ಮಾ ಬದುಕಿನಲ್ಲಿ ಹೊಸ ಹುಮ್ಮಸ್ಸು ತುಂಬಲಿದ್ದಾರೆ ಎಂದು ತಂಡದ ಎಲ್ಲ ಸದಸ್ಯರು ಮದುವೆ ದಿನ ಗೋಳು ಹೊಯ್ದುಕೊಂಡಿದ್ದಾರೆ.  ಸ್ಪೋರ್ಟ್ಸ್ ಮ್ಯಾನೇಜರ್ ಆಗಿರುವುದರಿಂದ ರೋ ಎಂದು ರೋಪ್ ಹಾಕಲೂ ಬಹುದು ಎಂದು ಕಾಲೆಳೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com