ಬ್ಲಾಟರ್‍ಗೆ 2 ವರ್ಷ ವಜಾ ಅಥವಾ ಆಜೀವ ನಿಷೇಧ

ವಿಶ್ವ ಫುಟ್ಬಾಲ್‍ನ ಆಡಳಿತ ಮಂಡಳಿ ಫಿಫಾದಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣದ ಹಿನ್ನೆಲೆಯಲ್ಲಿ ವಜಾಗೊಂಡಿರುವ ಮಾಜಿ ಅಧ್ಯಕ್ಷ ಸೆಪ್ ಬ್ಲಾಟರ್, ಈ ಪ್ರಕರಣದಲ್ಲಿ ಎರಡು ವರ್ಷ ವಜಾ...
ಫಿಫಾ ಮಾಜಿ ಅಧ್ಯಕ್ಷ ಸೆಪ್ ಬ್ಲಾಟರ್ (ಸಂಗ್ರಹ ಚಿತ್ರ)
ಫಿಫಾ ಮಾಜಿ ಅಧ್ಯಕ್ಷ ಸೆಪ್ ಬ್ಲಾಟರ್ (ಸಂಗ್ರಹ ಚಿತ್ರ)

ಜ್ಯೂರಿಚ್: ವಿಶ್ವ ಫುಟ್ಬಾಲ್‍ನ ಆಡಳಿತ ಮಂಡಳಿ ಫಿಫಾದಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣದ ಹಿನ್ನೆಲೆಯಲ್ಲಿ ವಜಾಗೊಂಡಿರುವ ಮಾಜಿ ಅಧ್ಯಕ್ಷ ಸೆಪ್ ಬ್ಲಾಟರ್, ಈ ಪ್ರಕರಣದಲ್ಲಿ ಎರಡು ವರ್ಷ  ವಜಾ ಮತ್ತು ರು.1 ಕೋಟಿ (161,591 ಅಮೆರಿಕನ್ ಡಾಲರ್) ದಂಡ ಅಥವಾ ಆಜೀವ ನಿಷೇಧದ ಶಿಕ್ಷೆ ದೊರೊಯುವ ನಿರೀಕ್ಷೆಯಲ್ಲಿದ್ದಾರೆ.

ಬುಧವಾರ ಬಂದ ಮಾಧ್ಯಮಗಳ ವರದಿಯಲ್ಲಿ ಬ್ಲಾಟರ್ ಫಿಫಾ ನೈತಿಕ ಸಮಿತಿಯ ನಿಯಮ ಮತ್ತು ನಿರ್ಧಾರಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿರುವ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ.  ಮತ್ತೊಂದೆಡೆ ಶುಕ್ರವಾರ ನೈತಿಕ ಸಮಿತಿ ಮುಂದೆ ತನಿಖೆಗೆ ಹಾಜರಾಗದಿರಲು ಫಿಫಾ ಉಪಾಧ್ಯಕ್ಷ ಮೈಕಲ್ ಪ್ಲಾಟಿನಿ ನಿರ್ಧರಿಸಿದ್ದಾರೆ. ನಿರಪರಾಧಿಗಳ ವಿರುದ್ಧ ಶಿಕ್ಷೆಯನ್ನು ಪ್ರಕಟಿಸಲಾಗಿದ್ದು,  ವಕ್ತಾರರ ಮೂಲಕ ಮಾಧ್ಯಮಗಳಿಗೆ ತಿಳಿಸಲಾಗಿದೆ. ಹಾಗಾಗಿ ಶುಕ್ರವಾರದ ತನಿಖೆಯಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com