ಬಿಸಿಸಿಐ ಮೂಲಕ್ಕೆ ಲೋಧಾ ಪೆಟ್ಟು?

ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ)ನ ಆಡಳಿತ ಸುಧಾರಣೆಗೆ ಶಿಫಾರಸು ನೀಡಲು ಸುಪ್ರೀಂ ಕೋರ್ಟ್ ನೇಮಿಸಿರುವ ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ...
ಆರ್.ಎಂ ಲೋಧಾ
ಆರ್.ಎಂ ಲೋಧಾ

ನವದೆಹಲಿ: ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ)ನ ಆಡಳಿತ ಸುಧಾರಣೆಗೆ ಶಿಫಾರಸು ನೀಡಲು ಸುಪ್ರೀಂ ಕೋರ್ಟ್ ನೇಮಿಸಿರುವ ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ಸಮಿತಿ ಜನವರಿ 4ರಂದು ಸುಪ್ರೀಂ ಕೋರ್ಟ್‍ಗೆ ತನ್ನ ವರದಿ ಸಲ್ಲಿಸಲಿದೆ.

ಮೂಲಗಳ ಪ್ರಕಾರ, ಬಿಸಿಸಿಐ ಆಡಳಿತದಲ್ಲಿ ಆಮೂಲಾಗ್ರ ಬದಲಾವಣೆ ತರಲು ಲೋಧಾ ಸಮಿತಿ ನಿರ್ಧರಿಸಿದ್ದು, ವರದಿಯಲ್ಲಿ ರಾಜಕೀಯ ನೇತಾರರು ಹಾಗೂ ಉದ್ಯಮಿಗಳನ್ನು ಬಿಸಿಸಿಐನಿಂದ ದೂರವಿಡಬೇಕು ಎಂಬ ವಿಚಾರ ಸೇರಿದಂತೆ ಅನೇಕ ಮಹತ್ವದ ಬದಲಾವಣೆಗಳನ್ನು ಅದು ಉಲ್ಲೇಖಿಸಿದೆ. ಇದಲ್ಲದೆ, ಬಿಸಿಸಿಐನ ಆಡಳಿತ, ಸ್ವರೂಪ ಹಾಗೂ ಕಾರ್ಯಶೈಲಿ ಸೇರಿದಂತೆ ಸಂಸ್ಥೆಯ ಪ್ರತಿ ಆಯಾಮದ ಕುರಿತಂತೆ ಅಧ್ಯಯನ ನಡೆಸಿದೆ.

ಮೂಲಕ್ಕೇ ಕೈ ಹಾಕಿದ ಲೋಧಾ: 1928ರಲ್ಲಿ ಬಿಸಿಸಿಐ, 'ನೋಂದಣಿಯಾಗದ ವ್ಯಕ್ತಿಗಳ ಸಂಸ್ಥೆ'ಯ ರೂಪದಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಆನಂತರ, 1975ರಲ್ಲಿ ತಮಿಳುನಾಡು ಸೊಸೈಟೀಸ್ ರಿಜಿಸ್ಟ್ರೇಷನ್ ಆ್ಯಕ್ಟ್‍ನ ಅಡಿಯಲ್ಲಿ ನೋಂದಾಯಿಸಲ್ಪಟ್ಟಿತ್ತು. ಈ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸುವಂತೆ ಲೋಧಾ ವರದಿಯಲ್ಲಿ ಆಗ್ರಹಿಸಿದ್ದಾರೆನ್ನಲಾಗಿದೆ.

ಈ ನೋಂದಾವಣೆ ಮಾದರಿ ಬದಲಿಸಿ, ಆ ಮೂಲಕ ಬಿಸಿಸಿಐಯನ್ನು ಸಾರ್ವಜನಿಕ ಸಂಸ್ಥೆ ಯನ್ನಾಗಿ ಪರಿವರ್ತಿಸಿ, ಪಾರದರ್ಶಕತೆ ಹಾಗೂ ಸಾರ್ವಜನಿಕ ಅವಲೋಕನದ ಮೇಲೆ ಕಾರ್ಯ ನಿರ್ವಹಿಸುವಂತೆ ಮಾಡಲು ಶಿಫಾರಸ್ಸು ಮಾಡ ಲಾಗಿದೆ. ಲೋಧಾ ಸಮಿತಿಯು ಈ ಅಧ್ಯಯನ ನಡೆಸುವ ಸಂದರ್ಭದಲ್ಲಿ ಹಾಲಿ ಕ್ರಿಕೆಟಿಗರು, ಮಾಜಿ ಕ್ರಿಕೆಟಿಗರು, ಕಾನೂನು ತಜ್ಞರು ಸೇರಿದಂತೆ ಪ್ರಮುಖರ ಸಲಹೆ ಪಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com