ಒಲಿಂಪಿಕ್ಸ್: ಭಾರತಕ್ಕೆ ಜರ್ಮನಿ ಸವಾಲು

ಎಂಟು ಒಲಿಂಪಿಕ್ ಚಿನ್ನದ ಪದಕ ವಿಜೇತ ಭಾರತ, ಮುಂದಿನ ವರ್ಷ ಬ್ರೆಜಿಲ್‍ನ ರಿಯೋ ಡಿ ಜನೈರೋದಲ್ಲಿ ನಡೆಯಲಿರುವ ಪ್ರತಿಷ್ಠಿತ 2016ರ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ `ಬಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು...
ಭಾರತ ಹಾಕಿ ತಂಡ
ಭಾರತ ಹಾಕಿ ತಂಡ

ಲೌಸಾನೆ: ಎಂಟು ಒಲಿಂಪಿಕ್ ಚಿನ್ನದ ಪದಕ ವಿಜೇತ ಭಾರತ, ಮುಂದಿನ ವರ್ಷ ಬ್ರೆಜಿಲ್‍ನ ರಿಯೋ ಡಿ ಜನೈರೋದಲ್ಲಿ ನಡೆಯಲಿರುವ ಪ್ರತಿಷ್ಠಿತ 2016ರ ರಿಯೋ ಒಲಿಂಪಿಕ್ಸ್  ಕ್ರೀಡಾಕೂಟದಲ್ಲಿ `ಬಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಹಾಲಿ ಚಾಂಪಿಯನ್ ಜರ್ಮನಿ ಮತ್ತು ವಿಶ್ವದ 2ನೇ ಶ್ರೇಯಾಂಕಿತ ಹಾಲೆಂಡ್ ತಂಡದ ಸವಾಲನ್ನು ಎದುರಿಸಬೇಕಿದೆ.

ಜರ್ಮನಿ ಹಾಗೂ ಹಾಲೆಂಡ್‍ಗಳಲ್ಲದೆ ಅರ್ಜೆಂಟೀನಾ (6ನೇ ಶ್ರೇಯಾಂಕ) , ಐರ್ಲೆಂಡ್ (12), ಹಾಗೂ ವಿಶ್ವದ 14ನೇ ಶ್ರೇಯಾಂಕಿತ ಕೆನಡಾ ತಂಡಗಳೂ ಕೂಡ ಇದೇ ಬಿ ಗುಂಪಿನಲ್ಲಿ ಸ್ಥಾನ  ಪಡೆದಿವೆ. ಇತ್ತ `ಎ' ಗುಂಪಿನಲ್ಲಿ ಹಾಲಿ ವಿಶ್ವ ಹಾಗೂ ಹಾಕಿ ವಿಶ್ವ ಲೀಗ್ ಚಾಂಪಿಯನ್ ತಂಡವಾದ ಆಸ್ಟ್ರೇಲಿಯಾ, ಗ್ರೇಟ್ ಬ್ರಿಟನ್ (4ನೇ ಶ್ರೇಯಾಂಕ), 2015ರ ಹಾಕಿ ವಿಶ್ವ ಲೀಗ್ ರನ್ನರ್ ಅಪ್  ಬೆಲ್ಜಿಯಂ (5ನೇ ಶ್ರೇಯಾಂಕ), ನ್ಯೂಜಿಲೆಂಡ್ (8ನೇ ಶ್ರೇಯಾಂಕ), ಸ್ಪೇನ್ (11ನೇ ಶ್ರೇಯಾಂಕ) ಮತ್ತು ಆತಿಥೇಯ ಬ್ರೆಜಿಲ್ (32ನೇ ಶ್ರೇಯಾಂಕ) ಸ್ಥಾನಗಳಿಸಿವೆ.

ಹೊಸ ನಿಯಮಾವಳಿಯ ಪ್ರಕಾರ ಟೂರ್ನಿಯು ನಡೆಯಲಿದ್ದು, ಏಷ್ಯನ್ ಗೇಮ್ಸ್ ಚಾಂಪಿಯನ್ ಭಾರತ ಅಂತಿಮ ಎಂಟರ ಹಂತಕ್ಕೆ ಅರ್ಹತೆ ಪಡೆಯಲು ನಾಕೌಟ್ ಕ್ವಾರ್ಟರ್ಫೈನಲ್ ಸುತ್ತಿನಲ್ಲಿ  ತನಗಿಂತ ಕೆಳ ಕ್ರಮಾಂಕಿತ ಐರ್ಲೆಂಡ್ ವಿರುದ್ಧ ಗೆಲುವು ಸಾಧಿಸಿದರೂ ಸಾಕಾಗಿದೆ.

ವನಿತೆಯರಿಗೆ ಕಡೇ ಸ್ಥಾನ: ಇತ್ತ ಮಹಿಳೆಯರ ವಿಭಾಗದಲ್ಲಿ ಕಡೆಯ ಶ್ರೇಯಾಂಕ ಪಡೆದಿರುವ ಭಾರತ ವನಿತಾ ತಂಡ `ಬಿ' ಗುಂಪಿನಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com