
ನವದೆಹಲಿ: ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಡೆಲ್ಲಿ ವೇವ್‍ರೈಡರ್ಸ್ ತಂಡ ಹಾಕಿ ಇಂಡಿಯಾ ಲೀಗ್ ಟೂರ್ನಿಯಲ್ಲಿ ದಬಾಂಗ್ ಮುಂಬೈ ವಿರುದ್ಧ ಅರ್ಹ ಗೆಲವು ದಾಖಲಿಸಿದೆ.
ಭಾನುವಾರ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ವೇವ್‍ರೈಡರ್ಸ್ ತಮ್ಮ ಎದುರಾಳಿ ದಬಾಂಗ್ ಮುಂಬೈ ವಿರುದ್ಧ 3-1 ಗೋಲುಗಳ ಅಂತರದಿಂದ ಗೆಲವು ದಾಖಲಿಸಿತು. ಈ ಗೆಲವಿನೊಂದಿಗೆ ಡೆಲ್ಲಿ ತಂಡ ಟೂರ್ನಿಯಲ್ಲಿ ಮೊದಲ ಗೆಲವು ದಾಖಲಿಸಿದೆ. ಅಲ್ಲದೆ ಅಂಕಪಟ್ಟಿಯಲ್ಲಿ 10 ಅಂಕಗಳನ್ನು ಸಂಪಾದಿಸುವ ಮೂಲಕ ನಾಲ್ಕನೇ ಸ್ಥಾನ ಪಡೆದಿದೆ.
ಡೆಲ್ಲಿ ತಂಡದ ಪರ ಸಿಮೊನ್ ಚಿಲ್ಡ್, ಲಾಯ್ಡ್ ನೊರಿಸ್ ಜೋನ್ಸ್, ಆಕಾಶ್ ದೀಪ್ ಸಿಂಗ್ ಗೋಲು ದಾಖಲಿಸಿದರೆ, ದಬಾಂಗ್ ಮುಂಬೈ ತಂಡದ ಪರ ಅರ್ಜುನ್ ಹಾಲಪ್ಪ ಗೋಲು
ದಾಖಲಿಸಿದರು. ಪಂದ್ಯದ ಆರಂಭದಿಂದ ಅಂತ್ಯದವರೆಗೆ ಡೆಲ್ಲಿ ಬಿಗಿ ಹಿಡಿತ ಸಾ„ಸಿ ಪಂದ್ಯದಲ್ಲಿ ಸುಲಭ ಗೆಲವು ದಾಖಲಿಸಿತು.
Advertisement