ಒಲಿಂಪಿಕ್ಸ್ ನಿಂದ ಆಫ್ರಿಕಾ ಹಾಕಿ ತಂಡಗಳು ಹೊರಕ್ಕೆ

ಮುಂದಿನ ವರ್ಷ ನಡೆಯಲಿರುವ ರಿಫಿ ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಅವಕಾಶದಿಂದ ದಕ್ಷಿಣ ಆಫ್ರಿಕಾದ ಪುರುಷರ ಹಾಗೂ ಮಹಿಳೆಯರ ಹಾಕಿ ತಂಡಗಳು ವಂಚಿತವಾಗಿವೆ ಎಂದು ಡಿಎನ್‍ಎ ತಿಳಿಸಿದೆ...
ದಕ್ಷಿಣ ಆಫ್ರಿಕಾ ಹಾಕಿ ತಂಡ (ಸಂಗ್ರಹ ಚಿತ್ರ)
ದಕ್ಷಿಣ ಆಫ್ರಿಕಾ ಹಾಕಿ ತಂಡ (ಸಂಗ್ರಹ ಚಿತ್ರ)

ಕೇಪ್‍ಟೌನ್: ಮುಂದಿನ ವರ್ಷ ನಡೆಯಲಿರುವ ರಿಫಿ ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಅವಕಾಶದಿಂದ ದಕ್ಷಿಣ ಆಫ್ರಿಕಾದ ಪುರುಷರ ಹಾಗೂ ಮಹಿಳೆಯರ ಹಾಕಿ ತಂಡಗಳು  ವಂಚಿತವಾಗಿವೆ ಎಂದು ಡಿಎನ್‍ಎ ತಿಳಿಸಿದೆ.

ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳದಂತೆ, ದಕ್ಷಿಣ ಆಫ್ರಿಕಾ ಕ್ರೀಡಾ ಕಾನಿ#ಡರೇಷನ್ ಹಾಗೂ ಅಲ್ಲಿನ ಒಲಿಂಪಿಕ್ಸ್ ಸಂಸ್ಥೆ (ಎಸ್‍ಎಎಸ್  ಸಿಒಸಿ)ಯು ತನ್ನ ಮೇಲೆ ವಿಧಿಸಿದ್ದ ನಿರ್ಬಂಧದ ವಿರುದ್ಧ  ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ (ಐಒಸಿ)ಯಲ್ಲಿ ದಕ್ಷಿಣ ಆಫ್ರಿಕಾ ಹಾಕಿ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕೃತಗೊಂಡಿದ್ದು, ಈ ಹಿನ್ನೆಲೆಯಲ್ಲಿ, ಉಭಯ ತಂಡಗಳು ಒಲಿಂಪಿಕ್ಸ್ ನಿಂದ  ವಂಚಿತವಾಗಿವೆ.

ದಕ್ಷಿಣ ಆಫ್ರಿಕಾ ಕ್ರಿಕೆಟ್ ಹಾಕಿ ತಂಡಗಳು , ಆಫ್ರಿಕನ್ ಚಾಂಪಿಯನ್‍ಶಿಪ್ ಗೆಲ್ಲುವ ಮೂಲಕ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದವು. ಆದರೆ, ಎಸ್‍ಎಎಸ್ ಸಿಒಸಿಯು ವಿಶ್ವ ಹಾಕಿ  ಲೀಗ್ ಗೆದ್ದರೆ ಮಾತ್ರ ಒಲಿಂಪಿಕ್ಸ್‍ಗೆ ಅರ್ಹತೆ ನೀಡುವುದಾಗಿ ಹೇಳಿತ್ತು. ಆದರೆ, ವಿಶ್ವ ಹಾಕಿ ಲೀಗ್ ನಲ್ಲಿ ಹರಿಣಗಳ ಪಡೆಗಳು ಈ ನಿಟ್ಟಿನಲ್ಲಿ ಯಶಸ್ವಿಯಾಗಲಿಲ್ಲ. ಈ ನಿಟ್ಟಿನಲ್ಲಿ  ಎಸ್‍ಎಎಸ್‍ಸಿಒಸಿ, ಇತ್ತಂಡಗಳಿಗೆ ಒಲಿಂಪಿಕ್ಸ್ ಅರ್ಹತೆ ನೀಡಲಿಲ್ಲ. ಈ ನಿರ್ಧಾರದ ವಿರುದ್ಧ ದಕ್ಷಿಣ ಆಫ್ರಿಕಾ ಹಾಕಿ ಸಂಸ್ಥೆ, ಐಒಸಿ ಮೊರೆ ಹೋಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com