ವಿಜಯ್ ಹಜಾರೆ ಟ್ರೋಫಿ: ಪಟೇಲಗಿರಿಗೆ ದಿಲ್ಲಿ ಶರಣು

ಬ್ಯಾಟಿಂಗ್ ಹಾಗೂ ಬೌಲಿಂಗ್ ಈ ಎರಡೂ ವಿಭಾಗಗಳಲ್ಲಿ ಸಮರ್ಥನೀಯ ಪ್ರದರ್ಶನ ನೀಡಿದ ಗುಜರಾತ್, ಈ ಋತುವಿನ ಪ್ರತಿಷ್ಠಿತ ವಿಜಯ್ ಹಜಾರೆ ಟ್ರೋಫಿ...
ಗುಜರಾತ್ ತಂಡ
ಗುಜರಾತ್ ತಂಡ

ಬೆಂಗಳೂರು: ಬ್ಯಾಟಿಂಗ್ ಹಾಗೂ ಬೌಲಿಂಗ್ ಈ ಎರಡೂ ವಿಭಾಗಗಳಲ್ಲಿ ಸಮರ್ಥನೀಯ ಪ್ರದರ್ಶನ ನೀಡಿದ ಗುಜರಾತ್, ಈ ಋತುವಿನ ಪ್ರತಿಷ್ಠಿತ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯ ಫೈನಲ್‍ನಲ್ಲಿ ದೆಹಲಿ ತಂಡವನ್ನು 139 ರನ್‍ಗಳಿಂದ ಮಣಿಸಿ ಮೊದಲ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿತು.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪ್ರಶಸ್ತಿ ಸುತ್ತಿನ ಹೊನಲು ಬೆಳಕಿನ ಪಂದ್ಯದಲ್ಲಿ ಗೆಲ್ಲಲು 274 ರನ್ ಗುರಿ ಪಡೆದಿದ್ದ ಗೌತಮ್ ಗಂಭೀರ್ ಸಾರಥ್ಯದ ದೆಹಲಿ, 32.3 ಓವರ್‍ಗಳಲ್ಲಿ 134 ರನ್ ಗಳಿಗೆ ಸರ್ವಪತನ ಕಂಡಿತು.

ನಾಯಕ ಪಾರ್ಥಿವ್ ಪಟೇಲ್ (105: 119 ಎಸೆತ, 10 ಬೌಂಡರಿ) ಅವರ ಶತಕದ ಜತೆಗೆ ರುಜುಲ್ ಭಟ್ (60) ದಾಖಲಿಸಿದ ಅರ್ಧಶತಕ ಹಾಗೂ ಆರ್.ಪಿ. ಸಿಂಗ್ (42ಕ್ಕೆ 4) ಮತ್ತು ಜಸ್ಪ್ರೀತ್ ಬುಮಾ್ರ (28ಕ್ಕೆ 5) ತೋರಿದ ಕರಾರುವಾಕ್ ಬೌಲಿಂಗ್‍ಗೆ ಬಸವಳಿದ ದೆಹಲಿ ರನ್ನರ್‍ಅಪ್ ಸ್ಥಾನಕ್ಕೆ ತೃಪ್ತವಾಯಿತು. ಮನೋಜ್ಞ ಶತಕ ದಾಖಲಿಸಿ ತಂಡದ ಮೊತ್ತವನ್ನು ಸ್ಪರ್ಧಾತ್ಮಕವಾಗಿಸಿ ದ ಪಾರ್ಥಿವ್ ಪಟೇಲ್ ಹಾಗೂ ಆರಂಭದಲ್ಲೇ ದೆಹಲಿ ಬ್ಯಾಟಿಂಗ್ ಬೆನ್ನೆಲುಬು ಮುರಿದ ಆರ್.ಪಿ. ಸಿಂಗ್ ಜಂಟಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪುರಸ್ಕೃತರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com