ದಿವ್ಯಾ ಕಾಕ್ರನ್
ದಿವ್ಯಾ ಕಾಕ್ರನ್

ಕುಸ್ತಿಯಲ್ಲೊಂದು 'ದಿವ್ಯ' ಶಕ್ತಿ

ಕುಸ್ತಿ ಪಂದ್ಯಗಳಲ್ಲಿ ತನ್ನ ಎದುರಾಳಿ ಹೆಣ್ಣೋ ಗಂಡೋ ಎಂದು ನೋಡಲ್ಲ. ಅದ್ಯಾರೇ ಆಗಿರಲಿ ಅವರನ್ನು ಬಗ್ಗು ಬಡಿಯುವುದಷ್ಟೇ ಈ ಹುಡುಗಿಗೆ ಗೊತ್ತು. ಈಕೆಯ ಹೆಸರು...
ದೆಹಲಿ: ಕುಸ್ತಿ ಪಂದ್ಯಗಳಲ್ಲಿ ತನ್ನ ಎದುರಾಳಿ ಹೆಣ್ಣೋ ಗಂಡೋ ಎಂದು ನೋಡಲ್ಲ. ಅದ್ಯಾರೇ ಆಗಿರಲಿ ಅವರನ್ನು ಬಗ್ಗು ಬಡಿಯುವುದಷ್ಟೇ ಈ ಹುಡುಗಿಗೆ ಗೊತ್ತು. ಈಕೆಯ ಹೆಸರು ದಿವ್ಯಾ ಕಾಕ್ರನ್. ವಯಸ್ಸು  17 ! 
ಪೂರ್ವ ದೆಹಲಿಯ ಗೋಕುಲ್‌ಪುರ್ ನಿವಾಸಿಯಾದ ದಿವ್ಯಾ ಕುಸ್ತಿಯಲ್ಲಿ ಗಂಡು ಮಕ್ಕಳನ್ನೂ ಸೋಲಿಸಿ ಜಯಭೇರಿ ಬಾರಿಸಿದ್ದಾಳೆ. ದಿವ್ಯಾಳ ಈ ಗಟ್ಟಿಗತ್ತಿ ಅನಿಸೋ ನಿಲುವೇ ಈಕೆಯನ್ನು ಇತರ ಮಹಿಳಾ ಕುಸ್ತಿಪಟುಗಳಿಂದ ವಿಭಿನ್ನವಾಗಿಸಿದೆ.
ಸಾಮಾನ್ಯವಾಗಿ ಕುಸ್ತಿಯಲ್ಲಿ ಮಹಿಳೆಯರು ಮಹಿಳೆಯರೊಂದಿಗೆ ಹಾಗೂ ಪುರುಷರು ಪುರುಷರೊಂದಿಗೆ ಮಾತ್ರ ಸ್ಪರ್ಧಿಸುತ್ತಾರೆ. ಆದರೆ ದಿವ್ಯಾ ಆ ನಿಯಮವನ್ನು ಮುರಿದಿದ್ದಾರೆ. 
ಕುಸ್ತಿಪಟುವಾಗಿದ್ದು ಹೇಗೆ?
ಈಕೆಯ ಹುಟ್ಟಿದ್ದು ಕುಸ್ತಿ ಪಟುಗಳ ಕುಟುಂಬದಲ್ಲೇ. ಈಕೆಗೆ ಅಪ್ಪನೇ ಗುರು. ಈಕೆ ಕುಸ್ತಿ ಅಂಗಣಕ್ಕೆ ಬರಲು ಕಾರಣ ಬಡತನ. ಎಲ್ಲಿಯೇ ಕುಸ್ತಿ ಪಂದ್ಯಗಳಿರಲಿ, ಅದು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ ಎಲ್ಲದರಲ್ಲೂ ದಿವ್ಯಾ ಭಾಗವಹಿಸುತ್ತಿದ್ದಳು. ಪಂದ್ಯಗಳಲ್ಲಿ ಭಾಗವಹಿಸಿ ಅಲ್ಲಿ ಸಿಗುವ ನಗದು ಬಹುಮಾನವೇ ಈಕೆಯ ಗುರಿಯಾಗಿತ್ತು.
1010ರ ನಂತರ ದಿವ್ಯಾ ಕುಸ್ತಿಯಲ್ಲಿ ಪ್ರವೀಣತೆ ಗಳಿಸುತ್ತಾ ಹೋದಳು. ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸುತ್ತಾ ದೇಶ ವಿದೇಶ ಸುತ್ತುವ ದಿವ್ಯಾ, ಎದುರಾಳಿ ಗಂಡು ಆಗಿರಲಿ, ಹೆಣ್ಣು ಆಗಿರಲಿ ಎಲ್ಲರನ್ನೂ ಮಣಿಸಿ ತನ್ನ ಸಾಮರ್ಥ್ಯ ಪ್ರದರ್ಶನ ಮಾಡುತ್ತಿದ್ದಳು. ಹೀಗೆ ಬಹುಮಾನವಾಗಿ ಸಿಗುವ ದುಡ್ಡಿನಿಂದ ಈಕೆ ಜೀವನವನ್ನು ಸುಗಮವಾಗಿಸಿಕೊಂಡಿದ್ದಾಳೆ.
ಭಾರತೀಯ ಕುಸ್ತಿಪಟುಗಳ ಭರವಸೆ
ಇಲ್ಲಿನ ಸಲಾವಾ ಗ್ರಾಮದಲ್ಲಿ ಸಾಂಪ್ರದಾಯಿಕ ಕುಸ್ತಿ ಪಂದ್ಯ ನಡೆಯುತ್ತಿರುತ್ತದೆ. ಇಲ್ಲಿಯವರೆಗೆ ಇಲ್ಲಿ ಯಾವುದೇ ಹೆಣ್ಮಕ್ಕಳು ಗಂಡನ್ನು ಕುಸ್ತಿಯಲ್ಲಿ ಸೋಲಿಸಿದ ದಾಖಲೆಗಳಿಲ್ಲ. ಆದರೆ ಈ ಬಾರಿ ದಿವ್ಯಾ ಗಂಡಸರನ್ನು ಸೋಲಿಸಿ ಬಹುಮಾನ ಗೆದ್ದಿದ್ದಾಳೆ. ಈವರೆಗೆ ಭಾರತದ ಕುಸ್ತಿ ಪಟುಗಳಲ್ಲಿ  ಸೋನಿಕಾ ಮತ್ತು ದೀಪಿಕಾ ಸಹೋದರಿಯರು ಮಿಂಚಿದ್ದರು. ಇವರಿಬ್ಬರೂ ಒಲಿಂಪಿಕ್ಸ್‌ನಲ್ಲಿ  ಭಾಗವಹಿಸಿ ದೇಶಕ್ಕೆ ಹೆಮ್ಮೆ ತಂದಿದ್ದರು. ಇದೀಗ ದಿವ್ಯಾ ಕುಸ್ತಿಪಟುಗಳ ಸಾಲಿನಲ್ಲಿ ಭರವಸೆಯ ಕಿರಣವಾಗಿ ಹೊರ ಹೊಮ್ಮಿದ್ದಾರೆ.
ದಿವ್ಯಾಗೆ ಇನ್ನಷ್ಟು ಅವಕಾಶಗಳು, ಗೆಲವು ಸಿಗಲಿ ಎಂಬುದು ನಮ್ಮ ಆಶಯ.

Related Stories

No stories found.

Advertisement

X
Kannada Prabha
www.kannadaprabha.com