ಚೆನ್ನೈಯಿನ್ ಚಾಂಪಿಯನ್

ಪಂದ್ಯದ ಅಂತಿಮ ನಿಮಿಷದಲ್ಲಿ ಸತತ ಎರಡು ಗೋಲು ದಾಖಲಿಸುವಲ್ಲಿ ಯಶಸ್ವಿಯಾದ ಚೆನ್ನೈಯಿನ್ ಎಫ್ ಸಿ ತಂಡ ಎರಡನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ಪ್ರಶಸ್ತಿ..
ಚಾಂಪಿಯನ್ ಚೆನ್ನೈಯಿನ್ ತಂಡ
ಚಾಂಪಿಯನ್ ಚೆನ್ನೈಯಿನ್ ತಂಡ

ಫಾಟೋರ್ಡಾ: ಪಂದ್ಯದ ಅಂತಿಮ ನಿಮಿಷದಲ್ಲಿ ಸತತ ಎರಡು ಗೋಲು ದಾಖಲಿಸುವಲ್ಲಿ ಯಶಸ್ವಿಯಾದ ಚೆನ್ನೈಯಿನ್ ಎಫ್ ಸಿ ತಂಡ ಎರಡನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ಪ್ರಶಸ್ತಿ ಸುತ್ತಿನಲ್ಲಿ ಸೋಲಿನ ಅಂಚಿನಿಂದ ಪಾರಾಗಿ ಕ್ಷಣಾರ್ಧದಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.

ಭಾನುವಾರ ಜವಾಹರ್‍ಲಾಲ್ ನೆಹರು ಕ್ರೀಡಾಂಗಣ ದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಚೆನ್ನೈಯಿನ್ ಎಫ್ ಸಿ ತಂಡ ಎಫ್ ಸಿ ಗೋವಾ ವಿರುದ್ಧ 32 ಗೋಲುಗಳ ಅಂತರ ದ ಜಯ ಸಾಧಿಸಿತು. ಎಫ್ ಸಿ ಗೋವಾ ತಂಡದ ಪರ ಹೌಕಿಪ್ 58ನೇ, ಜೊಫ್ರೆ 87ನೇ ನಿಮಿಷದಲ್ಲಿ ಗೋಲು ದಾಖಲಿಸಿದರೆ, ಚೆನ್ನೈಯಿನ್ ಎಫ್ ಸಿ ಪರ ಪೆಲ್ಲಿಸಾರಿ 54ನೇ, ಕಟ್ಟಿಮಣಿ 90ನೇ ಮತ್ತು ಮೆಂಡೊಜಾ 90ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.

ಗೋಲುರಹಿತ ಮೊದಲ ಅವಧಿ: ಟಾಸ್ ಗೆದ್ದ ಚೆನ್ನೈಯಿನ್ ತಂಡದ ಬೆನಾರ್ಡ್ ಮೆಂಡಿ ಬಲಭಾಗದಿಂದ ಎಡಕ್ಕೆ ದಾಳಿ ಸಂಘಟಿಸಲು ನಿರ್ಧರಿಸಲಾಯಿತು. ಪಂದ್ಯದ ಆರಂಭದಿಂದಲೇ ಉಭಯ  ತಂಡಗಳು ಚೆಂಡಿನ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಲು ಗಮನ ಹರಿಸಿದವು. ಈ ಹಂತದಲ್ಲಿ ಚೆನ್ನೈಯಿನ್ ಎಫ್ ಸಿ ತಂ ಡ ಆಕ್ರಮಣಕಾರಿ ಆಟಕ್ಕೆ ಮುಂದಾಗುವ ಪ್ರಯತ್ನ ನಡೆಸಿತು. ಪಂದ್ಯದ 11ನೇ ನಿಮಿಷದಲ್ಲಿ ಎಫ್ ಸಿ ಗೋವಾ ತಂಡದ ಒಮಗ್ಬೆಮಿ ಡುಡು ಅವರು ಗಾಯಗೊಂಡು ಹೊರ ನಡೆದಿದ್ದು, ಎಫ್ ಸಿ ಗೋವಾಗೆ ಹಿನ್ನಡೆ ತಂದಿತು. ನಂತರ ಪಂದ್ಯದ 18ನೇ ನಿಮಿಷದಲ್ಲಿ ಚೆನ್ನೈಯಿನ್‍ನ ಮೆಹ್ರಜುದ್ದೀನ್ ವಾಡೂ ಹಳದಿ ಕಾರ್ಡ್ ಪಡೆದರು. ಕ್ರಮೇಣವಾಗಿ ಸಂಘಟಿತ ಪ್ರತಿರೋಧ ನೀಡಲು ಎಫ್ ಸಿ ಗೋವಾ ಮುಂದಾಯಿತು. ಈ ಉಭಯ ತಂಡಗಳು ಪಂದ್ಯದ ಮೊದಲಾರ್ಧದಲ್ಲಿ ಯಾವುದೇ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ.

ದ್ವಿತಿಯಾರ್ಧದಲ್ಲಿ ಗೋಲಿನ ಅಬ್ಬರ: ಪಂದ್ಯದ ದ್ವಿತಿಯಾರ್ಧದಲ್ಲಿ ಉಭಯ ತಂಡಗಳು ಆಕ್ರಮಣಕಾರಿ ಆಟಕ್ಕೆ ಮುಂದಾದವು. ಈ ಅವಧಿಯ ಆರಂಭದಲ್ಲಿ ಚೆನ್ನೈಯಿನ್ ಎಫ್ ಸಿ ತಂಡ 54ನೇ ನಿಮಿಷದಲ್ಲಿ ಪೆಲ್ಲಿಸಾರಿ ಅವರ ಗೋಲಿನೊಂದಿಗೆ ಪಂದ್ಯದಲ್ಲಿ ಮುನ್ನಡೆ ಸಾಧಿಸಿತು. ಆದರೆ ಈ ಮುನ್ನಡೆ ಹೆಚ್ಚು ಹೊತ್ತು ಇರಲಿಲ್ಲ. ದ್ವಿತಿಯಾರ್ಧ ದ ಆರಂಭದಲ್ಲಿ ಲಿಯೊ ಮೌರಾ ಅವರ ಬದಲಿ ಆಟಗಾರನಾಗಿ ಕಣಕ್ಕಿಳಿದ ಎಫ್ ಸಿ ಗೋವಾ ತಂಡದ ಹೌಕಿಪ್ 58ನೇ ನಿಮಿಷದಲ್ಲಿ ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಸೇರಿಸುವ ಮೂಲಕ ತಂಡ ಸಮಬಲ ಸಾಧಿಸುವಂತೆ ಮಾಡಿದರು.

ಪಂದ್ಯದ ಅಂತಿಮಹಂತದಲ್ಲಿ 87ನೇ ನಿಮಿಷದಲ್ಲಿ ಎಫ್ ಸಿ ಗೋವಾ ತಂಡದ ಜೋಫ್ರೆ ಗೋಲು ದಾಖಲಿಸಿ, ತಂಡದ ಪಾಳಯದಲ್ಲಿ ಪ್ರಶಸ್ತಿ ಆಸೆಯನ್ನು ಹೆಚ್ಚಿಸಿತು. ಈ ಒತ್ತಡದ ಸಂದರ್ಭದಲ್ಲೂ ಚೆನ್ನೈಯಿನ್ ತಂಡ ತನ್ನ ಹೋರಾಟ ಮಾತ್ರ ನಿಲ್ಲಿಸದೇ ಪ್ರಯತ್ನ ಮುಂದುವರಿಸಿತು. ಪಂದ್ಯದ ಅಂತಿಮ ನಿಮಿಷದಲ್ಲಿ ಕಟ್ಟಿಮಣಿ ಮತ್ತು ಮೆಂಡೊಜಾ ಅವರು ಎರಡು ಗೋಲು ದಾಖಲಿಸಿದ್ದು, ಪಂದ್ಯಕ್ಕೆ ರೋಚಕ ತಿರುವು ನೀಡಿತು. ಪ್ರಶಸ್ತಿ ಆಸೆಯಲ್ಲಿದ್ದ ಗೋವಾ ನಿರಾಸೆ ಅನುಭವಿಸುವಂತಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com