ಚೈನೀಸ್ ಸೂಪರ್ ಲೀಗ್ ಫ್ರಾಂಚೈಸಿಯಾದ ಬೀಜಿಂಗ್ ಗವಾನ್ ತಂಡಕ್ಕೆ ಇಟಲಿಯ ಲೂಸಿಯಾನೊ ಸ್ಟಾಲೆಟ್ಟಿಯನ್ನು ಭಾರಿ ಮೊತ್ತದ ಸಂಭಾವನೆಯ ಒಪ್ಪಂದದೊಂದಿಗೆ ಕೋಚ್ ಆಗಿ ನೇಮಿಸಲಾಗಿದೆ.
ಎರಡು ವರ್ಷಗಳ ಈ ಒಪ್ಪಂದದ ಪ್ರಕಾರ, ಲೂಸಿಯಾನೊ ಅವರಿಗೆ ಪ್ರತಿ ವರ್ಷ 43 ಕೋಟಿ ನೀಡಲು ಬೀಜಿಂಗ್ ಗವಾನ್ ಆಡಳಿತ ಮಂಡಳಿ ಒಪ್ಪಿದೆ. ಇದು ಚೀನಾದ ಯಾವುದೇ ಫುಟ್ಬಾಲ್ ತಂಡದ ಕೋಚ್ ಗೆ ನೀಡಲಾಗಿರುವ ಅತಿ ದೊಡ್ಡ ಸಂಭಾವನೆ ಎನ್ನಲಾಗಿದೆ.