ಸ್ಪಾಟ್ ಫಿಕ್ಸಿಂಗ್ ಶಿಕ್ಷೆ ಬಳಿಕ ಪಾಕ್ ತಂಡ ಸೇರಿದ ಮೊಹಮ್ಮದ್ ಅಮೀರ್

ಸ್ಪಾಟ್ ಫಿಕ್ಸಿಂಗ್ ನಿಂದಾಗಿ ಐದು ವರ್ಷ ನಿಷೇಧ ಹಾಗೂ ಮೂರು ತಿಂಗಳ ಶಿಕ್ಷೆ ಬಳಿಕ ಪಾಕಿಸ್ತಾನ ವೇಗಿ ಮೊಹಮ್ಮದ್ ಅಮೀರ್ ಪಾಕ್ ಕ್ರಿಕೆಟ್ ತಂಡವನ್ನು...
ಮೊಹಮ್ಮದ್ ಅಮೀರ್
ಮೊಹಮ್ಮದ್ ಅಮೀರ್

ಲಾಹೋರ್: ಸ್ಪಾಟ್ ಫಿಕ್ಸಿಂಗ್ ನಿಂದಾಗಿ ಐದು ವರ್ಷ ನಿಷೇಧ ಹಾಗೂ ಮೂರು ತಿಂಗಳ ಶಿಕ್ಷೆ ಬಳಿಕ ಪಾಕಿಸ್ತಾನ ವೇಗಿ ಮೊಹಮ್ಮದ್ ಅಮೀರ್ ಪಾಕ್ ಕ್ರಿಕೆಟ್ ತಂಡವನ್ನು ಸೇರಿಕೊಂಡಿದ್ದಾರೆ.

2010ರಲ್ಲಿ ಲಾಡ್ಸ್ ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸತತ ನೋಬಾಲ್ ಎಸೆಯುವ ಮೂಲಕ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದರು. ಇದೇ ಸರಣಿಯಲ್ಲಿ ಅಂದಿನ ಪಾಕ್ ನಾಯಕ ಸಲ್ಮಾನ್ ಭಟ್ ಹಾಗೂ ಸಹ ಬೌಲರ್ ಮಹಮ್ಮದ್ ಆಸೀಫ್ ಕೂಡ ಸ್ಪಾಟ್ ಫಿಕ್ಸಿಂಗ್ ಆರೋಪದಡಿ ಶಿಕ್ಷೆಗೆ ಗುರಿಯಾಗಿದ್ದರು. ಇದೀಗ ಮೊಹಮ್ಮದ್ ಅಮೀರ್ ತಮ್ಮ ಶಿಕ್ಷೆ ಮುಗಿಸಿದ್ದು ಶುಕ್ರವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಮುಂಬರುವ ನ್ಯೂಜಿಲೆಂಡ್ ಸರಣಿಗೆ ಆಯ್ಕೆಯಾಗಿದ್ದಾರೆ.

ಪಾಕ್ ನ ತಂಡದ ಪ್ರಮುಖ ವೇಗಿಯಾಗಿದ್ದ ಮೊಹಮ್ಮದ್ ಅಮೀರ್ 14 ಟೆಸ್ಟ್ ಪಂದ್ಯದಲ್ಲಿ 51 ವಿಕೆಟ್, 15 ಎಕದಿನ ಪಂದ್ಯದಲ್ಲಿ 25 ವಿಕೆಟ್ ಕಬಳಿಸಿದ್ದರು. ಆಡಿರುವ 18 ಟಿ20 ಪಂದ್ಯದಲ್ಲಿ 23 ವಿಕೆಟ್ ಪಡೆದಿದ್ದರು.

ಮೊಹಮ್ಮದ್ ಅಮೀರ್ ವೀಸಾ ಕುರಿತು ಇದೀಗ ಚರ್ಚೆಗಳು ನಡೆಯುತ್ತಿದ್ದು, ಅಮೀರ್ ಶಿಕ್ಷೆಯನ್ನು ಪೂರ್ತಿಗೊಳಿಸಿದ್ದಾರೆ. ಇದೀಗ ಅವರ ಮೇಲೆ ಯಾವುದೇ ಆರೋಪವಿಲ್ಲ ಆದ್ದರಿಂದ ವೀಸಾ ನೀಡುವುದಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಮುಖ್ಯ ಆಯ್ಕೆಗಾರ ರಷೀದ್ ಪ್ರತಿಕ್ರಿಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com