ಬಿಎಫ್ ಸಿ ಗೆ ಭರ್ಜರಿ ಜಯ

ತಂಡದ ಪ್ರಮುಖ ಆಟಗಾರರಾದ ಬೈಕೋಕಿ ಬೆಂಗೈಚೋ ಸಿಯಾಮ್ ಹಾಂಗಲ್ ಅವರ ಆಕರ್ಷಕ ಪ್ರದರ್ಶನದ ನೆರವಿನಿಂದ ಬೆಂಗಳೂರು ಎಫ್ ಸಿ, ಬಿಡಿ ಎಫ್ಎ ಸೂಪರ್ ಡಿವಿಷನ್ ಫುಟ್ಬಾಲ್ ಟೂರ್ನಿಯಲ್ಲಿ ಮತ್ತೊಂದು ಭರ್ಜರಿ ಜಯ ಸಾಧಿಸಿದೆ.
ಬಿಎಫ್ ಸಿ ಗೆ ಭರ್ಜರಿ ಜಯ
ಬಿಎಫ್ ಸಿ ಗೆ ಭರ್ಜರಿ ಜಯ
Updated on

ಬೆಂಗಳೂರು: ತಂಡದ  ಪ್ರಮುಖ ಆಟಗಾರರಾದ ಬೈಕೋಕಿ ಬೆಂಗೈಚೋ ಸಿಯಾಮ್ ಹಾಂಗಲ್ ಅವರ ಆಕರ್ಷಕ ಪ್ರದರ್ಶನದ ನೆರವಿನಿಂದ ಬೆಂಗಳೂರು ಎಫ್ ಸಿ, ಬಿಡಿ ಎಫ್ಎ ಸೂಪರ್ ಡಿವಿಷನ್ ಫುಟ್ಬಾಲ್ ಟೂರ್ನಿಯಲ್ಲಿ ಮತ್ತೊಂದು ಭರ್ಜರಿ ಜಯ ಸಾಧಿಸಿದೆ.
ಬುಧವಾರ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ ತಂಡ ಎಂಇಜಿ ವಿರುದ್ಧ  6-1 ಗೋಲುಗಳಿಂದ ಜಯಭೇರಿ ಬಾರಿಸಿತು. ಆ ಮೂಲಕ ಆಡಿರುವ ಮೂರು ಪಂದ್ಯಗಳಿಂದ 18 ಗೋಲು ದಾಖಲಿಸಿದ್ದು, ತನ್ನ ಅಜೇಯ ಯಾತ್ರೆ ಮುಂದುವರಿಸಿದೆ. ಪಂದ್ಯದಲ್ಲಿ ಬೆಂಗಳೂರು ಎಫ್ ಸಿ ಪರ ಕಿಮ್  (3 ನಿ.), ಸಿಯಾಮ್  ಹಾಂಗಲ್ (21, 40 ನೇನಿ.), ಆಲ್ವಿನ್ 50ನೇ ಹಾಗೂ ಬೈಕೊಕಿ ಬೆಂಗೈಚೊ 54 ಮತ್ತು 68ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಎಂಇಜಿ ತಂಡದ ಪರ ಅಜಿರಾಜ್ 90ನೇ ನಿಮಿಷದಲ್ಲಿ ಗೋಲು ಹೊಡೆದರು. ಪಂದ್ಯದ ಆರಂಭದಲ್ಲೇ ಕಿಮ್ ಅವರ ಗೋಲಿನಿಂದ ಶುಭಾರಂಭ ಮಾಡಿದ ಬಿಎಫ್ ಸಿ, ಪಂದ್ಯದುದ್ದಕ್ಕೂ ತನ್ನ ಬಿಗಿ ಹಿಡಿತ ಸಾಧಿಸಿ ಜಯಭೇರಿ ಮೊಳಗಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com