ವಿಶ್ವಕಪ್ ತಂಡಕ್ಕೆ ಪರಿಗಣಿಸದೇ ಇರುವ ಬಗ್ಗೆ ಬೇಸರವಿದೆ

2011ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆಲುವಿನಲ್ಲಿ ಪ್ರಧಾನ ಪಾತ್ರವಹಿಸಿದ್ದ ಯುವರಾಜ್ ಸಿಂಗ್ ಮತ್ತು ಗೌತಮ್ ಗಂಭೀರ್ ಈ ಬಾರಿಯ...
ಯುವರಾಜ್ ಸಿಂಗ್ ಮತ್ತು ಗೌತಮ್ ಗಂಭೀರ್
ಯುವರಾಜ್ ಸಿಂಗ್ ಮತ್ತು ಗೌತಮ್ ಗಂಭೀರ್
Updated on

2011ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆಲುವಿನಲ್ಲಿ ಪ್ರಧಾನ ಪಾತ್ರವಹಿಸಿದ್ದ ಯುವರಾಜ್ ಸಿಂಗ್ ಮತ್ತು ಗೌತಮ್ ಗಂಭೀರ್ ಈ ಬಾರಿಯ ವಿಶ್ವಕಪ್ ತಂಡದಲ್ಲಿಲ್ಲ. ಯುವರಾಜ್ ಮತ್ತು ಗಂಭೀರ್‌ನ್ನು ವಿಶ್ವಕಪ್ ತಂಡಕ್ಕೆ ಪರಿಗಣಿಸದೇ ಇರುವ ಬಗ್ಗೆ ಸಾಕಷ್ಟುಗಳು ಟೀಕೆ ವಿಮರ್ಶೆಗಳು  ಕೇಳಿಬಂದಿದ್ದವು. ಯುವರಾಜ್, ಗಂಭೀರ್‌ನಂತೆ ಅನುಭವೀ ಆಟಗಾರರಾದ ಹರ್ಭಜನ್ ಸಿಂಗ್, ವಿರೇಂದರ್ ಸೆಹ್ವಾಗ್, ಜಹೀರ್ ಖಾನ್, ಆಶಿಶ್ ನೆಹ್ರಾ ಮತ್ತು ಮುನಾಫ್ ಪಾಟೀಲ್‌ರನ್ನು ಕೈ ಬಿಟ್ಟಿರುವುದು ಕ್ರಿಕೆಟ್ ಪ್ರೇಮಿಗಳಲ್ಲಿ ಅಸಮಾಧಾನವನ್ನುಂಟು ಮಾಡಿತ್ತು.

ಆದರೆ ಇದೀಗ ಯುವರಾಜ್ ಸಿಂಗ್ ಮತ್ತು ಗೌತಂ ಗಂಭೀರ್ ವಿಶ್ವಕಪ್ ತಂಡಕ್ಕೆ ತಮ್ಮನ್ನು ಪರಿಗಣಿಸದೇ ಇರುವ ಬಗ್ಗೆ ಬೇಸರವನ್ನು ಹೇಳಿಕೊಂಡಿದ್ದಾರೆ.

"ನನ್ನನ್ನು ವಿಶ್ವಕಪ್ ತಂಡದಿಂದ ಕೈ ಬಿಟ್ಟಿರುವುದು ತುಂಬಾನೇ ಬೇಸರವಾಗಿದೆ. ಆದರನೇನು ಮಾಡುವುದು ಆ ನಿರ್ಧಾರ ಅವರಿಗೆ ಬಿಟ್ಟಿದ್ದು. ನಾನೀಗ ರಣಜಿ ಟ್ರೋಫಿಯತ್ತ ಗಮನ ಹರಿಸಿದ್ದು, ಮತ್ತೆ ಉತ್ತಮ ಫಾರ್ಮ್‌ನಲ್ಲಿ ಮರಳಲು ಪ್ರಯತ್ನಿಸುತ್ತಿದ್ದೇನೆ ''ಎಂದು ಯುವಿ ಹೇಳಿದ್ದಾರೆ.

ಆರಂಭಿಕ ದಾಂಡಿಗ ಗೌತಂ ಗಂಭೀರ್‌ನದ್ದು ಕೂಡಾ ಇದೇ ಮಾತು. ನಾನು ಹೆಚ್ಚು ರನ್‌ಗಳನ್ನು ಸ್ಕೋರ್ ಮಾಡುವ ಮೂಲಕ ಪಂದ್ಯಗಳನ್ನು ಗೆಲ್ಲಲು ಬಯಸುತ್ತೇನೆ. ಭಾರತದ ಪರವಾಗಿ ಆಡಿ ಗೆಲುವು ಸಾಧಿಸಬೇಕೆಂಬ ಬಯಕೆ ನನ್ನಲ್ಲಿದೆ. ಅದು ನನ್ನ ಡೆಲ್ಲಿ ಟೀಂ ಆಗಿರಲಿ ಅಥವಾ ಟ್ವೆಂಟಿ-20 ಮ್ಯಾಚ್‌ಗಳೇ ಆಗಿರಲಿ ನಾನು ಆಡಲು ಉತ್ಸುಕನಾಗಿದ್ದೇನೆ.

ನಾನು ವಿಶ್ವಕಪ್ ತಂಡದಲ್ಲಿ ಇಲ್ಲ ಎಂಬುದು ನನಗೆ ತುಂಬಾ ಬೇಸರ ತಂದಿದೆ. ನಾವು ಹಾಲಿ ಚಾಂಪಿಯನ್‌ಗಳು ಈ ಬಗ್ಗೆ ಹೆಮ್ಮೆ ಪಡುತ್ತೇವೆ. ನಾನು ಈ ವಿಶ್ವಕಪ್ ಟೀಂನಲ್ಲಿರಬೇಕೇಂದು ಬಯಸಿದ್ದೆ ಎಂದು ಗಂಭೀರ್ ಮನಸ್ಸಿನ ಮಾತು ಹೇಳಿದ್ದಾರೆ.

ಕಳೆದ ಸಲ ವಿಶ್ವಕಪ್ ಗೆಲುವಿಗೆ ಕಾರಣರಾದ ಯುವಿ ಮತ್ತು ಗಂಭೀರ್‌ಗೆ ವಿಶ್ವಕಪ್ ತಂಡದಲ್ಲಿ ಒಂದು ಅವಕಾಶ ಕೊಡಬೇಕಿತ್ತು ಎಂದು ಕ್ರಿಕೆಟ್ ಪ್ರೇಮಿಗಳ ಅಂಬೋಣ. ಆದರೇನು ಯುವ ಪಡೆಗೆ ಆದ್ಯತೆ ನೀಡುವಲ್ಲಿ ಟೀಂ ಇಂಡಿಯಾ ನಾಯಕ ಗಮನ ಹರಿಸಿರುವಾಗ ಎಷ್ಟೇ ಅನುಭವಿ ಆಟಗಾರರಾದರೂ ಹಿಂದೆ ಸರಿಯಲೇ ಬೇಕಲ್ಲವೇ?

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com