ಕಾಮನ್‌ವೇಲ್ತ್ ಟಿಟಿ: ಭಾರತ ಚಾಂಪಿಯನ್

ಆಕರ್ಷಕ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಭಾರತ ಕಾಮನ್‍ವೆಲ್ತ್ ಚಾಂಪಿಯನ್‍ಶಿಪ್ ಟೂರ್ನಿಯ ಟೇಬಲ್ ಟೆನಿಸ್ ಚಾಂಪಿಯನ್‍ಶಿಪ್‍ನ ಪುರುಷರ ವಿಭಾಗದಲ್ಲಿ...
ಕಾಮನ್‌ವೇಲ್ತ್ ಟಿಟಿ
ಕಾಮನ್‌ವೇಲ್ತ್ ಟಿಟಿ

ನವದೆಹಲಿ: ಆಕರ್ಷಕ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಭಾರತ ಕಾಮನ್‍ವೆಲ್ತ್ ಚಾಂಪಿಯನ್‍ಶಿಪ್ ಟೂರ್ನಿಯ ಟೇಬಲ್ ಟೆನಿಸ್ ಚಾಂಪಿಯನ್‍ಶಿಪ್‍ನ ಪುರುಷರ ವಿಭಾಗದಲ್ಲಿ ಭಾರತ ಚಾಂಪಿಯನ್ ಆಗಿದೆ. ಮಹಿಳೆಯರ ತಂಡ ಬೆಳ್ಳಿ ಪದಕಕ್ಕೆ ತೃಪ್ತವಾಯಿತು. ಶನಿವಾರ ನಡೆದ ಪುರುಷರ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತ ತಂಡ 3-1ರಿಂದ ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ಸ್ವರ್ಣ ಪದಕ ಬಾಚಿಕೊಳ್ಳಲು ಯಶಸ್ವಿಯಾಯಿತು. ನಂತರ ಮಹಿಳೆಯರ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತ ತಂಡ ಸಿಂಗಾಪುರ ವಿರುದ್ಧ 1-3 ಅಂತರದಿಂದ ಪರಾಭವಗೊಂಡಿತು. ಈ ಫಲಿತಾಂಶ ದೊಂದಿಗೆ ಕಾಮನ್‍ವೆಲ್ತ್ ಚಾಂಪಿಯನ್ ಶಿಪ್‍ನಲ್ಲಿ ಭಾರತ ಸುದೀರ್ಘ 11 ವರ್ಷ ಗಳ ನಂತರ ಪದಕ ಪಡೆದುಕೊಂಡಿದೆ. ಭಾರತ ಪುರುಷರ ತಂಡ ಈವರೆಗೆ ನಡೆದಿರುವ 20 ಆವೃತ್ತಿಗಳ ಪೈಕಿ 2ನೇ ಬಾರಿ ಚಿನ್ನದ ಪದಕ ಸಾಧನೆ ಮಾಡಿದೆ. ಈ ಹಿಂದೆ ಮಲೇಷ್ಯಾದಲ್ಲಿ 2004ರಲ್ಲಿ ಶರತ್ ಕಮಲ್ ಅವರ ನೇತೃತ್ವದ ತಂಡ ಚಿನ್ನ ಬಾಚಿಕೊಂಡಿತ್ತು. ಈ ಪಂದ್ಯದಲ್ಲಿ ಭಾರತ ಪುರುಷರ ತಂಡ ಪ್ರಮುಖ ಆಟಗಾರ ಶರತ್ ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿತ್ತು. ಹಾಗಾಗಿ ಸೌಮ್ಯಜಿತ್ ಘೋಶ್, ಹರ್ಮೀತ್ ದೇಸಾಯಿ, ಜಿ.ಸೇಥಿಯನ್ ತಂಡದಲ್ಲಿದ್ದರು. ಇನ್ನು ಭಾರತ ವನಿತೆಯರ ತಂಡ ನಾಲ್ಕನೇ ಬಾರಿಗೆ ಬೆಳ್ಳಿ ಪದಕ ಸಂಪಾದಿಸಿದೆ. ಈ ಹಿಂದೆ ಭಾರತ ವನಿತೆಯರ ತಂಡ 1975, 1983, ಮತ್ತು 1991ರ ಆವೃತ್ತಿಗಳಲ್ಲಿ ಬೆಳ್ಳಿ ಪದಕ ಗಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com